1.ಶಂ.ಗು.ಬಿರಾದಾರ ಅವರು ಜನಿಸಿದ ದಿನಾಂಕ
1)ಏಪ್ರಿಲ್-17, 1926 2)ಮೇ-17, 1926 3)ಜೂನ್-17, 1926
2.ಕವಿಯು ಜನಿಸಿದ ಊರು
1)ಬಬಲೇಶ್ವರ. 2) ಬೆಳಗಾವಿ. 3)ವಿಜಯಪುರ
3.ಕವಿಯ ತಾಯಿಯ ಹೆಸರು
1)ಪ್ರೇಮಾಂಬಿಕ. 2)ನಾಗಾಂಬಿಕ. 3)ರುದ್ರಾಂಬಿಕ
4.ಕವಿಯ ತಂದೆಯ ಹೆಸರು
1)ಗುರುನಗೌಡ. 2)ಗುರುರಾಜ್ ಗೌಡ. 3)ಗುಲ್ಜಾರ್ ಗೌಡ
5.ಕವಿಗೆ ಪ್ರಾಥಮಿಕ ಹಂತದಲ್ಲೇ ಓದಲು ಬರೆಯಲು ಪ್ರೇರಣೆ ನೀಡಿದವರು
1)ವೀರೇಶ್ ಕರ್ಜಗಿ. 2)ಗುರುರಾಜ್ ಕರ್ಜಗಿ 3)ಪ್ರ.ವಿ.ಕರ್ಜಗಿ
6.ಶ್ರೀಗುರುಪಾದೇಶ್ವರ ಮಠದಲ್ಲಿ ಗೆಳೆಯರ ಬಳಗದವರು ಪ್ರದರ್ಶಿಸಿದ ಕವಿಯು ಬರೆದ ನಾಟಕ
1)ಯಾರ ತಪ್ಪು? 2)ನಿಮ್ಮ ತಪ್ಪು. 3)ನನ್ನದೇ ತಪ್ಪು
7.ಕವಿಯು ಸಂಪಾದಕರಾಗಿ ನಡೆಸಿದ ಕೈಬರಹದ ಪತ್ರಿಕೆ
1)ಸಿಡಿಲ ಕಿಡಿ. 2)ಸಿಡಿ. 3)ಕಿಡಿ
8.ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಕವಿಯು ಪ್ರದರ್ಶಿಸಿದ ನಾಟಕ
1)ಗುಲಾಮಗಿರಿ. 2)ಪೋಲಿಸ್ ಪಾಶ. 3)ಯಮ ಪಾಶ
9.ಕವಿಯು ಗುರು ರೋಹಿಡೇಶ್ವರ ಶಾಮರಾಯರ ನೆರವಿನಿಂದ ರಚಿಸಿದ ಮೊಟ್ಟ ಮೊದಲ ಕತೆ
1)ಶಿಕ್ಷಕ ರಕ್ಷಕ. 2) ಸುಶಿಕ್ಷಿತ. 3)ಶಿಕ್ಷಕ ಶಿಕ್ಷಿತ
10.’ಕಥಾವಳಿ’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಕವಿಯ ಕವಿತೆ
1)ಸ್ವರಾಜ್ಯ. 2)ಸ್ವಾತಂತ್ರ್ಯ ದೇವಿ. 3)ಸ್ವಾತಂತ್ರ್ಯ ಹಣತೆ
11.ಕವಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ದ.ರಾ.ಬೇಂದ್ರೆಯವರ ಮೆಚ್ಚುಗೆ ದೊರಕಿಸಿದ ಕವಿತೆ
1)ನೌಕರಿ ಹುಚ್ಚು. 2)ತಲೆ ಹರಟೆ. 3)ತಲೆಬುರುಡೆ
12.ವಿವಿಧ ತರಗತಿಗಳ ಪಠ್ಯ ಪುಸ್ತಕದಲ್ಲಿ ಪ್ರಕಟವಾಗಿ ಜನಪ್ರಿಯವಾದ ಕವಿಯ ಕವನ
1)ನಮ್ಮ ಕನಸು. 2)ಕನಸು ನನಸು. 3)ಕನಸು ಸೊಗಸು
13.ಕವಿಯು ಬರೆದ ಚೊಚ್ಚಲ ಕಾದಂಬರಿ
1)ಬದುಕಿನೆಡೆಗೆ. 2)ಬೆಳಕಿನೆಡೆಗೆ. 3)ಅನಂತದೆಡೆಗೆ
14.ಕವಿಗೆ ಸಾಹಿತ್ಯಾಭಿಮಾನಿಗಳು, ಸ್ನೇಹಿತರು ಅರ್ಪಿಸಿದ ಅಭಿನಂದನಾ ಗ್ರಂಥ
1)ಕಾವ್ಯ ಮಾಲೆ. 2)ಹೂವಿನ ಹಾರ. 3)ಹೂವಿನ ಹಂದರ
15.ಕವಿಯು ಇಹಲೋಕವನ್ನು ತ್ಯಜಿಸಿದ ದಿನಾಂಕ
1)ಜುಲೈ-26, 2015 2)ಜುಲೈ-26, 2012 3)ಜುಲೈ-26, 2007
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಮೇ-17, 1926 2)ಬಬಲೇಶ್ವರ 3)ರುದ್ರಾಂಬಿಕಾ 4)ಗುರುನಗೌಡ 5)ಪ್ರ.ವಿ.ಕರ್ಜಗಿ 6)ಯಾರ ತಪ್ಪು 7)ಕಿಡಿ 8)ಪೋಲಿಸ್ ಪಾಶ 9)ಶಿಕ್ಷಕ ಶಿಕ್ಷಿತ 10)ಸ್ವಾತಂತ್ರ್ಯ ದೇವಿ 11)ತಲೆಬುರುಡೆ 12)ನಮ್ಮ ಕನಸು 13)ಬೆಳಕಿನೆಡೆಗೆ 14)ಹೂವಿನ ಹಂದರ 15)ಜುಲೈ-26, 2012
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ
