ಕೊರಟಗೆರೆ : ತಾಲ್ಲೂಕಿನ ಚಂದ್ರಯಾನದುರ್ಗ ಹೋಬಳಿ ಚನ್ನಪಟ್ಟಣ ಗ್ರಾಮ ವ್ಯಾಪ್ತಿಯ ಗೋಮಾಳ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ.
ಚನ್ನಪಟ್ಟಣ ಗ್ರಾಮಕೆ ಒಳಪಟ್ಟ ಸರ್ವೇ ನಂ 79 ರಲ್ಲಿ ಒಟ್ಟು 36 ಎಕರೆ 32 ಗುಂಟೆ ಸರ್ಕಾರಿ ಗೋಮಾಳವನ್ನು ಗುರುತಿಸಿದ್ದು. ಉಳ್ಳವರು ಪ್ರಭಾವಿಗಳು ಸರ್ಕಾರಿ ಗೋಮಾಳವನ್ನು ಆಕ್ರಮಿಸಿದ್ದಾರೆ ಎಂದು ಸ್ಥಳೀಯರು ಹಾಗೂ ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಸ್ಥಳೀಯರ ಸಮ್ಮುಖದಲ್ಲಿ ಸರ್ಕಾರಿ ಗೋಮಾಳ ದುರ್ಬಳಕೆ ಆಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಭೀಮ್ ಆರ್ಮಿ ಸಂಘಟನೆಯ ಸುರೇಶ್ ರವರು ಮಾತನಾಡಿ : ಸರ್ವೇ ನಂಬರ್ 79 ರಲ್ಲಿ ಸುಮಾರು 2 ರಿಂದ 3 ಎಕರೆ ಸರ್ಕಾರಿ ಗೋಮಾಳ ಜಮೀನು ಒತ್ತುವರಿ ಮಾಡಿರುವುದು ವಿಪರ್ಯಾಸ ಸಂಗತಿ. ಸುಮಾರು ಒಂದು ತಿಂಗಳಿಂದ ದೊಡ್ಡ ದೊಡ್ಡ ಯಂತ್ರಗಳಿಂದ ಸರ್ಕಾರಿ ಗೋಮಾಳಕ್ಕೆ ಒಳಪಟ್ಟ ದೊಡ್ಡ ಗುಟ್ಟೇಯನ್ನೇ ಕರಗಿಸಿರುವ ಘಟನೆ ಚಂದ್ರಯಾನ ದುರ್ಗಾ ಹೋಬಳಿಯ ಚನ್ನಪಟ್ಟಣದ ಸರ್ವೇ ನಂಬರ್ 79 ರಲ್ಲಿ ನಡೆದಿದ್ದು . ಕಂದಾಯ ಇಲಾಖೆ ಇದಕ್ಕೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.
ಕಂದಾಯ ಇಲಾಖೆಯ ನಿರ್ಲಕ್ಷವೇ ಇದಕ್ಕೆ ಕಾರಣ. ತಾಲ್ಲೂಕಿನಲ್ಲಿ ಸರ್ಕಾರಿ ಜಾಗದಲ್ಲಿ ಮಣ್ಣು ತೋಡುವುದು. ಮಣ್ಣು ಮಾರಾಟ ಮಾಡುವುದು.ಸೋಲಾರ್ ಪ್ಲಾಂಟ್ ನಿರ್ಮಾಣದ ಒತ್ತುವರಿ. ಅನಧಿಕೃತ ನೀರಿನ ಟ್ಯಾಂಕುಗಳ ನಿರ್ಮಾಣಈಗೆ ಗೋಮಾಳ ಜಮೀನುಗಳನ್ನು ಹತ್ತು ಹಲವು ಕಾರಣಗಳಿಂದ ಬಳಕೆ ಮಾಡಿಕೊಳ್ಳುತ್ತಿದ್ದು. ಗೋಮಾಳಗಳು ಕಣ್ಮರೆಯಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಆದ್ದರಿಂದ ಗೋಮಾಳಗಳನ್ನು ಗುರುತಿಸಿ ತಾಲ್ಲೂಕಿನಾದ್ಯಂತ ಕಂದಾಯ ಇಲಾಖೆ ಒಂದು ಅಭಿಯಾನವನ್ನು ಕೈಗೊಳ್ಳಬೇಕು ಎಂಬುದು ನಮ್ಮ ಸಂಘಟನೆಯ ಅಭಿಲಾಷೆ ಹಾಗೂ ಸರ್ಕಾರಿ ಜಮೀನು ನಾವು ಉಳಿಸಬೇಕು ದನ ಕರು ಮೇಯುವ ಜಾಗಕ್ಕೆ ಅವಕಾಶ ಮಾಡಿಕೊಡಲು ಕಂದಾಯ ಇಲಾಖೆ, ಕ್ರಮ ಕೈಗೊಳ್ಳಬೇಕು. ಗೋಮಾಳ ಒತ್ತುವರಿ ಮಾಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.
ಸ್ಥಳದಲ್ಲಿ ಭೀಮ ಆರ್ಮಿ ಸಂಘಟನೆಯ ಅಧ್ಯಕ್ಷ ಸುರೇಶ್ ಹಾಗೂ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಗೋಪಾಲಕೃಷ್ಣ ಸಾಮಾಜಿಕ ಕಾರ್ಯಕರ್ತ ಹರ್ಷ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
