ಕೊರಟಗೆರೆ :– ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಮಹತ್ವ ಪಡೆಯುತ್ತಿರುವ ಈ ಹೊತ್ತಿನಲ್ಲಿ ಪತ್ರಕರ್ತ ಸಾಮಾಜಿಕ ಹೋರಾಟಗಾರ, ಹಾಗೂ ನಟ ನಿರ್ದೇಶಕ ಟೈಗರ್ ನಾಗ್ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿನಿಬ್ಬಣದ 69ನೇ ವರ್ಷದ ನೆನಪಿಗಾಗಿ 69 ಗೀತೆಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ 69 ಗೀತೆಗಳು ಏಕಕಾಲದಲ್ಲಿ ಬಿಡುಗಡೆ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ.
ವಿಧಾನಸೌಧ ಆವರಣದ ಅಂಬೇಡ್ಕರ್ ಪ್ರತಿಮೆಯ ಮುಂಬಾಗದಲ್ಲಿ ಅಂಬೇಡ್ಕರ್ ಅವರ 69ನೇ ಪರಿನಿಬ್ಬಣ ದಿನದಂದು ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ , ಸಮಾಜ ಕಲ್ಯಾಣ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಸಚಿವ ಜಮೀರ್ ಆಹಮದ್ ಇವರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಟೈಗರ್ ನಾಗ್ ಆವರನ್ನು ಮುಖ್ಯಮಂತ್ರಿಗಳಿಗೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರು ಟೈಗರ್ ನಾಗ್ ಅವರನ್ನೂ ಪರಿಚಯಿಸಿದರು. ಮುಖ್ಯಮಂತ್ರಿಗಳು ಟೈಗರ್ ನಾಗ್ ಅವರ ಪ್ರಯತ್ನವನ್ನು ಪ್ರೋತ್ಸಾಹಿಸಿ ಇಂತಹ ಕೆಲಸಗಳಿಗೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಪ್ರೋತ್ಸಾಹ ನೀಡಲಾಗುವುದು ಎಂದರು.
ಇದನ್ನು ಓದು: ಹಾಸನ : ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು- ಅಂಗಾಂಗ ದಾನ ಮೂಲಕ ಹಲವರಿಗೆ ಜೀವದ ಆಶಾಕಿರಣವಾದ ಯೋಗೇಶ್
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಜೆಟ್ಟಿ ಅಗ್ರಹಾರ ಗ್ರಾಮದ ಟೈಗರ್ ನಾಗರಾಜು ರಾಜ್ಯಾದ್ಯಂತ ಹಲವು ಜನಪರ ಕಾರ್ಯಗಳ ಜೊತೆಗೆ ಕರ್ನಾಟಕದ ಸೆನ್ಸರ್ ಆಫೀಸರ್ ವಿರುದ್ಧ ಹೋರಾಟ ಮಾಡಿ ಸಿಬಿಐ ಟ್ರಾಪ್ ಮಾಡಿಸಿದ ಪ್ರಕರಣ ದೇಶಾದ್ಯಂತ ಸುದ್ದಿ ಆಯಿತು , ಇವರು ಅಡವಿ ಎಂಬ ಚಿತ್ರವನ್ನು ನಿರ್ದೇಶನ ನಿರ್ಮಾಣ ಮಾಡಿ, ಈಗ “ಭೀಮರಾವ್ ಅಂಬೇಡ್ಕರ್ ಕೊನೆಯ ದಿನಗಳು” ಎಂಬ ಸಿನಿಮಾ ಮಾಡಲು ತಯಾರಾಗಿದ್ದಾರೆ, ಭಾರತದ ಇತಿಹಾಸದಲ್ಲಿ ಯಾರು ಮಾಡಿರದ ಪ್ರಯತ್ನಕ್ಕೆ ಟೈಗರ್ ಮುಂದಾಗಿದ್ದಾರೆ ಡಾ. ಬಿ ಆರ್ ಅಂಬೇಡ್ಕರ್ ಅವರ 69ನೇ ಪರಿನಿರ್ವಣ ದಿನದ ಅಂಗವಾಗಿ 69 ಗೀತೆಗಳು ರಚಿಸಿ ಸಂಗೀತ ಸಂಯೋಜನೆ ಮಾಡಿ ಮಾನ್ಯ ಮುಖ್ಯಮಂತ್ರಿಯವರಿಂದ ಬಿಡುಗಡೆ ಮಾಡಿಸಿದ್ದಾರೆ,
ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾದ ಪೀ. ಮೂರ್ತಿ, ಭೀಮ್ ಆರ್ಮಿ ರಾಜ್ಯ ಅಧ್ಯಕ್ಷರಾದ ರಾಜಗೋಪಾಲ್, ಪ್ರಗತಿಪರ ಚಿಂತಕಿ ಮಧು ಹೊಲೆಯಾರ್, ಹಾಗೂ ಇನ್ನಿತರ ಪ್ರಗತಿಪರ, ದಲಿತಪರ ಹೋರಾಟಗಾರರು,ಚಿಂತಕರು ಸಾಹಿತಿಗಳು ಭಾಗಿಯಾಗಿದ್ದರು.
– ಶ್ರೀನಿವಾಸ್ , ಕೊರಟಗೆರೆ.
