ಪೊನ್ನ
~~~~~~~~
1. ಪೊನ್ನನು ಯಾವ ದೊರೆಯ ಆಸ್ಥಾನ ಕವಿಯಾಗಿದ್ದನು?
1) 1 ನೇ ಕೃಷ್ಣ. 2) 2ನೇ ಕೃಷ್ಣ. 3) 3 ನೇ ಕೃಷ್ಣ
2. ಪೊನ್ನನಿಗೆ ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಇದ್ದುದರಿಂದ ಲಭಿಸಿದ ಬಿರುದು ಯಾವುದು?
1) ಉಭಯ ಕವಿ ಚಕ್ರವರ್ತಿ. 2) ನಿರ್ಭಯ ಕವಿ ಚಕ್ರವರ್ತಿ. 3) ಅಭಯ ಕವಿ ಚಕ್ರವರ್ತಿ
3. ಪೊನ್ನನು ತನ್ನನ್ನು ತಾನು ಏನೆಂದು ಕರೆದುಕೊಂಡಿದ್ದಾನೆ?
1) ಕೃಷ್ಣಸಖ. 2) ಕರುಳ್ಗಳ ಸವಣ. 3) ತಿರುಳ್ಗಳ ಶ್ರವಣ
4. ‘ಪುರಾಣ ನಾಮ ಚೂಡಾಮಣಿ’ ಎಂಬ ಪರ್ಯಾಯ ಹೆಸರನ್ನು ಹೊಂದಿರುವ ಪೊನ್ನನ ಕಾವ್ಯ ಯಾವುದು?
1) ಜಿನವಲ್ಲಭ. 2) ಗತಪ್ರತ್ಯಾಗತ. 3) ಶಾಂತಿಪುರಾಣ
5. 36 ಕಂದ ಪದ್ಯಗಳನ್ನು ಹೊಂದಿರುವ ಪೊನ್ನನ ಕೃತಿ ಯಾವುದು?
1) ಜಿನಾಕ್ಷರ ಮಾಲೆ. 2) ಶಾಂತಿ ಪುರಾಣ. 3) ಭುವನೈಕ್ಯ ರಾಮಾಭ್ಯುದಯ
6. ಶಾಂತಿ ಪುರಾಣ ಕೃತಿಯಲ್ಲಿ ಪೊನ್ನನು ಎಷ್ಟನೇ ತೀರ್ಥಂಕರನ ಬಗ್ಗೆ ಹೇಳಿದ್ದಾನೆ?
1) 16 ನೇ ತೀರ್ಥಂಕರ. 2) 6 ನೇ ತೀರ್ಥಂಕರ. 3) 24 ನೇ ತೀರ್ಥಂಕರ
7. ಪೊನ್ನನು ಜನಿಸಿದ ವರ್ಷ ಸರಿ ಸುಮಾರು ಎಷ್ಟು?
1) 1050 2) 850 3) 950
8. ಕ ಕಾರದಿಂದ ಳ ಕಾರದವರೆಗೆ ಕ್ರಮಾನುಗತ ಪದಗಳಿಂದ ರಚಿತವಾದ ಪೊನ್ನನ ಕೃತಿ ಯಾವುದು?
1) ಶಾಂತಿಪುರಾಣ. 2) ಭುವನೈಕ್ಯ ರಾಮಾಭ್ಯುದಯ. 3) ಜಿನಾಕ್ಷರ ಮಾಲೆ
9. ಲಭ್ಯವಿಲ್ಲದ ಆದರೆ 14 ಆಶ್ವಾಸಗಳನ್ನು ಹೊಂದಿರುವ ಪೊನ್ನನ ಚಂಪೂ ಕಾವ್ಯ ಯಾವುದು?
1) ಭುವನೈಕ್ಯ ರಾಮಾಭ್ಯುದಯ. 2) ರಾಮಾಶ್ವಮೇಧ. 3) ಲವಕುಶ ಚರಿತೆ
10. ಪೊನ್ನನು ತನ್ನ ಅರಸನಿಂದ ಪಡೆದ ಬಿರುದು ಯಾವುದು?
1) ಕಾವ್ಯ ಮಾಣಿಕ್ಯ. 2) ಕವಿಚಕ್ರವರ್ತಿ. 3) ಜಿನವಲ್ಲಭ
11. ಪೊನ್ನನಿಗೆ ಉಭಯ ಕವಿಚಕ್ರವರ್ತಿ ಎಂಬ ಬಿರುದು ತಂದುಕೊಟ್ಟ ಸಂಸ್ಕೃತದಲ್ಲಿ ರಚಿಸಿದ ಕಾವ್ಯ ಯಾವುದು?
1) ಮತ ಪ್ರತ್ಯಾಗತ. 2) ಸ್ವಗತ ಪ್ರತ್ಯಾಗತ. 3) ಗತಪ್ರತ್ಯಾಗತ
12. ಪೊನ್ನ ವಿರಚಿತ ಶಾಂತಿಪುರಾಣ ಕೃತಿಯ ಸಾವಿರ ಪ್ರತಿಗಳನ್ನು ಮಾಡಿ ಹಂಚಿದರೆನ್ನುವ ಮಹಿಳೆ ಯಾರು?
1) ಅಬ್ಬಣಬ್ಬೆ. 2) ಅತ್ತಿಮಬ್ಬೆ. 3) ಅಬ್ಬಲಮ್ಮ
13. ಪೊನ್ನನ ಶಾಂತಿಪುರಾಣ ಕೃತಿಗೆ ಇರುವ ಪರ್ಯಾಯ ಹೆಸರೇನು?
1) ಆಧುನಿಕ ಚೂಡಾಮಣಿ. 2) ಪುರಾಣ ನಾಮ ಚೂಡಾಮಣಿ. 3) ಐತಿಹಾಸಿಕ ಚೂಡಾಮಣಿ
14. ಪೊನ್ನನಿಗೆ ಆಶ್ರಯ ಕೊಟ್ಟ ೩ ನೇ ಕೃಷ್ಣ ಯಾವ ವಂಶಕ್ಕೆ ಸೇರಿದವನಾಗಿದ್ದಾನೆ?
1) ರಾಷ್ಟ್ರಕೂಟರು. 2) ಚಾಲುಕ್ಯರು. 3) ಚೋಳರು
15. ಇವರಲ್ಲಿ ರತ್ನತ್ರಯರಲ್ಲದವರು ಯಾರು?
1) ಪಂಪ. 2) ಪೊನ್ನ. 3) ಜನ್ನ. 4) ರನ್ನ
~~~~~~~~~
★ಉತ್ತರಗಳು:-
1. ಮೂರನೇ ಕೃಷ್ಣ 2.ಉಭಯ ಕವಿ ಚಕ್ರವರ್ತಿ 3.ಕರುಳ್ಗಳ ಸವಣ 4.ಶಾಂತಿಪುರಾಣ 5) ಜಿನಾಕ್ಷರ ಮಾಲೆ 6) 16 ನೇ ತೀರ್ಥಂಕರ 7) 950 8.ಜಿನಾಕ್ಷರ ಮಾಲೆ 9.ಭುವನೈಕ್ಯ ರಾಮಾಭ್ಯುದಯ 10.ಕವಿಚಕ್ರವರ್ತಿ 11.ಗತಪ್ರತ್ಯಾಗತ 12. ಅತ್ತಿಮಬ್ಬೆ 13.ಪುರಾಣ ನಾಮ ಚೂಡಾಮಣಿ 14.ರಾಷ್ಟ್ರಕೂಟರು 15.ಜನ್ನ
***
