ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಸುವಾರ್ತೆಯಾಗಿ, ಸರ್ಕಾರವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯನ್ನು 186 ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಮಾರ್ಚ್ 9, 2023ರ ಆದೇಶದ ಪ್ರಕಾರ, ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ವಿವಿಧ ಯೋಜನೆಗಳಡಿ ಹಾಗೂ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಹಾಜರಾತಿ ನಿಯಮಗಳು 1963ರಡಿ ನೊಂದಾಯಿತವಾಗಿದ್ದ ಖಾಸಗಿ ಆಸ್ಪತ್ರೆಗಳು, ಈ ಯೋಜನೆಯಡಿ “ಭಾವಿತ ನೊಂದಾವಣೆ (Deemed Empanelment)” ಒಳಪಡುವಂತಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಆಸ್ಪತ್ರೆಗಳ ಮೂಲಸೌಕರ್ಯ ಹಾಗೂ ಇತರೆ ಮಾನದಂಡಗಳನ್ನು ಪರಿಶೀಲಿಸಿ, ಸೂಕ್ತ MoU ಮಾಡಿಕೊಂಡ ನಂತರವೇ ಈ ಯೋಜನೆಯಲ್ಲಿ ಅಂತಿಮವಾಗಿ ಒಳಪಡಿಸಲಾಗುವುದು.
ಸರ್ಕಾರದ ಈ ತೀರ್ಮಾನದೊಂದಿಗೆ ಆರೋಗ್ಯ ಸೇವೆಗಳ ವ್ಯಾಪ್ತಿ ವಿಸ್ತರಿಸಲ್ಪಟ್ಟಿದ್ದು, ಗ್ರಾಮೀಣ ಮತ್ತು ನಗರ ಭಾಗದ ಜನತೆಗೆ ಉತ್ತಮ ಚಿಕಿತ್ಸೆ ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.
