ಕೊರಟಗೆರೆ: ದೀಪೋತ್ಸವ ನಮ್ಮ ಸಂಸ್ಕೃತಿಯ ಅವಿಭಾಜ್ಯ ಭಾಗ. ದೀಪವು ಕೇವಲ ಬೆಳಕಿನ ಸಂಕೇತವಲ್ಲ. ಅದು ಜ್ಞಾನ ನೈತಿಕತೆ ಮತ್ತು ಆತ್ಮಶುದ್ಧಿಯ ಪ್ರತಿಕವು ಆಗಿದೆ. ಎಂದು ಎಲೆರಾಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ: ಹನುಮಂತನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಠದ ಆವರಣದಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ. ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು. ನಮ್ಮ ಪೂರ್ವಿಕರು ಆಚರಿಸಿದ್ದ ಈ ದೀಪೋತ್ಸವ ತತ್ವವನ್ನು ತಿಳಿದು ಅವರ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳವುದು. ನಿಜವಾದ ಪೂಜೆ. ದೀಪ ಬೆಳಗುವದು. ಕತ್ತಲೆಯನ್ನು ದೂರ ಮಾಡುವ ಕೃತ್ಯ ಇದೇ ರೀತಿಯಾಗಿ ಅಜ್ಞಾನ ದ್ವೇಷ. ಹಿಂಸೆ. ಮುಂತಾದ ಕತ್ತಲೆಯನ್ನು ನಾಶ ಮಾಡಲು ಆತ್ಮದೀಪ ಹಚ್ಚುವುದು ಅಗತ್ಯ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ನರಸಿಂಹರಾಜು ಮಾತನಾಡಿ: ಬೆಳಕಿನಂತೆ ನಮ್ಮ ಬದುಕಿಗೂ ಆಶಾದೀಪ ಬೇಕು ದೀಪೋತ್ಸವದ ನಿಜಾರ್ಥವೇ ಆತ್ಮಶುದ್ಧಿ ಮತ್ತು ಮಾನ್ಯತೆ ಬೆಳಗುವದು ಎಂದು ಹೇಳಿದರು.

ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಸಿ ಸಿಇಓ ಪ್ರಭು. ತಾಲ್ಲೂಕು ಪಂಚಾಯಿತಿ ಇಇಓ ಅಪೂರ್ವ ಪಿ ಡಿಓ ರಮೇಶ್. ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ. ನಂಜುಂಡಯ್ಯ ಕೆ. ಆರ್. ಪೇಟೆಯ ಸಂಸ್ಕೃತ ಪಾಠ ಶಾಲೆಯ ಮುಖ್ಯ ಶಿಕ್ಷಕ ಡಾ. ಕುಮಾರಸ್ವಾಮಿ. ಒಕ್ಕಲಿಂಗ ಯುವ ಬ್ರಿಗೇಡ್ ಸಂಸ್ಥಾಪಕ ನಿರ್ದೇಶಕ ನಂಜೇಗೌಡ. ನಂಜುಂಡ. ಮಠದ ವ್ಯವಸ್ಥಾಪಕ ಗೋವಿಂದರಾಜು. ಸಂತೋಷ್. ಸಂಸ್ಕೃತ ಪಾಠಶಾಲೆಯ ಶಿಕ್ಷಕರಾದ ಗಿರೀಶ್. ಬ್ರಹ್ಮರಂಬಿಕ. ರಘು. ಸಿಬ್ಬಂದಿ ಮನೋಹರ್. ಮೋಹನ . ಶ್ರೀಮಠದ ಸದ್ಭಕ್ತರು ಇದ್ದರು.
-ವರದಿ ನರಸಿಂಹಯ್ಯ ಹೊಸಕೋಟೆ
