ಕಾರಣವ ಏಕೆ
ಹುಡುಕುವೆ..
ಸಾಧಿಸುವುದು ಇನ್ನೂ ಇದೆ..!!
ಅನಾವಶ್ಯಕ ಮಾತೇಕೆ
ಆಡುವೆ..
ಮೌನಕ್ಕೆ ತುಂಬಾ ಬೆಲೆಯಿದೆ..!!
ಹೊಗಳುವವರು
ಹೊಗಳಲಿಬಿಡು..
ತೆಗಳುವವರು
ತೆಗಳಲಿಬಿಡು..
ಇಟ್ಟ ಹೆಜ್ಜೆಯ
ಹಿಂತೆಗೆಯದಿರು..
ದಿಟ್ಟ ನಡೆಯ
ಎಂದೂ ಬದಲಿಸದಿರು..!!
ವಿಧಿಯಾಟಕ್ಕೆ
ಕಾಲವೇ ತತ್ತರ..
ನಿನ್ನ ಸಾಧನೆಯಾಗಿರಲಿ
ಎಲ್ಲದಕ್ಕೂ ಉತ್ತರ..!!
–ಅಪರಿಚಿತ ಮೌನಿ