ದ.ರಾ.ಬೇಂದ್ರೆ
1. ದ.ರಾ.ಬೇಂದ್ರೆಯವರ ಜನ್ಮದಿನ ಯಾವುದು?
1) 31 ಜನವರಿ 1896 2) 31 ಮಾರ್ಚಿ 1896 3) 31 ಡಿಸೆಂಬರ್ 1896
2. ದ.ರಾ.ಬೇಂದ್ರೆ ಅವರ ತಂದೆಯ ಹೆಸರೇನು?
1) ಚಂದ್ರಶೇಖರ ಬೇಂದ್ರೆ. 2) ಪೂರ್ಣಚಂದ್ರ ಬೇಂದ್ರೆ. 3) ರಾಮಚಂದ್ರ ಬೇಂದ್ರೆ
3. ದ.ರಾ.ಬೇಂದ್ರೆ ಅವರ ತಾಯಿಯ ಹೆಸರೇನು?
1) ನಿಂಗವ್ವ. 2) ಅಂಬವ್ವ. 3) ಸೀತಮ್ಮ
4. ದ.ರಾ.ಬೇಂದ್ರೆ ಅವರು ಜನಿಸಿದ ಸ್ಥಳ ಯಾವುದು?
1) ಹುಬ್ಬಳ್ಳಿ. 2) ಗದಗ. 3) ಧಾರವಾಡ
5. ದ.ರಾ.ಬೇಂದ್ರೆ ಅವರು ಎಂ.ಎ.ಪದವಿಯನ್ನು ಪಡೆದ ವಿಶ್ವ ವಿದ್ಯಾಲಯ ಯಾವುದು?
1) ಮುಂಬಯಿ. 2) ಮೈಸೂರು. 3) ಬೆಂಗಳೂರು
6. ದ.ರಾ.ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಯಾವುದು?
1) ಅರಳು ಮರಳು. 2) ಸಖೀಗೀತ. 3) ನಾಕುತಂತಿ
7. ದ.ರಾ.ಬೇಂದ್ರೆ ಅವರ ಧರ್ಮ ಪತ್ನಿಯ ಹೆಸರೇನು?
1) ರಮಾದೇವಿ. 2) ಲಕ್ಷ್ಮೀದೇವಿ. 3) ಸರಸ್ವತೀದೇವಿ
8. ದ.ರಾ.ಬೇಂದ್ರೆ ಅವರ ಮೊದಲ ಕಾವ್ಯ ಸಂಕಲನ ಯಾವುದು?
1) ಕೃಷ್ಣಕುಮಾರಿ. 2) ಗರಿ. 3) ನಾದಲೀಲೆ
9. ದ.ರಾ.ಬೇಂದ್ರೆ ಅವರ ಮೊದಲ ಕವನ ಪ್ರಕಟವಾಗಿದ್ದು ಯಾವ ಪತ್ರಿಕೆಯಲ್ಲಿ?
1) ಶುಭೋದಯ. 2) ಸುಪ್ರಭಾತ. 3) ಪ್ರಭಾತ
10. ಬ್ರಿಟೀಷರ ಕೆಂಗಣ್ಣಿಗೆ ಕಾರಣವಾದ ದ.ರಾ.ಬೇಂದ್ರೆ ಅವರ ಗರಿ ಕೃತಿಯಲ್ಲಿನ ಕವನ ಯಾವುದು?
1) ನರಬಲಿ. 2) ಕುರಿಬಲಿ. 3) ಪ್ರಾಣಿಬಲಿ
11. ದ.ರಾ.ಬೇಂದ್ರೆ ಅವರ ಜನಪ್ರಿಯ ಗೀತೆ ” ನೀ ಹೀಂಗ ನೋಡಬ್ಯಾಡ…” ಬಳಕೆಯಾಗಿರುವ ಚಲನಚಿತ್ರ ಯಾವುದು?
1) ಪ್ರೇಮಾನುಬಂಧ. 2) ಪ್ರೇಮ ತರಂಗ. 3) ಪ್ರೇಮ ತಪಸ್ವಿ
12. ದ.ರಾ.ಬೇಂದ್ರೆ ಅವರ ” ಇಳಿದು ಬಾ… ತಾಯಿ ಇಳಿದು ಬಾ…. ಕವನವನ್ನು ಒಳಗೊಂಡ ಚಲನಚಿತ್ರ ಯಾವುದು?
1) ಕಾವೇರಿ ತೀರದಲ್ಲಿ. 2) ಅರಿಶಿನ ಕುಂಕುಮ. 3) ಶರಪಂಜರ
13. ದ.ರಾ.ಬೇಂದ್ರೆ ಅವರ “ಸರಸವೇ ಜನನ, ವಿರಸವೇ ಮರಣ, ____ ವೇ ಜೀವನ” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1) ರಾಮರಸ. 2) ಸೋಮರಸ. 3) ಸಮರಸ
14. ದ.ರಾ.ಬೇಂದ್ರೆ ಅವರನ್ನು ಏನೆಂದು ಕರೆಯಲಾಗುತ್ತದೆ.?
1) ಕನ್ನಡದ ಠಾಗೋರ್. 2) ಕನ್ನಡದ ಶೇಕ್ಸ್ ಪಿಯರ್. 3) ಕನ್ನಡದ ಕಬೀರ
15. ದ.ರಾ.ಬೇಂದ್ರೆ ಅವರು ವಿಧಿವಶರಾದ ವರ್ಷಯಾವುದು?
1) 1991 2) 1971 3) 1981
~~~~~~~~~
★ಉತ್ತರಗಳು:-
~~~~~~~~~
1) 31 ಜನವರಿ 1896 2) ರಾಮಚಂದ್ರ ಬೇಂದ್ರೆ 3)ಅಂಬವ್ವ 4)ಧಾರವಾಡ 5)ಮುಂಬಯಿ 6)ನಾಕುತಂತಿ 7)ಲಕ್ಷ್ಮೀದೇವಿ 8)ಕೃಷ್ಣಕುಮಾರಿ 9)ಪ್ರಭಾತ 10)ನರಬಲಿ 11)ಪ್ರೇಮ ತರಂಗ 12)ಅರಿಶಿನ ಕುಂಕುಮ 13)ಸಮರಸ 14)ಕನ್ನಡದ ಠ್ಯಾಗೋರ್ 15) 1981
***
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
