ಕೊರಟಗೆರೆ : ಕೊರಟಗೆರೆ ಮಾರ್ಗದಿಂದ ಎಂ ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಸವಾರ ಆತುರದಿಂದ ಅನಾಹುತ ಒಂದು ತಪ್ಪಿರುವ ಘಟನೆ ರೆಡ್ಡಿಕಟ್ಟೆ ಸಮೀಪ ನೆಡೆದಿದೆ.ತಾಲೂಕಿನ ಹೊಳವನಹಳ್ಳಿ ಮಾರ್ಗದಿಂದ ಬಸ್ ಒಂದು ರೆಡ್ಡಿಕಟ್ಟೆ ಸಮೀಪ ಬರುತ್ತಿದ್ದಾಗ ಕೊರಟಗೆರೆ ಮಾರ್ಗವಾಗಿ ಎಂ ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ವಾಹನಕ್ಕೆ ಬಸ್ ಚಾಲಕ ದಾರಿ ಬಿಡಲು ರಸ್ತೆ ಬದಿಗೆ ಇಳಿಸಿದ್ದಾನೆ. ಬಸ್ ಹಿಂದೆ ವೇಗವಾಗಿ ಬರುತ್ತಿದ್ದ ಬೈಕ್ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದ ಬೈಕ್ ಸವಾನನ್ನ ಉಳಿಸಲು ಹೋಗಿ ರಸ್ತೆ ಬದಿಯ ಚಾನಲ್ಗೆ ಎಳೆದಿದ್ದಾನೆ. ಸದ್ಯ ಟ್ರ್ಯಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭಿವಿಸಿಲ್ಲ ಎಂದು ತಿಳಿದುಬಂದಿದೆ.
