KAS ನೇಮಕಾತಿ ಅಧಿಸೂಚನೆ ಪ್ರಕಟಿಸಿದಾಗಿಂದನೂ ಒಂದಾಲ್ಲೊಂದು ಅವಾಂತರಗಳಿಗೆ ಕಾರಣವಾಗಿರುವ ರಾಜ್ಯ ಮತ್ತು KPSC ಯಲ್ಲಿನ ತಿರ್ಮಾನಗಳು, ನೂರಾರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.
ಹೌದು ಇತ್ತೀಚೆಗೆ KAS ಪ್ರೀಲಿಮ್ಸ್ ಪರೀಕ್ಷೆ ಯ ಫಲಿತಾಂಶ ಪ್ರಕಟಿಸಿರುವ KPSC ಮತ್ತೊಂದು ಅವಾಂತರವನ್ನು ಮಾಡಿ, ಕನ್ನಡ ಮಾದ್ಯಮ ವಿದ್ಯಾರ್ಥಿ ಗಳ ನ್ನು ಕೆರಳಿಸಿದೆ.
ಈ ಸಂಭಂದ ಹೋರಾಟವನ್ನು ಮಾಡಿರುವ ಸ್ಪರ್ಧಾರ್ಥಿಗಳು KAS ನೇಮಕಾತಿ ಅಧಿಸೂಚನೆಯನ್ನೇ ರದ್ದು ಪಡಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಬೇಕೆಂದು ಪಟ್ಟಹಿಡಿದಿದೆ.
ಇನ್ನೂ ಈ ಮನವಿಯನ್ನು ಆಲಿಸಿರುವ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಮುಖ್ಯ ಪರೀಕ್ಷೆ ಸೇರಿದಂತೆ ಕೆಎಎಸ್ ನೇಮಕಾತಿ ಸಂಬಂಧಿಸಿದ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದ್ದು, ಮುಂದಿನ ವಿಚಾರಣೆ ಫೆ.25ಕ್ಕೆ ನಿಗದಿಯಾಗಿದೆ.
