ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ತೀತಾ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಸರೆ ಫೌಂಡೇಶನ್ ವತಿಯಿಂದ ಕಂಪ್ಯೂಟರ್ಗಳನ್ನು ವಿತರಿಸಿ, ಗ್ರಾಮೀಣ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲಾಯಿತು.

ಈ ಕಾರ್ಯಕ್ರಮದ ಉದ್ದೇಶ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಸೇರಿ ವಿದ್ಯಾವಂತರಾಗುವಂತೆ ಪ್ರೋತ್ಸಾಹಿಸುವುದು ಎಂದು ಸಂಸ್ಥೆಯ ಅಧ್ಯಕ್ಷ ಹೊನ್ನೇಶ್ ಪಿ ಕೆ ತಿಳಿಸಿದರು.

ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ವೀರಕ್ಯಾತಪ್ಪ, ಸಹ ಶಿಕ್ಷಕರು ರಮೇಶ್ ಬಿ ಎಲ್ ಮತ್ತು ಮಂಜುಳಾ ಕೆ ಎಸ್, ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್, ಸದಸ್ಯರು ರವಿಕುಮಾರ್, ರೋಟೇರಿಯನ್ ನರಸಿಂಹಮೂರ್ತಿ, ಸಂಸ್ಥೆಯ ನಿರ್ದೇಶಕರು ಪ್ರಸನ್ನಕುಮಾರ್, ನಾರಾಯಣಪ್ಪ, ಉಮೇಶ್ ಹಾಜರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
