1.ಹೆಚ್. ಜೆ.ಲಕ್ಕಪ್ಪಗೌಡ ಅವರ ಊರು ‘ಹಂಪಾಪುರ’ ಹಾಸನ ಜಿಲ್ಲೆಯ ಈ ತಾಲ್ಲೂಕಿನಲ್ಲಿದೆ.
1)ಅರಸೀಕೆರೆ. 2)ಚನ್ನರಾಯಪಟ್ಟಣ. 3)ಅರಕಲಗೂಡು
2.ಕವಿಯ ತಂದೆಯ ಹೆಸರು
1)ಜವರೇಗೌಡ. 2)ಜಗದೀಶ್ ಗೌಡ. 3)ಜಗನ್ನಾಥ ಗೌಡ
3.ಕವಿಯ ತಾಯಿಯ ಹೆಸರು
1)ನೀಲಮ್ಮ. 2)ಕಾಳಮ್ಮ. 3)ಮಾದೇವಮ್ಮ
4.ಕವಿಯು ಜನಿಸಿದ ಅಲಪನಾಯಕನಹಳ್ಳಿಯು ಮೈಸೂರು ಜಿಲ್ಲೆಯ ಈ ತಾಲ್ಲೂಕಿನಲ್ಲಿದೆ.
1)ಪಿರಿಯಾಪಟ್ಟಣ. 2)ಕೆ.ಆರ್. ನಗರ. 3)ಹೆಚ್. ಡಿ.ಕೋಟೆ
5)ಕವಿಯು ಜನಿಸಿದ ವರ್ಷ
1) ಮೇ-8, 1939 2) ಜೂನ್-8, 1939 3)ಏಪ್ರಿಲ್-8, 1939
6.ಕವಿಯು ಕೊಣನೂರು ಕಾಲೇಜಿನಲ್ಲಿ ಪಿಯುಸಿ ಓದುವಾಗಲೇ ರಚಿಸಿದ ಕವನ
1)ನಮ್ಮ ನಾಡು. 2)ಹೆಮ್ಮೆ. 3)ಸ್ವಗತ
7.ಕವಿಯು ಎಸ್ಸೆಸ್ಸೆಲ್ಸಿ ಓದುವಾಗ ಬರೆದ ಇನ್ನೂ ಅಚ್ಚಾಗದೇ ಉಳಿದ ಮುನ್ನೂರು ಪುಟಗಳ ಕಾದಂಬರಿ
1)ವೀರೆ ಧೀರೆ. 2) ವೀರಾಗ್ರಣಿ. 3)ವೀರವನಿತೆ
8.ಕವಿಯು ಆರಂಭದಲ್ಲಿ ಬಳಸಿದ ಕಾವ್ಯನಾಮ
1)ಶ್ರೀವಸಂತ. 2)ಕಾಳಮ್ಮ ತನಯ. 3)ಹಂಪಾಸುತ
9.ಕವಿಯು ಕಾಲೇಜು ದಿನಗಳಲ್ಲಿ ಬರೆದ ಕಥೆಗಳು, ಪದ್ಯಗಳನ್ನು ಪ್ರಕಟಿಸಿದ ಪತ್ರಿಕೆ
1)ಸಂಕ್ರಮಣ. 2)ತಾಯಿ ನಾಡು. 3)ಜೀವನ
10.ಕವಿಯು ಪಿ ಹೆಚ್ ಡಿ ಮಹಾಪ್ರಬಂಧಕ್ಕಾಗಿ ಮಂಡಿಸಿದ ವಿಮರ್ಶಾತ್ಮಕ ಅಧ್ಯಯನ ಗ್ರಂಥ
1)ಶ್ರೀರಾಮಾಯಣ ದರ್ಶನಂ. 2)ಶ್ರೀಮದ್ಭಗವದ್ಗೀತ. 3)ಮಹಾಭಾರತ
11.ಪುರಂದರದಾಸರ ಪೂರ್ವಾಶ್ರಮವನ್ನು ಕುರಿತು ಕವಿಯು ಬರೆದ ನಾಟಕ
1)ಕತ್ತಲಿಂದ ಬೆಳಕಿನೆಡೆಗೆ. 2)ತಮಸೋಮಾ ಜ್ಯೋತಿರ್ಗಮಯ 3)ತಮಸ್ಸಿನಿಂದ ಜ್ಯೋತಿಗೆ
12.ಕವಿಯ ಮೊದಲ ಕವನ ಸಂಕಲನ
1)ವಸಂತ ಗೀತ. 2)ಊರ ಮುಂದಿನ ಬಾವಿ. 3)ಹೊನ್ನಾರು
13.ಕವಿಯ ವಸಂತ ಗೀತ ಕೃತಿಗೆ ಮುನ್ನುಡಿ ಬರೆದ ಖ್ಯಾತ ಕವಿ
1)ಮಾಸ್ತಿ ವೆಂಕಟೇಶ ಅಯ್ಯಂಗಾರ್. 2)ಜಿ.ಎಸ್. ಶಿವರುದ್ರಪ್ಪ. 3)ದೇ.ಜವರೇಗೌಡ
14.ಇವುಗಳಲ್ಲಿ ಕವಿಯು ಬರೆದ ಸಣ್ಣಕತೆ
1)ಅಂತರಾಳ. 2)ಗೋಪುರದ ದೀಪಗಳು. 3)ಹುಲಿಯ ಹೆಜ್ಜೆ
15.ಇವುಗಳಲ್ಲಿ ಕವಿಯು ರಚಿಸಿದ ಮಕ್ಕಳ ಸಾಹಿತ್ಯ ಕೃತಿ
1)ದಲಿತ ಸೂರ್ಯ. 2)ದೀನಬಂಧು. 3)ಪದ್ದು ಹದ್ದು
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಅರಕಲಗೂಡು 2)ಜವರೇಗೌಡ 3)ಕಾಳಮ್ಮ 4)ಪಿರಿಯಾಪಟ್ಟಣ 5) ಮೇ-8, 1939 6)ಹೆಮ್ಮೆ 7)ವೀರವನಿತೆ 8)ಶ್ರೀವಸಂತ 9)ತಾಯಿ ನಾಡು 10)ಶ್ರೀರಾಮಾಯಣ ದರ್ಶನಂ 11)ತಮಸ್ಸಿನಿಂದ ಜ್ಯೋತಿಗೆ 12)ವಸಂತ ಗೀತ 13)ಜಿ.ಎಸ್. ಶಿವರುದ್ರಪ್ಪ 14)ಹುಲಿಯ ಹೆಜ್ಜೆ 15)ದೀನಬಂಧು
*********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ಹೆಚ್. ಜೆ.ಲಕ್ಕಪ್ಪಗೌಡ- ಕವಿ ಪರಿಚಯ ಮಾಲಿಕೆ […]