ಕೊರಟಗೆರೆ: ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರು ಮಾತನಾಡಿ: ಎಲೆರಾಂಪುರ ಗ್ರಾಮ ನನಗೆ ಒಂದು ತವರು ಊರು ಇದ್ದ ಹಾಗೆ. ವರ್ಷದಲ್ಲಿ ಹಲವಾರು ಬಾರಿ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಮಾಡುತ್ತಿದ್ದು. ಈ ಗ್ರಾಮದಲ್ಲಿ ನನಗೆ ತಪ್ಪದೆ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಾರೆ. ಪ್ರತಿ ಕಾರ್ಯಕ್ರಮಕ್ಕೆ ತಪ್ಪದೆ ಹಾಗೂ ಪ್ರತಿ ವರ್ಷದಿಂದ ವರ್ಷಕ್ಕೆ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದು ಭಾಗಿಯಾಗುತ್ತೇನೆ. ಇದೀಗ ಶಾಲಾ ವಾರ್ಷಿಕೋತ್ಸವಕ್ಕೆ ನನ್ನನ್ನು ಕರೆ ನೀಡಿದ್ದು.

ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕ ಶಿಕ್ಷಕಿಯರು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿದ್ದು. ದಯವಿಟ್ಟು ಪೋಷಕರು ಸರ್ಕಾರಿ ಶಾಲೆಯ ಕಡೆಗೆ ಗಮನ ಹರಿಸಿ ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಆಗ ಮಾತ್ರ. ಸರ್ಕಾರಿ ಶಾಲೆ ಉಳಿಯುತ್ತದೆ. ಶಾಲೆಯಲ್ಲಿ ಅಂತ ಹಂತವಾಗಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ. ಮಕ್ಕಳಿಗೆ ಹಾಗೂ ಪೋಷಕರಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದರೆ. ಮಕ್ಕಳಲ್ಲಿ ದೈಹಿಕ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಆಗಬೇಕು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುವುದು ಹಾಗೂ ಬರೆಯುವುದು ಬಹಳ ಮುಖ್ಯವಲ್ಲ. ಜೀವನದಲ್ಲಿ ಪ್ರತಿಭೆ ಎಂಬುದು ಬಹಳ ಮುಖ್ಯ. ಪ್ರತಿಭೆಯನ್ನು ಹೊರ ತರುವ ಹಾಗೂ ಇಂತಹ ಕಾರ್ಯಕ್ರಮಗಳನ್ನು ಗುರುತಿಸುವಂತಹ ಕೆಲಸವಾಗುತ್ತದೆ. ಇದೊಂದು ಅವಕಾಶ ಅವರ ಪ್ರತಿಭೆಯನ್ನು ತೋರಿಸುವಂತಹ ಅವಕಾಶವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕೋಳಾಲ ಹೋಬಳಿಯ 1ನೇ ತರಗತಿಯಿಂದ. 10ನೇ ತರಗತಿಯವರೆಗೆ ಪ್ರತಿ ಮಕ್ಕಳಿಗೆ ಬಟ್ಟೆ ಕೊಡುವ ಕೆಲಸವನ್ನು ಮಾಡುತ್ತೇನೆ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಸಂದರ್ಭದಲ್ಲಿ ಎಸ್ .ಡಿ.ಎಂ.ಸಿ ಅಧ್ಯಕ್ಷ ಚೇತನ್ ಕುಮಾರ್ ಹಾಗೂ ಸದಸ್ಯರು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕಿಯರು ಹಾಜರಿದ್ದರು. ಪಿ. ಎನ್ ಕೃಷ್ಣಮೂರ್ತಿ ರವರು 20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯ ಆಗಿದಾಗಿಂದಲೂ.ಅಂತಂತವಾಗಿಹಲವಾರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಇದೀಗ ನಮ್ಮ ಶಾಲೆಯಲ್ಲಿ 94 ವಿದ್ಯಾರ್ಥಿಗಳು ವಾಸಂಗ ಮಾಡುತ್ತಿದ್ದು ಅವರಿಗೆ ಊಟ ಮಾಡಲು ಹಾಗೂ ನೆರಳಿನಲ್ಲಿ ಕುಳಿತುಕೊಳ್ಳಲು 20 ದಿನದಲ್ಲಿ ಸೀಟು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದು ಅವರಿಗೆ ನಮ್ಮ ಊರಿನ ಪರವಾಗಿ ಧನ್ಯವಾದಗಳು. ಮಾಜಿ ಉಪಾಧ್ಯಕ್ಷ ಉಮೇಶ್ ಚಂದ್ರು ಹಾಗೂಹಲವಾರ ಮುಖಂಡರುಗಳ ಉಪಸ್ಥಿತರಿದ್ದರು
-ವರದಿ ನರಸಿಂಹಯ್ಯ ಹೊಸಕೋಟೆ
