1.ಎಚ್. ಡುಂಡಿರಾಜ್ ಅವರು ಜನಿಸಿದ ಹಟ್ಟಿಕುದ್ರು ಗ್ರಾಮವು ಈ ಜಿಲ್ಲೆಯಲ್ಲಿದೆ.
1)ದಕ್ಷಿಣ ಕನ್ನಡ. 2)ಉಡುಪಿ. 3)ಉತ್ತರ ಕನ್ನಡ
2.ಎಚ್. ಡುಂಡಿರಾಜ್ ಅವರ ತಾಯಿಯ ಹೆಸರು
1)ಶಾರದಮ್ಮ 2)ಮಾಧವಿ. 3)ರಾಧಮ್ಮ
3.ಎಚ್. ಡುಂಡಿರಾಜ್ ಅವರ ತಂದೆಯ ಹೆಸರು
1)ವೆಂಕಟರಮಣ ಭಟ್. 2)ರಾಧಾಕೃಷ್ಣ ಭಟ್. 3)ರಾಮಕೃಷ್ಣ ಭಟ್
4.ಎಚ್. ಡುಂಡಿರಾಜ್ ಅವರು ಧಾರವಾಡದ ಕೃಷಿ ಕಾಲೇಜಿನಲ್ಲಿ ಎಂ.ಎಸ್ಸಿ (ಕೃಷಿ) ಪದವಿಯಲ್ಲಿ ಪಡೆದ ಪದಕ
1)ಸ್ವರ್ಣ ಪದಕ. 2)ರಜತ ಪದಕ. 3)ಕಂಚಿನ ಪದಕ
5.ಎಚ್. ಡುಂಡಿರಾಜ್ ಅವರು ಕೃಷಿ ಅಧಿಕಾರಿಯಾಗಿ ಸೇವೆಗೆ ಸೇರಿದ ಬ್ಯಾಂಕ್
1)ಕರ್ನಾಟಕ ಬ್ಯಾಂಕ್. 2)ಕಾರ್ಪೋರೇಷನ್ ಬ್ಯಾಂಕ್. 3)ವಿಜಯಾ ಬ್ಯಾಂಕ್
6.ಎಚ್. ಡುಂಡಿರಾಜ್ ಅವರ ಬಾಳ ಸಂಗಾತಿಯ ಹೆಸರು
1)ಶ್ರುತಿ. 2)ಆರತಿ. 3)ಭಾರತಿ
7.ಉದಯವಾಣಿ ಪತ್ರಿಕೆಯಲ್ಲಿ 2011 ರಿಂದಲೂ ಪ್ರಕಟವಾಗುತ್ತಿರುವ ಎಚ್. ಡುಂಡಿರಾಜ್ ಅವರ ದೈನಿಕ ಅಂಕಣ
1)ಹನಿದನಿ. 2)ಇನಿದನಿ. 3)ಕವಿದನಿ
8.ಎಚ್. ಡುಂಡಿರಾಜ್ ಅವರು ರಚಿಸಿದ ಇತ್ತೀಚಿನ ನಾಟಕ
1)ಓಡುವವರು. 2)ಅಧ್ವಾನಪುರ. 3)ಪುಕ್ಕಟೆ ಸಲಹೆ
9.ಇವುಗಳಲ್ಲಿ ಎಚ್. ಡುಂಡಿರಾಜ್ ವಿರಚಿತ ಭಾವಗೀತೆಯನ್ನು ಒಳಗೊಂಡ ಚಲನಚಿತ್ರ
1)ಯಾರಿಗೆ ಸಾಲುತ್ತೆ ಸಂಬಳ. 2)ಕತ್ತೆಗಳು ಸಾರ್ ಕತ್ತೆಗಳು. 3)ಕೋತಿಗಳು ಸಾರ್ ಕೋತಿಗಳು
10.ಎಚ್. ಡುಂಡಿರಾಜ್ ಅವರ ಆಯ್ದ ನಗೆಬರಹಗಳ ಸಂಕಲನ
1)ಬಾರಯ್ಯ ಲಂಬೋದರ. 2)ಡುಂಡಿ ನಗೆಬಂಡಿ. 3)ಬೋಳಾಯ ತಸ್ಮೈ ನಮಃ
11.ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಎಚ್. ಡುಂಡಿರಾಜ್ ಅವರ ಸಂಪಾದಿತ ಹನಿಗವನಗಳ ಸಂಕಲನ
1)ಸೂಜಿ ಮಲ್ಲಿಗೆ. 2)ನೊಣಾನುಬಂಧ. 3)ಡುಂಡಿಮ
12.ಎಚ್. ಡುಂಡಿರಾಜ್ ಅವರು ಬರೆದ ಹಾಸ್ಯ ಗೀತೆಗಳ ಧ್ವನಿಸುರುಳಿ/ಧ್ವನಿ ಮುದ್ರಿಕೆ
1)ಸಲ್ಲಾಪ. 2)ಹುಣ್ಣಿಮೆ. 3)ನಾವಿರೋದೆ ಹೀಗೆ
13.ಇವುಗಳಲ್ಲಿ ಎಚ್. ಡುಂಡಿರಾಜ್ ಅವರು ರಚಿಸಿದ ನಾಟಕ
1)ಅಕ್ಷತಾ-ಲಕ್ಷತಾ. 2)ಸಿನಿಮಹಾತ್ಮೆ. 3)ಕಾರ್ಡಿದ್ರೆ ಕೈಲಾಸ
14.ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದ ಎಚ್. ಡುಂಡಿರಾಜ್ ಅವರ ಕೃತಿ
1)ಹನಿಮೋಹಿನಿ. 2)ಏನಾಯಿತು. 3)ಯಾರಿಗೂ ಹೇಳ್ಬೇಡಿ
15.ಎಚ್. ಡುಂಡಿರಾಜ್ ವಿರಚಿತ ‘ಹುಣ್ಣಿಮೆ’ ಧ್ವನಿಸುರುಳಿಯ ಭಾವಗೀತೆಗಳನ್ನು ಹಾಡಿದ ಗಾಯಕರು
1)ಮೈಸೂರು ಅನಂತಸ್ವಾಮಿ. 2)ಶಿವಮೊಗ್ಗ ಸುಬ್ಬಣ್ಣ. 3)ಸಿ.ಅಶ್ವತ್ಥ್
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಉಡುಪಿ 2)ರಾಧಮ್ಮ 3)ವೆಂಕಟರಮಣ ಭಟ್ 4)ಸ್ವರ್ಣ ಪದಕ 5)ಕಾರ್ಪೊರೇಷನ್ ಬ್ಯಾಂಕ್ 6)ಭಾರತಿ 7)ಹನಿದನಿ 8)ಪುಕ್ಕಟೆ ಸಲಹೆ 9)ಕೋತಿಗಳು ಸಾರ್ ಕೋತಿಗಳು 10)ಡುಂಡಿ ನಗೆಬಂಡಿ 11)ಸೂಜಿ ಮಲ್ಲಿಗೆ 12)ನಾವಿರೋದೆ ಹೀಗೆ 13)ಸಿನಿಮಹಾತ್ಮೆ 14)ಹನಿಮೋಹಿನಿ 15)ಸಿ.ಅಶ್ವತ್ಥ್
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ
