ಕೊರಟಗೆರೆ;- ದಲಿತ ಸಮುದಾಯದವರಿಗೆ ಸ್ಮಶಾನ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಪುಟ್ಟಸಂದ್ರ ಗ್ರಾಮದ ದಲಿತ ಮುಖಂಡರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಪುಟ್ಟಸಂದ್ರ ದಲಿತ ಕಾಲೋನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಲ್ಲಿ 1ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಸಾಕಷ್ಟು ವರ್ಷದಿಂದ ದಲಿತರಿಗೆ ಪ್ರತ್ಯೇಕ ಸ್ಮಶಾನವನ್ನ ಮಂಜೂರು ಮಾಡಿಕೊಡುವಂತೆ ಆನೇಕ ಭಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದರು.
ಅ.17ರ ಶುಕ್ರವಾರ ಇಂದ್ರಮ್ಮ ಎನ್ನವ ದಲಿತ ಮಹಿಳೆ ಮೃತಪಟ್ಟಿದ್ದಾರೆ. ಗೋಕಟ್ಟೆ ಸಮೀಪ ಅಂತ್ಯ ಸಂಸ್ಕಾರ ಮಾಡಲು ಹೋದರೆ ಇದು ಕೋರ್ಟ್ನಲ್ಲಿ ಕೇಸ್ ಇದೆ ಇಲ್ಲಿ ಅಂತ್ಯ ಸಂಸ್ಕಾರ ಮಾಡಬೇಡಿ ಎಂದು ಅಧಿಕಾರಿಗಳೇ ಹೇಳುತ್ತಾರೆ. ಮತ್ತೆ ಅಂತ್ಯ ಸಂಸ್ಕಾರ ಮಾಡುವುದಾದರೂ ಎಲ್ಲಿ. ನಮಗೆ ಶಾಶ್ವತವಾಗಿ ಒಂದು ಜಾಗವನ್ನ ಗುರುತಿಸಿ ಕೊಡಿ ಎಂದು ದಲಿತ ಮುಖಂಡರು ಅಧಿಕಾರಿಗಳಿಗೆ ಮನವಿ ಮಾಡಿದರು.
ಕಳೆದ ಬಾರಿ ನಮ್ಮ ಸಮುದಾಯದವರು ಮೃತಪಟ್ಟಾಗ ಗೋಕಟ್ಟೆ ಪಕ್ಕ ಜಾಗ ತೋರಿಸಿ ಅಲ್ಲಿಯೇ ಸ್ಮಶಾನವನ್ನ ಗುರುತಿಸಿ ಅಂತ್ಯ ಸಂಸ್ಕಾರ ಮಾಡಲಾಯಿತ್ತು. ನಂತರ ಅಲ್ಲಿ ಇರುವ ಅಕ್ಕಪಕ್ಕದವರು ಅಲ್ಲಿ ಅಂತ್ಯ ಸಂಸ್ಕಾರ ಮಾಡದಂತೆ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ನಮಗೆ ಸ್ಮಶಾನಕ್ಕೆ ಜಾಗ ನೀಡುವುದಾಗಿ ಮಾತು ಕೊಟ್ಟಿದ್ದ ತಹಸೀಲ್ದಾರ್ ಅವರು ಇಲ್ಲಿವರೆಗೂ ಸ್ಮಶಾನ ಮಂಜೂರು ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದಲಿತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ಪುಟ್ಟರಾಜು ಮಾತನಾಡಿ ನಮ್ಮ ಪೂರ್ವಜರು ಖಾಸಗಿ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತಿತ್ತು. ಈಗ ಅವರು ತೋಟ ಕಟ್ಟಿ ಬೇಲಿ ಹಾಕಿದ್ದಾರೆ. ನಮಗೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡಿಕೊಡುವಂತೆ ನಮ್ಮ ಗ್ರಾಮಸ್ಥರಿಂದ ಅನೇಕ ಭಾರಿ ಮನವಿಯನ್ನ ನೀಡಲಾಗಿದೆ. ಆದರೆ ಅಧಿಕಾರಿಗಳು ನಮ್ಮ ಗ್ರಾಮದಿಂದ 3 ಕಿ.ಲೋ. ದೂರದಲ್ಲಿ ಜಾಗವನ್ನ ಗುರುತಿಸಿದ್ದಾರೆ. ನಾವು ಅಲ್ಲಿಗೆ ಹೋಗೋದಿಲ್ಲ. ನಮಗೆ ಪಕ್ಕದಲ್ಲಿರುವ ಪುಟ್ಟಸಂದ್ರ ಗ್ರಾಮದ ಸರ್ವೆ ನಂ. 92 ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಈಗಾಲೇ ಎರಡು ಕಡೆ ಸ್ಮಶಾನಕ್ಕೆ ಜಾಗವನ್ನ ಗುರುತಿಸಲಾಗಿದೆ. ಅಲ್ಲಿನ ಮುಖಂಡರು ದೂರ ಆಗುತ್ತದೆ ನಮಗೆ ಹತ್ತಿರದಲ್ಲಿ ಜಾಗವನ್ನ ಗುರುತಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ನಮ್ಮ ಅಧಿಕಾರಿಗಳು ಸರ್ವೇ ಮಾಡುತ್ತಿದ್ದಾರೆ. ಅದಷ್ಟು ಬೇಗ ಜಾಗವನ್ನ ಗುರುತಿಸಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ಕೋಳಾಲ ಪಿಎಸೈ ಯೋಗೀಶ್, ಉಪ ತಹಸೀಲ್ದಾರ್ ಮಧುಚಂದ್ರ ಆರ್ಐ ಕೃಷ್ಣಮೂರ್ತಿ, ಪಿಡಿಒ ಲಕ್ಮೀನಾರಾಯಣ್ ದಲಿತ ಮುಖಂಡರಾದ ದಾಡಿ ವೆಂಕಟೇಶ್, ಶಿವರಾಮಣ್ಣ, ನಟರಾಜು, ಮಲ್ಲಿಕಾರ್ಜುನಯ್ಯ, ಪುಟ್ಟರಾಜು, ಕೆಂಪರಾಜು, ನಾಗೇಂದ್ರ, ಕೆಂಪ ಅರಸಯ್ಯ, ಸುರೇಶ್, ನರಸಿಂಹಮೂರ್ತಿ, ಚೇತನ್, ಮುತ್ತರಾಜು, ಗಗನ್ದೀಪು, ನರಸಿಂಹರಾಜು, ಕುಂಬಿನರಸಯ್ಯ ಸೇರಿದಂತೆ ಇತರರು ಇದ್ದರು.
ಪುಟ್ಟಸಂದ್ರ ಗ್ರಾಮದ ಸರ್ವೇ ನಂ 245 ರಲ್ಲಿ ಸರ್ವೇ ನಂ.80 ರಲ್ಲಿ 12 ಗುಂಟೆ, ಸರ್ವೇ. ನಂ 328 ರಲ್ಲಿ 1 ಎಕರೆ 21 ಗುಂಟೆ ಜಾಗವನ್ನ ಈಗಾಗಲೇ ಅಧಿಕಾರಿಗಳು ಗುರುತಿಸಲಾಗಿದ್ದು, ದಲಿತ ಮುಖಂಡರು ಇವೇಲ್ಲ ಜಾಗಗಳು 3 ಕಿ.ಲೋ ದೂರದಲ್ಲಿ ಇವೆ ಅದರಿಂದ ಸರ್ವೇ ನಂ. 92 ರಲ್ಲಿ 1 ಎಕರೆ ಜಾಗವನ್ನ ದಲಿತರಿಗೆ ಪ್ರತ್ಯೇಕ ಸ್ಮಶಾನ ಜಾಗ ಗುರುತಿಸವರೆಗೂ ಅಂತ್ಯ ಸಂಸ್ಕಾರ ಮಾಡಲ್ಲ ದಲಿತ ಮುಖಂಡರ ಆಗ್ರಹ.
ವರದಿ : ಶ್ರೀನಿವಾಸ್, ಕೊರಟಗೆರೆ
