ಕೊರಟಗೆರೆ:- ಕಲಿಯುಗದ ಮನುಷ್ಯ ದುಡ್ಡಿಗಾಗಿ ಧರ್ಮ ಬೀಡ್ತಿದ್ದಾನೇ. ಮಾನವೀಯ ಮೌಲ್ಯಯುಳ್ಳ ಜೀವನದ ಆದರ್ಶವೇ ಮಾಯವಾಗ್ತಿದೆ. ಮನುಷ್ಯ ಹಣಕ್ಕಾಗಿ ತಂದೆತಾಯಿಯನ್ನೇ ದೂರ ಮಾಡ್ತಿದ್ದಾನೇ. ಸಾಹಿತ್ಯಕ್ಷೇತ್ರ ಸಮಾಜದ ವಾಸ್ತವ ಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಿದ್ದರಬೇಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಸೋಮವಾರ ಏರ್ಪಡಿಸಲಾಗಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದ ಸಂಸ್ಕೃತಿಯಲ್ಲಿ ಮನುಷ್ಯ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡ್ತಿದ್ದ ಆದರೇ ಈಗ ಹಣವೇ ಮನುಷ್ಯನ ಉಸಿರಾಗಿದೆ. ಹಣ ಇದ್ರೇ ಅಧಿಕಾರ ಮತ್ತು ಅಂತಸ್ತು ಬರುತ್ತೇ ಎಂಬ ಭ್ರಮೆಯಲ್ಲಿ ಮನುಷ್ಯನ ಜೀವನ ನಡಿತೀದೆ. ಸಮಾಜವನ್ನು ತಿದ್ದುಕಡೆಗೆ ಸಾಹಿತ್ಯಕ್ಷೇತ್ರ ಪ್ರಮುಖಪಾತ್ರ ವಹಿಸಬೇಕಿದೆ. ಆಹ್ವಾನ ಪತ್ರಿಕೆ ಸಿದ್ದಪಡಿಸೋ ವ್ಯಕ್ತಿಗೇ ಆಪಾದನೇ ತಪ್ಪದು. ಕನ್ನಡದ ಕಾರ್ಯಕ್ರಮ ಯಶಸ್ವಿ ಮಾಡೋದು ನಮ್ಮ ಕರ್ತವ್ಯ ಎಂದರು.

ತುಮಕೂರು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಕೊರಟಗೆರೆಯಲ್ಲಿ ಹಿಂದೇ ಕೇವಲ 300ಜನ ಅಜೀವ ಸದಸ್ಯರಿದ್ರು ಈಗ 1ಸಾವಿರ ಕಸಾಪ ಅಜೀವ ಸದಸ್ಯರಿದ್ದಾರೆ. ತಹಶೀಲ್ದಾರ್ ಮತ್ತು ಕಸಪಾ ಅಧ್ಯಕ್ಷ 10ದಿನದಿಂದ ಹಗಲುರಾತ್ರಿ ಎನ್ನದೇ 2ನೇ ಕಸಾಪ ಸಮ್ಮೇಳನ ಮಾಡಿದ್ದಾರೇ. ಕಸಾಪ ನಮ್ಮೇಳನ ಯಶಸ್ವಿ ಮಾಡಿದೋ ಪ್ರತಿಯೊಬ್ಬ ಕನ್ನಡಿಗನ ಪ್ರಮುಖ ಕರ್ತವ್ಯ ಎಂದರು.
ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ ಮಾತನಾಡಿ ಕೊರಟಗೆರೆಯಲ್ಲಿ 2012ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತೇ ಈಗ 2026ರಲ್ಲಿ ನಡೆದಿದೆ. ಕಸಾಪ ಸಮ್ಮೇಳನಕ್ಕೆ 14ವರ್ಷಗಳಿಂದ ಹಿಡಿದಿದ್ದ ವನವಾಸದ ಗ್ರಹಣ ಈಗ ದೂರವಾಗಿದೆ. ಆಪಾಧನೆ ಮಾಡೋರೋ ಪುಟ್ಟ ಹಳ್ಳಿಯಲ್ಲಿ ಚಿಕ್ಕ ಕಾರ್ಯಕ್ರಮ ಮಾಡಿನೋಡಿ ಗೋತ್ತಾಗುತ್ತೇ. ಸಮ್ಮೇಳನ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಕತೆಗಾರ ಡಾ.ಕರೀಗೌಡ, ಗ್ಯಾರಂಟಿ ಸಮೀತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಗೃಹಸಚಿವ ವಿಶೇಷಾಧಿಕಾರಿ ನಾಗಣ್ಣ, ಸ.ನೌ.ಸಂಘದ ಅಧ್ಯಕ್ಷ ಹೆಚ್.ಎಂ.ರುದ್ರೇಶ್, ತಾಪಂ ಇಓ ಅಪೂರ್ವ, ಪುರಸಭೆ ಸಿಇಓ ಕೆ.ಎಸ್.ಉಮೇಶ್, ಸಿಪಿಐ ಅನಿಲ್ ಸೇರಿದಂತೆ ಇತರರು ಇದ್ದರು.
ಸಮ್ಮೇಳನಕ್ಕೆ ಸಾಂಸ್ಕೃತಿಕ ಮೆರಗು..
ಕೊರಟಗೆರೆ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಹಶೀಲ್ದಾರ್ ಮಂಜುನಾಥ.ಕೆ ಧ್ವಜಾರೋಹಣ ಮಾಡಿದ ನಂತರ ಸಾವಿರಾರು ಜನರೊಂದಿಗೆ ಮುಖ್ಯರಸ್ತೆಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಉದ್ಘಾಟನಾ ವೇದಿಕೆ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ನಂತರ ಸಾಹಿತ್ಯ ಮತ್ತು ಅಭಿವೃದ್ದಿಯ ಸಂಬಂಧ ಕವಿಗೋಷ್ಟಿ ಮತ್ತು ವಿಚಾರಗೋಷ್ಟಿಯ ಮೂಲಕ ಸಾಂಸ್ಕೃತಿಕ ಮೆರುಗು ಹೆಚ್ಚಿತ್ತು.
ಕೊರಟಗೆರೆಯಲ್ಲಿ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿನಿಂದ 14ವರ್ಷದ ವನವಾಸ ದೂರ ಸರಿದಿದೆ. ಕೊರಟಗೆರೆಯಲ್ಲಿ 300ರಷ್ಟು ಇದ್ದ ಕಸಾಪ ಅಜೀವ ಸದಸ್ಯರು ಈಗ 1ಸಾವಿರದ ಗಡಿಗೆ ತಲುಪಿದ್ದೇವೆ. ಧ್ವಜರೋಹಣ, ಕವಿಗೋಷ್ಟಿ, ವೇದಿಕೆ ಹಬ್ಬ, ಮೇರವಣಿಗೆ, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿದೆ.
ಕೆ.ಎಸ್.ಈರಣ್ಣ. ಅಧ್ಯಕ್ಷ. ಕಸಾಪ. ಕೊರಟಗೆರೆ
14ವರ್ಷಗಳಿಂದ ಕೊರಟಗೆರೆ ಸಾಹಿತ್ಯಕ್ಷೇತ್ರಕ್ಕೆ ಹಿಡಿದಿದ್ದ ಗ್ರಹಣ ದೂರಸರಿದು ಸಮ್ಮೇಳನ ಯಶಸ್ವಿಯಾಗಿದೆ. ನನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ ಕಸಾಪ ಮತ್ತು ಕೊರಟಗೆರೆ ಆಡಳಿತಕ್ಕೆ ಧನ್ಯವಾದಗಳು. ಕೊರಟಗೆರೆಯಲ್ಲಿ ಸುಸರ್ಜಿತ ಹೈಟೇಕ್ ಗ್ರಂಥಾಲಯ, ಅಂಬೇಡ್ಕರ್ ಮತ್ತು ಕನ್ನಡ ಭವನದ ಬೇಡಿಕೆಯಿದೆ. ತುಂಬಾಡಿ ರಾಮಯ್ಯ. ಕಸಾಪ ಸಮ್ಮೇಳನಾಧ್ಯಕ್ಷ. ಕೊರಟಗೆರೆ
ವರದಿ : ಶ್ರೀನಿವಾಸ್ ಆರ್
