“ಕರ್ಮಕಾಂಡ ರೀೀೀ..!.!”

“S.S.L.C, P.U.C, NEET, CET, JEE ಎಲ್ಲದರ ಫಲಿತಾಂಶದಲ್ಲೂ ಹುಡುಗಿಯರೇ ಮುಂದು.. ಹುಡುಗರೆಲ್ಲ ಅವರ ಹಿಂದು. ಈ ವರ್ಷವಲ್ಲ.. ಪ್ರತಿವರ್ಷವೂ ಹೀಗೆ.. ಇದು ಏಕೆ ಹೀಗೆ..? ಇದರ ಮರ್ಮವಾದರೂ ಏನೆಂದು ಪಡ್ಡೆ ಪರಮೇಶಿಯನ್ನು ಕೇಳಿದಾಗ.. ಅವನು ಹೇಳಿದ ಕಥೆಯೇ.. ಈ “ಕರ್ಮಕಾಂಡ ರೀ..” ಕವಿತೆ. ಪರೀಕ್ಷೆಗಳಲ್ಲಿ ದಬ್ಬಾಕ್ಕೊಂಡು, ಫಜೀತಿ ಪಡುವ, ಫಲಿತಾಂಶದ ದಿನ ಬರಬಾತ್ ಆಗಿ ಬಿಕ್ಕಳಿಸುವ ಬಡಪಾಯಿ ಗಂಡು ಹೈಕಳ ಬಂಜರು ಹೃದಯದ ಬರಡು ಭಾವಗೀತೆ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.