ಈ ಹುಡುಗೀರೇ ಹೀಗೆ ರೀ..
ಅರ್ಥವೇ ಆಗದ ಡಿಕ್ಷನರಿ.!
ಡೈಲಿ ಕಾಂಪ್ಲಿಕೇಶನ್ನು ರೀ..
ಟೋಟಲ್ ಕನ್ಫ್ಯೂಶನ್ನು ರೀ..!
ಡೈಲಿ ಡೌ ಹೊಡೆದು ಕಾಳು ಹಾಕಿದ್ರೆ..
‘ಥೂ ಪೋಲಿಮುಂಡೇದು..’ ಅಂತಾರ್ರೀ.!
ಹಲ್ಲು ಕಿಸಿಯದೆ ನೋಡದೆ ಸುಮ್ಮನಿದ್ರೆ..
‘ಅಯ್ಯೋ ಪೆದ್ದುಮುಂಡೇದು..’ ಅಂತಾರ್ರೀ.!
ಸದಾ ಅವರ ಹಿಂದಿಂದೆ ತಿರುಗಿದ್ರೆ..
‘ರೋಡ್ ರೋಮಿಯೋ..’ ಅಂತಾರ್ರೀ.!
ಸದಾ ಪುಸ್ತಕ ಹಿಡಿದು ಕೂತಿದ್ರೆ..
‘ಬುಕ್-ವರ್ಮು..’ ಅಂತಾರ್ರೀ.!
ಕ್ಲಾಸ್ ಬಂಕ್ ಹೊಡೆಯುತ್ತಾ ಇದ್ರೆ..
‘ಮಹಾನ್ ಪೊರ್ಕಿ..’ ಅಂತಾರ್ರೀ.!
ಒಂದು ಪಿರಿಯಡ್ಡು ಬಿಡದೆ ಹೋದ್ರೆ..
‘ಶುದ್ಧ ಕುಡುಮಿ..’ ಅಂತಾರ್ರೀ.!
ಪಬ್ಬು, ಪಾರ್ಕು. ಥೇಟರ್ ಹತ್ರ ಇದ್ರೆ..
‘ಥರ್ಡ್ ಕ್ಲಾಸು ಕಣೇ..’ ಅಂತಾರ್ರೀ.!
ದೇವರು, ಭಜನೆ ಅಂತಾ ಸುತ್ತುತಿದ್ರೆ..
‘ಥೇಟು ಗಾಂಧಿ ಕಣೇ..’ ಅಂತಾರ್ರೀ.!
ಸುಳ್ಳು-ಪೊಳ್ಳು ಹೇಳೋದು ಕೇಳಿದ್ರೆ..
‘ಕಲರ್ಕಾಗೆ ಹಾರಿಸ್ತಾನೆ..’ ಅಂತಾರ್ರೀ.!
ನೀತಿ ನಿಯಮ ಅಂತಾ ಸತ್ಯ ಹೇಳ್ತಿದ್ರೆ..
‘ಹರಿಶ್ಚಂದ್ರನ ತುಂಡು..’ ಅಂತಾರ್ರೀ.!
ಹಂಗಿದ್ರು.., ಹಿಂಗಿದ್ರು.., ಹೆಂಗಿದ್ರು…..
ಏನಾದ್ರು ಅಂದು ತಲಿಗೆ ಹುಳಾ ಬಿಡ್ತಾರ್ರೀ..!
ತಲೆ ಕೆಡಿಸ್ಕೊಂಡು ನಾವು ಒದ್ದಾಡತಿದ್ರೆ..
ಅವರು ಪಾಡಿಗೆ ಅವರು ಅಭ್ಯಾಸ ಮಾಡ್ತಾರ್ರೀ.!!
ಅವರನ್ನು ನೋಡ್ತಾ, ಮಾತು ಕೇಳ್ತಾ..
ನಾವು ಪರೀಕ್ಷೆನಾಗೆ ದಬ್ಬಾಕೊಳ್ತೀವಿ ರೀ..!
ಅವರು ಮಾತ್ರ ಡಿಶ್ಟಿಂಕ್ಷನ್ನಿನ್ನಾಗೆ ಪಾಸಾಗಿ..
‘ಟಾಟಾ.. ಬೈಬೈ..’ ಅಂತ ಹೊಂಟು ಹೋಗ್ತಾರ್ರೀ.!!
– ಎ.ಎನ್.ರಮೇಶ್. ಗುಬ್ಬಿ.
