****************
* ರಾಘವಾಂಕ *
****************
1. ರಾಘವಾಂಕನು ಯಾವ ಕವಿಯ ಸೋದರಳಿಯ?
1)ರನ್ನ. 2)ಪಂಪ. 3)ಹರಿಹರ
2. ರಾಘವಾಂಕನ ತಂದೆಯ ಹೆಸರೇನು?
1)ಶ್ರೀನಿವಾಸ ಭಟ್ಟ. 2)ಮಹಾದೇವ ಭಟ್ಟ. 3)ಶಂಕರ ಭಟ್ಟ
3. ರಾಘವಾಂಕನ ತಾಯಿಯ ಹೆಸರೇನು?
1)ರ್ವಾಣಿ. 2)ರುದ್ರಾಣಿ. 3)ಇಂದ್ರಾಣಿ
4. ರಾಘವಾಂಕನಿಗೆ ಇರುವ ಜನಪ್ರಿಯ ಬಿರುದು ಯಾವುದು?
1)ಷಟ್ಪದಿಯ ಬ್ರಹ್ಮ. 2)ಚೌಪದಿಯ ಬ್ರಹ್ಮ. 3)ತ್ರಿಪದಿಯ ಬ್ರಹ್ಮ
5. ರಾಘವಾಂಕನ ಜನ್ಮಸ್ಥಳ ಯಾವುದು?
1)ಹಾವೇರಿ. 2)ಹೊಸಪೇಟೆ. 3)ಹಂಪಿ
6. ರಾಘವಾಂಕನ ಕಾವ್ಯಗುರು ಮತ್ತು ದೀಕ್ಷಾಗುರು ಯಾರು?
1)ಕುಮಾರವ್ಯಾಸ. 2)ಹರಿಹರ. 3)ದೇವಮುನಿ
7. ರಾಘವಾಂಕನು ಹರಿಹರನನ್ನು ಕುರಿತಂತೆ ತನ್ನನ್ನು ಏನೆಂದು ಹೇಳಿಕೊಂಡಿದ್ದಾನೆ ?
1)ಹರಿಹರನ ದಾಸ. 2)ಹರಿಹರನ ಮಾನಸಪುತ್ರ. 3)ಹರಿಹರನ ವರಸುತ
8. ಪಂಪಾಪುರದ ದೇವರಾಜನ ಸಭೆಯಲ್ಲಿ ಓದಿ ಮೆಚ್ಚುಗೆ, ಸನ್ಮಾನ ಪಡೆದ ರಾಘವಾಂಕನ ಕೃತಿ ಯಾವುದು?
1)ಹರಿಶ್ಚಂದ್ರನ ಕಾವ್ಯ. 2)ವೀರೇಶ ಚರಿತೆ. 3)ಸಿದ್ಧರಾಮ ಪುರಾಣ
9. ವೀರಭದ್ರನಿಂದ ದಕ್ಷಯಜ್ಞ ಸಂಹಾರವಾದ ಕಥೆಯನ್ನು ಒಳಗೊಂಡ ರಾಘವಾಂಕನ ಕೃತಿ ಯಾವುದು?
1)ಸಿದ್ಧರಾಮ ಪುರಾಣ. 2)ವೀರೇಶ ಚರಿತೆ. 3)ಶರಭ ಚರಿತೆ
10. “ಸಾಕಾರ ನಿಷ್ಠೆ ಭೂತಂಗಳೊಳಗನುಗುಕಂಪತಾನೆ ಪರಬೊಮ್ಮ” ಎಂಬ ಸೂತ್ರದ ರಾಘವಾಂಕನ ಕೃತಿ ಯಾವುದು?
1)ಸಿದ್ಧರಾಮ ಪುರಾಣ. 2)ಹರಿಶ್ಚಂದ್ರ ಕಾವ್ಯ. 3)ವೀರೇಶ ಚರಿತೆ
11. ಮಹಾವಿಷ್ಣುವಿನ ಅವತಾರವನ್ನು ಕುರಿತಂತೆ ರಾಘವಾಂಕನು ರಚಿಸಿದ ಕಾವ್ಯ ಯಾವುದು?
1)ವೀರೇಶ ಚರಿತೆ. 2)ಶರಭ ಚರಿತೆ. 3)ಜಿನ ಚರಿತೆ
12. ಹರಿಹರನ ಆಜ್ಞೆಯಂತೆ ರಾಘವಾಂಕನು ಹಂಪಿಯಿಂದ ಎಲ್ಲಿಗೆ ಹೋಗಿ ನೆಲೆಸಿದನು?
1)ಬೇಲೂರು. 2)ಹಳೇಬೀಡು. 3)ಶ್ರವಣಬೆಳಗೊಳ
13. ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ವನ್ನು ರಚಿಸಿರುವ ಪ್ರಕಾರ ಯಾವುದು?
1)ಕುಸುಮ ಷಟ್ಪದಿ. 2)ಭಾಮಿನಿ. 3)ವರ್ಧಕ ಷಟ್ಪದಿ
14. ರಾಘವಾಂಕನ ಆರಾಧ್ಯ ದೈವ ಯಾವುದು?
1)ಬೇಲೂರು ಚನ್ನಕೇಶವ. 2)ಹಂಪೆಯ ವಿರೂಪಾಕ್ಷ. 3)ಶೃಂಗೇರಿ ಶಾರದಾಂಬೆ
15. ಗುರು ಹರಿಹರನಿಂದ ರಾಘವಾಂಕನ ಹಲ್ಲುಗಳು ಉದುರಲು ಕಾರಣವಾದ ಕಾವ್ಯ ಯಾವುದು?
1)ಹರಿಹರ ಮಹತ್ವ. 2)ಸಿದ್ಧರಾಮ ಚರಿತ್ರೆ. 3)ಹರಿಶ್ಚಂದ್ರ ಕಾವ್ಯ
*************************************************************************************
★ಉತ್ತರಗಳು:-
1.ಹರಿಹರ 2.ಮಹಾದೇವ ಭಟ್ಟ 3.ರುದ್ರಾಣಿ 4.ಷಟ್ಪದಿಯ ಬ್ರಹ್ಮ 5.ಹಂಪಿ 6.ಹರಿಹರ 7.ಹರಿಹರನ ವರಸುತ 8. ಹರಿಶ್ಚಂದ್ರ ಕಾವ್ಯ 9.ವೀರೇಶ ಚರಿತೆ 10.ಸಿದ್ಧರಾಮ ಪುರಾಣ 11. ಶರಭ ಚರಿತೆ 12.ಬೇಲೂರು 13.ವರ್ಧಕ ಷಟ್ಪದಿ 14.ಹಂಪಿಯ ವಿರೂಪಾಕ್ಷ 15. ಹರಿಶ್ಚಂದ್ರ ಕಾವ್ಯ
****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ರಾಘವಾಂಕ-ಕವಿ ಪರಿಚಯ […]