1.’ತಿರುಕನ ಕನಸು’ ಪದ್ಯದಿಂದ ಜನಪ್ರಿಯರಾದ ಕವಿ
1)ಶಿವಕೊಟ್ಯಾಚಾರ್ಯ. 2)ಮುದ್ದಣ. 3)ಮುಪ್ಪಿನ ಷಡಕ್ಷರಿ
2.ಮುಪ್ಪಿನ ಷಡಕ್ಷರಿಯ ಮತ್ತೊಂದು ಹೆಸರು
1)ಷಡಕ್ಷರದೇವ. 2)ಪಂಚಾಕ್ಷರದೇವ. 3)ಚತುರಾಕ್ಷರದೇವ
3.ಕವಿಯು ಜೀವಿಸಿದ ಕಾಲ ಸುಮಾರು
1)ಕ್ರಿ.ಶ.1500 2)ಕ್ರಿ.ಶ.1300 3)ಕ್ರಿ.ಶ.1600
4.ಕವಿಯು ತಪಸ್ಸು ಮಾಡಿದ್ದರೆಂದು ಪ್ರತೀತಿ ಇರುವ ಬೆಟ್ಟ
1)ಚಾಮುಂಡಿ ಬೆಟ್ಟ. 2)ಸಿದ್ಧರಬೆಟ್ಟ. 3)ಶಂಭುಲಿಂಗ ಬೆಟ್ಟ
5.ಕವಿಯು ರಚಿಸಿದ ಮತ್ತೊಂದು ಸುಪ್ರಸಿದ್ಧ ಕೃತಿ
1)ಜೀವನಸಾರ. 2)ಸುಬೋಧಸಾರ. 3)ಹರಿಭಕ್ತಿಸಾರ
6.ಕವಿಯ ‘ತಿರುಕನ ಕನಸು’ ಹಾಡು ರಚಿತವಾಗಿರುವ ಷಟ್ಪದಿಯ ವಿಧ
1)ಭೋಗ ಷಟ್ಪದಿ. 2)ಭಾಮಿನಿ ಷಟ್ಪದಿ. 3)ಕುಸುಮ ಷಟ್ಪದಿ
7.ಕವಿಯು ಇವರ ಸಮಕಾಲೀನರಾಗಿದ್ದರು ಎಂದು ಹೇಳಲಾಗುತ್ತದೆ.
1)ಪರಗಣ ಅವಧೂತರು 2)ನಿಜಗುಣ ಶಿವಯೋಗಿಗಳು 3)ಶಿವಗುಣ ಮಹಾಯೋಗಿಗಳು
8.ಕವಿಯು ಜನಿಸಿದರೆಂದು ಹೇಳಲಾಗುವ ಊರು
1)ಉಪ್ಪಿನಹಳ್ಳಿ. 2)ತಿಮ್ಮನಹಳ್ಳಿ. 3)ಬೊಮ್ಮನಹಳ್ಳಿ
9.ಕವಿಗೆ ಶಿವಶಾಸ್ತ್ರದ ಅನುಭವವನ್ನು ಅರುಹಿದರೆಂದು ಹೇಳಲಾಗಿರುವ ದೀಕ್ಷಾಗುರು
1)ಸಿದ್ಧೇಶ್ವರ ಸ್ವಾಮಿಗಳು. 2)ಸಿದ್ಧಲಿಂಗ ಸ್ವಾಮಿಗಳು 3)ಮಂಟೇಸ್ವಾಮಿಗಳು
10.ಕವಿಯು ರಚಿಸಿದರೆಂದು ಹೇಳಲಾಗಿರುವ ಕೈವಲ್ಯ ಪದ್ಯಗಳ ಸಂಖ್ಯೆ
1) 65 2) 79 3) 74
11.ಇವುಗಳಲ್ಲಿ ಕವಿಯ ರಚನೆಯಲ್ಲದ ಕೃತಿ
1)ಲಿಂಗಾಷ್ಟಕ. 2)ಶಿವಪೂಜಾಷ್ಟಕ. 3)ಶಿವಯೋಗಾಷ್ಟಕ
12.’ಮುಪ್ಪಿನ ಷಡಕ್ಷರಿಯ ಕೈವಲ್ಯ ಪದಗಳು’ ಕೃತಿಯನ್ನು ಸಂಪಾದಿಸಿದವರು
1)ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು. 2)ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು 3)ಶ್ರೀ ಮುರುಗರಾಜೇಂದ್ರ ಮಹಾಸ್ವಾಮಿಗಳು
13.ಕವಿಯು ತಮ್ಮ ವಚನಗಳಲ್ಲಿ ಬಳಸಿರುವ ಅಂಕಿತನಾಮ
1)ಷಡಕ್ಷರಿ ಲಿಂಗ. 2)ಶಿವಲಿಂಗ. 3)ಪಂಚಾಕ್ಷರಿ ಲಿಂಗ
14.’ಶ್ರೀ ಮುಪ್ಪಿನ ಷಡಕ್ಷರಿಕೃತ ಸುಬೋಧಸಾರ’ ಎಂಬ ಕೃತಿಯನ್ನು ಸಂಪಾದಿಸಿದವರು
1)ರಂಜಾನ್ ದರ್ಗಾ. 2)ದೇಜಗೌ 3)ಹರ್ಡೇಕರ್ ಮಂಜಪ್ಪ
15. ಇವರಲ್ಲಿ ‘ಮುಪ್ಪಿನ ಷಡಕ್ಷರಿ’ ಎಂಬ ಕೃತಿಯನ್ನು ಬರೆದ ಲೇಖಕರು
1)ಕುರುವ ಬಸವರಾಜು. 2)ಎಚ್.ಎಲ್.ನಾಗೇಗೌಡ. 3)ಎಲ್.ಬಸವರಾಜು
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಮುಪ್ಪಿನ ಷಡಕ್ಷರಿ 2)ಷಡಕ್ಷರದೇವ 3)ಕ್ರಿ.ಶ.1500 4)ಶಂಭುಲಿಂಗ ಬೆಟ್ಟ 5)ಸುಬೋಧಸಾರ 6)ಭೋಗ ಷಟ್ಪದಿ 7)ನಿಜಗುಣ ಶಿವಯೋಗಿಗಳು 8)ಉಪ್ಪಿನಹಳ್ಳಿ 9)ಸಿದ್ಧಲಿಂಗ ಸ್ವಾಮಿಗಳು 10) 74 11)ಲಿಂಗಾಷ್ಟಕ 12)ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು 13)ಷಡಕ್ಷರಿ ಲಿಂಗ 14)ಹರ್ಡೇಕರ್ ಮಂಜಪ್ಪ15)ಕುರುವ ಬಸವರಾಜ
ಸಂ:-ಹೊ.ರಾ. ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] […]