ಕೊರಟಗೆರೆ: -ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯಕ್ಯಾಮೇನಹಳ್ಳಿ ಸುಪ್ರಸಿದ್ಧ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ರಥಸಪ್ತಮಿ ವಿಜೃಂಭಣೆಯಿಂದ ಜರುಗಿತು.ಈ ಜಾತ್ರಾ ಮಹೋತ್ಸವ ಸಂಕ್ರಾಂತಿಯ ನಂತರದ ದಿನಗಳಲ್ಲಿ ಸೂರ್ಯನ ಹುಟ್ಟು ಹಬ್ಬದ ದಿನವಾದ ರಥಸಪ್ತಮಿಯoದು ನಡೆಯುತ್ತದೆ.
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯವು ಸುಮಾರು 5000 ವರ್ಷಗಳಷ್ಟು ಹಳೆಯದಾಗಿದ್ದು ಇಲ್ಲಿನ ಆಂಜನೇಯ ಸ್ವಾಮಿ ವಿಗ್ರಹವನ್ನು ಜನಮೇಜಯ ಎಂಬ ಮಹಾರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತಿತಿಯಿದೆ ಇದು ತ್ರಿಮುಖ (ಹನುಮ ಭೀಮ ಮಧ್ವ) ರೂಪವಾಗಿ ಎದುರು ಮುಖ ಆಂಜನೇಯ ಸ್ವಾಮಿ ಮೂರ್ತಿಯಾಗಿದೆ. ರಥೋತ್ಸವದ ಚಾಲನೆಯನ್ನು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಮತ್ತು ದೇವಾಲಯದ ಆಡಳಿತ ಮಂಡಳಿಯು ನೆರವೇರಿಸಿತು.

ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ ರಥದ ಮೇಲೆ ರಾಮ ಲಕ್ಷ್ಮಣ ಸೀತಾ ಮತ್ತು ಆಂಜನೇಯ ಸ್ವಾಮಿ ವಿಗ್ರಹಗಳನ್ನು ಕೂರಿಸುತ್ತಾರೆ. ಈ ಸಂದರ್ಭದಲ್ಲಿ ಆಕಾಶದಲ್ಲಿ ಗರುಡ ಪಕ್ಷಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ. ಭಕ್ತರು ಹನುಮನ ಭಕ್ತಿ ಶ್ರೀ ರಾಮನ ಪರಿಪಟನೆ ಮಾಡುತ್ತಾ ರಥವನ್ನು ಎಳೆದರು. ರಥಸಪ್ತಮಿ ಅಂಗವಾಗಿ ಮುಂಜಾನೆಯಿಂದಲೇ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಲಾಗಿತ್ತು. ರಥ ಬರುವ ದಾರಿಯಲ್ಲಿ ಸಾಸ್ತಾನ ಭಕ್ತರು ದವನ ಬಾಳೆಹಣ್ಣು ಎಸೆದು ಹರಕೆ ತಿಳಿಸಿದರು.

ಪಿ.ಎನ್. ಕೃಷ್ಣಮೂರ್ತಿ ಕುಟುಂಬದಿಂದ 20 ವರ್ಷಗಳಿಂದ ಕ್ಯಾಮೇನಳ್ಳಿ ಆಂಜನೇಯ ಸ್ವಾಮಿಗೆ ಸೇವೆಸಲ್ಲಿಸುತ್ತಿದ್ದಾರೆ ದೇವಾಲಯದ ಮತ್ತು ರಥಕ್ಕೆ ಪುಷ್ವಲಂಕಾರವನ್ನು ದೇವಾಲಯದ ಆಂಜನೇಯ, ರಾಮ ಲಕ್ಷ್ಮಣರ, ವೆಂಕಟರಮಣ ಸ್ವಾಮಿಯ ವಿಗ್ರಹಗಳಿಗೆ ಪುಷ್ಪಲಂಕಾರವನ್ನು ಸಮಾಜ ಸೇವಕರಾದ ಪಿ.ಎನ್. ಕೃಷ್ಣಮೂರ್ತಿ ಕುಟುಂಬದಿಂದ ನೆರವೇರಿಸಿದ್ದರು . ಬ್ರಹ್ಮರಥೋತ್ಸವದಲ್ಲಿ ಬಂದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ. ಪಾನಕ, ಹೆಸರುಬೇಳೆ ಮತ್ತು ಅನ್ನ ಸಂತರ್ಪಣೆಯನ್ನು ಮಾಡಿದರು.
ಪಿ.ಎನ್. ಕೃಷ್ಣಮೂರ್ತಿ ಅವರು ಮಾತನಾಡಿ ಪ್ರತಿ ವರ್ಷವೂ ನಾವು ನಮ್ಮ ಕುಟುಂಬದವರು ಸ್ವಾಮಿಯ ಪೂರ್ಣ ದೇವಾಲಯಕ್ಕೆ ಬೇಕಾಗುವ ಹೂವಿನ ಅಲಂಕಾರ ಮತ್ತು ಅನ್ನ ಸಂತರ್ಪಣೆ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಆಡಳಿತ ಮಂಡಳಿಯು ದೇವಾಲಯದ ಆವರಣದಲ್ಲಿ ಜಾಗ ನೀಡಿದ್ದಾರೆ.
ಒಂದು ಸಮುದಾಯ ಭವನವನ್ನು ನಿರ್ಮಿಸಿ ದೇವಾಲಯದ ಆಡಳಿತಕ್ಕೆ ನೀಡುವುದಾಗಿ ಹೇಳಿದರು. ದೇವರು ಸಮಾಜ ಸೇವಕರಾಗಿರುವ ನಮಗೆ ಮುಂದೆ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ ಜೈ ಆಂಜನೇಯ ಸ್ವಾಮಿಯನ್ನು ಕೇಳಿಕೊಂಡರು. ರಥೋತ್ಸವದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಮತ್ತು ಪಿ.ಎನ್. ಕೆ.ಅಭಿಮಾನಿಗಳು ಮುಂದಿನ ದಿನಗಳಲ್ಲಿ ನೀವು ನಮ್ಮ ಶಾಸಕರಾಗಬೇಕು ಎಂದು ರಥೋತ್ಸವಕ್ಕೆ ಬಾಳೆ ಹಣ್ಣನ್ನು ಎಸೆಯುವುದರ ಮುಖಾಂತರ ಪಿ. ಎನ್. ಕೆ. ಅವರಿಗೆ ಮುಂದಿನ ಚುನಾವಣೆಗೆ ಸ್ವಾಗತ ತಿಳಿಸಿದರು.
ಇದೆ ಸಂದರ್ಭದಲ್ಲಿ ಗೃಹ ಸಚಿವರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇವರ ಜೊತೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಎಸ್. ಪಿ. ಅಶೋಕ್, ಡಿವೈಎಸ್ಪಿ ಮಂಜುನಾಥ್ ಉಪವಿಭಾಗ ಅಧಿಕಾರಿ ಕೊಟ್ಟೂರು ಶಿವಪ್ಪ. ತಹಶೀಲ್ದಾರ್ ಮಂಜುನಾಥ್, ಇ. ಓ. ಅಪೂರ್ವ ಸಿ.ಪಿ.ಐ.ಅನಿಲ್. ಪಿ.ಎಸ್.ಐ. ಗಳಾದ ಯೋಗೀಶ್. ತೀರ್ಥೇಶ್. ಅಭಿಷೇಕ್. ಕ್ಯಾಮೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಾವಿರಾರು ಹನುಮ ಭಕ್ತರು ಭಾಗವಹಿಸಿದ್ದರು.
ವರದಿ : ನರಸಿಂಹಯ್ಯ ಕೊರಟಗೆರೆ
