ಕೊರಟಗೆರೆ :- ತಾಲೂಕಿನಲ್ಲಿ ಅತಿ ಕಮ್ಮಿ ಜನ ಸಂಖ್ಯೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ತಿಗಳರ ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ಸಮುದಾಯದ ವಿಧ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ಸರ್ಕಾರ ನಿವೇಶನ ನೀಡಬೇಕಂದು ತಾಲೂಕು ತಿಗಳರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಟಿ.ಮಂಜುನಾಥ್ ಪ್ರಭಾರಿ ತಾಶೀಲ್ದಾರ್ ಎ.ಜೆ.ರಾಜುರವರಿಗೆ ಮನವಿ ಪತ್ರ ಸಲ್ಲಿಸಿದರು.
ಅವರು ಕೊರಟಗೆರೆ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಪ್ರಭಾರಿ ತಾಶೀಲ್ದಾರ್ ಎ.ಜೆ.ರಾಜು ಅಧ್ಯಕ್ಷತೆಯಲ್ಲಿ ಏರ್ಪಟಿಸಿದ್ದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕೊರಟಗೆರೆ ತಾಲೂಕು ತಿಗಳರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳೊಂದಿಗೆ ಭಾಗವಹಿಸಿ ಮನವಿ ಪತ್ರ ಸಲ್ಲಿಸಿ ತಾಲೂಕಿನಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಆಥಿರ್ಕವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಸಂಘಟನೆಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧ್ದಿಗೆ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ತಾಲೂಕಿನ ಜಂಪೇನಹಳ್ಳಿ ಸರ್ವೇ ನಂ 17 ರಲ್ಲಿ 20 ಗುಂಟೆ ಜಮೀನು ಸರ್ಕಾರ ದಿಂದ ಮೂಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು ನಂತರ ಸಭೆಯಲ್ಲಿ ತಾಲೂಕು ಆಡಳಿತ ವತಿಯಿಂದ ಮಾ.28 ರಂದು ಭಾನುವಾರ ಬೆಳ್ಳಿಗೆ 11 ಗಂಟೆಗೆ ತಾಲೂಕು ಕಛೇರಿ ಸಭಾಂಗಣದಲ್ಲಿ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮ ಆಚರಣೆ ಮಾಡುವುದಾಗಿ ತಿರ್ಮಾನಿಸಲಾಯಿತು.
ಪೂರ್ವ ಭಾವಿ ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಎ.ಜೆ.ರಾಜು, ಚುನಾವಣಾ ಶಿರಸ್ದೇದಾರ್ ಮಂಜುನಾಥ್, ನಕುಲ್, ಸಮಾಜ ಕಲ್ಯಾಣಾಧಿಕಾರಿ ಯಮುನಾ, ತಾಲೂಕು ತಿಗಳರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಟಿ.ಮಂಜುನಾಥ್, ಕಾರ್ಯದರ್ಶಿ ಜಿ.ಟಿ.ರಂಗಣ್ಣ, ನಿದೇಶಕರುಗಳಾದ ಶ್ರೀರಂಗಯ್ಯ, ಬಾಲರಾಜು, ಚಿಕ್ಕತಿಮ್ಮಯ್ಯ, ಎಸ್.ಡಿ.ವೆಂಕಟೇಶ್, ಜಿ.ರಾಮಯ್ಯ, ರಾಮಣ್ಣ, ಪ್ರಕಾಶ್, ಎಸ್.ಬಿ.ಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.
– ಶ್ರೀನಿವಾಸ್ ಕೊರಟಗೆರೆ.
