ಕೊರಟಗೆರೆ :- ಮುರಾರ್ಜಿ ವಸತಿ ಶಾಲೆಗೆ ಶಾಲಾ ವಾರ್ಷಿಕೋತ್ಸವಕ್ಕೆ ತೆರಳುತ್ತಿದ್ದ ಎರಡನೇ ತರಗತಿಯ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾದ ದುರ್ಘಟನೆ ಕೊರಟಗೆರೆ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ಪಟ್ಟಣದ ಊಡಿಗೆರೆ ಕ್ರಾಸ್ ಎಂ ಜಿ ಪ್ಯಾಲೇಸ್ ಬಳಿ ಈ ದುರ್ಘಟನೆ ಜರುಗಿದ್ದು, ಎರಡನೇ ತರಗತಿ ವಿದ್ಯಾರ್ಥಿನಿ ಜಾನು 7 (ವರ್ಷ) ಅಪಘಾತಕ್ಕೆ ಈಗಾಗಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ.

ಮೂಲತಹ ಪಾವಗಡ ತಾಲೂಕು ಗುಜ್ಜನಾಡು ಸಿಎನ್ ಪಾಳ್ಯ ಗ್ರಾಮದ ನರಸಿಂಹಯ್ಯ ಎಂಬುವರ ಮಗಳು ಜಾನು ಸಿದ್ದರಬೆಟ್ಟದ ಮುರಾರ್ಜಿ ವಸತಿ ಶಾಲೆಯ ಶಾಲಾ ವಾರ್ಷಿಕೋತ್ಸವಕ್ಕೆ ಪಾಲ್ಗೊಳ್ಳುವ ಸಂದರ್ಭದಲ್ಲಿ ತಂದೆ ತಾಯಿ ಜೊತೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್ ಲಾರಿ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಜಾನು ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸಿಪಿಐ ಅನಿಲ್ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್ , ಕೊರಟಗೆರೆ
