ಕೊರಟಗೆರೆ: ತಾಲ್ಲೂಕಿನ ಅಕ್ಕಿರಾಂಪುರ ರಾಗಿ ಕೇಂದ್ರಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ರೈತರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ಮತ್ತು ತೂಕದಲ್ಲಿ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ರಾಗಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಕ್ಕಿ ರಾಂಪುರ ರಾಗಿ ಕೇಂದ್ರವನ್ನು 2025 ನೇ ವರ್ಷದಲ್ಲಿ ನಮ್ಮ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ಸಲಹೆ ಮೇರೆಗೆ ಪ್ರಾರಂಭಿಸಿ ಇಂದು ರೈತರಿಗೆ ಅನುಕೂಲವಾಗಿದೆ.



ರಾಗಿ ಕೇಂದ್ರಕ್ಕೆ ಬರುವ ರೈತರಿಗೆ ಯಾವುದೇ ಸಮಸ್ಯೆಗಳಾಗದಂತೆ ತೂಕದಲ್ಲಿ ವ್ಯತ್ಯಾಸ ಮಾಡಬಾರದು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಬೇಕು. ರಾಗಿ ಕೇಂದ್ರದಲ್ಲಿ ತೂಕದಲ್ಲಿ ವ್ಯತ್ಯಾಸ ಲೇಬರ್ಗಳ ಸಮಸ್ಯೆ ಮತ್ತು ರೈತರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಇಂದು ತಾವು ಖುದ್ದಾಗಿ ಬಂದು ರೈತರ ಸಮ್ಮುಖದಲ್ಲಿ ತೂಕವನ್ನು ವೀಕ್ಷಿಸಿ ಅಧಿಕಾರಿಗಳಿಗೆ ತೂಕದಲ್ಲಿ ವ್ಯತ್ಯಾಸ ಮಾಡಬೇಡಿ ರೈತರಿಗೆ ಮೋಸ ಮಾಡಬೇಡಿ ಎಂದು ಹೇಳಿದರು ನಿಗದಿಯದ ಪ್ರತಿ ಮೂಟೆಗೆ 50 ಕೆಜಿ ಮಾತ್ರ ರಾಗಿಯನ್ನು ತೂಕ ಮಾಡಬೇಕು ಎಂದು ಹೇಳಿದರು ಮಾರಾಟ ಕೇಂದ್ರದಲ್ಲಿ ಬಂದಿದ್ದ ರೈತರರಲ್ಲಿ ಡಿಸಿ ಅವರು ನಿಮ್ಮಗಳಿಗೆ ಯಾವುದಾದರೂ ತೂಕದಲ್ಲಾಗಲಿ ಬೆಲೆಯಲಾಗಲಿ ವ್ಯತ್ಯಾಸವಾದರೆ ನಮಗೆ ತಿಳಿಸಿ ನಾವು ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ಅನುಕೂಲವಾಗುವಂತೆ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ರೈತರಿಗೆ ಧೈರ್ಯ ಹೇಳಿದರು. ಮತ್ತು ಇನ್ನು ನೋಂದಣಿಯಾಗದ ರೈತರು ರಾಗಿ ಬೆಳೆಗಾರರು ನೋಂದಣಿ ಮಾಡಿಕೊಂಡು ಮಾರಾಟವಾದ ರಾಗಿಯ ಹಣವನ್ನು ತಮ್ಮ ಖಾತೆಗಳಿಗೆ ಜಮ.ಮಾಡುವುದಾಗಿ ತಿಳಿಸಿದರು ಈ ರಾಗಿ ಕೇಂದ್ರವನ್ನು ಶಾಸಕರು ಅಕ್ಕಿರಾಂಪುರದಲ್ಲಿ ಪ್ರಾರಂಭಿಸಿದ್ದರಿಂದ ಈ ಭಾಗದ ಜನರಿಗೆ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿಯೊಂದಿಗೆ ಕೊರಟಗೆರೆ ತಾಶಿಲ್ದಾರ್ ಮಂಜುನಾಥ್ ಕೆ ರವರು ಭಾಗಿಯಾಗಿ ರೈತರ ಸಮಸ್ಯೆಗಳನ್ನು ಆಲಿಸಿ ಯಾವುದೇ ತೊಂದರೆಯಾಗದಂತೆ ವಹಿವಾಟುವನ್ನು ನಡೆಸುವುದಾಗಿ ಹೇಳಿದರು.
