ಕೊರಟಗೆರೆ ತಾಲ್ಲೂಕಿನ;- ಗ್ರಾಮ ದೇವತೆಗಳು ಊರಿನ ಎಲ್ಲಾ ಜಾತಿ ಜನರನ್ನು ಒಗ್ಗೂಡಿಸಿ ಧಾರ್ಮಿಕ ಆಚರಣೆಯನ್ನು ಆಚರಿಸುವ ಮೂಲಕ ಸೌಹಾರ್ದತೆಯನ್ನು ಮೂಡಿಸಿವುದರೊಂದಿಗೆ ದೇವಿಯು ಊರಿನ ರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿ ನೆಮ್ಮದಿಯಾಗಿ ಬಾಳುತ್ತಾರೆ ಎಂದು ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಡಾ.ಶ್ರೀಹನುಮಂತನಾಥಸ್ವಾಮೀಜಿ ತಿಳಿಸಿದರು.
ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಹನುಮಂತಯ್ಯನಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ದೊಡ್ಡಮ್ಮ ದೇವಿಯ 48 ನೇ ದಿನದ ಮಂಡಲ ಪೂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಗ್ರಾಮ ದೇವತೆಗಳ ಪ್ರತಿಷ್ಠಾಪನೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಗ್ರಾಮದೇವತೆಯು ನಮ್ಮ ಗ್ರಾಮವನ್ನು ದುಷ್ಠಶಕ್ತಿಗಳಿಂದ ಮತ್ತು ರೋಗರುಜಿನಗಳಿಂದ ರಕ್ಷಿಸುತ್ತಾಳೆ ಎನ್ನುವ ನಂಬಿಕೆಯಲ್ಲಿ ಗ್ರಾಮದ ಪ್ರತಿಯೊಬ್ಬ ಜಾತಿ ಧರ್ಮದ ಕುಟುಂಬವು ತನ್ನ ಕೈಲಾದ ಸೇವೆಯನ್ನು ಗ್ರಾಮಸ್ಥರೊಂದಿಗೆ ಒಟ್ಟಾಗಿ ಆಚರಿಸುತ್ತಾರೆ ಅಗ ಜನರಲ್ಲಿನ ಒಗ್ಗಟುತನ ಈ ಆಚರಣೆಯಿಂದ ಬರುತ್ತದೆ, ಹನುಮಂತಯ್ಯಪಾಳ್ಯ ಸಣ್ಣ ಗ್ರಾಮದಲ್ಲಿ ಬೃಹತ್ ದೊಡ್ಡಮ್ಮ ದೇವಿಯ ದೇವಾಲಯವು ನಿರ್ಮಾಣವಾಗಿರುವುದು ಈ ಊರಿನ ಜನರ ಸೇವಾ ಮನೋಭಾವ ಮತ್ತು ಭಕ್ತಿಯನ್ನು ತೋರಿಸುತ್ತದೆ, ಇದಕ್ಕೆ ನೀಲೇಶ್ ರವರ ಶ್ರಮವು ಸಾಕಷ್ಟು ಇದೆ ಈ ದೇವಾಲಯದ ಉದ್ಘಾಟನೆಗೆ ಮತ್ತು 48 ದಿನಗಳ ಮಂಡಲ ಪೂಜೆಗೆ ಸುಮಾರು 30 ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಶಾಸಕರುಗಳಾದ ಜೋತಿಗಣೇಶ್, ಬಿ. ಸುರೇಶ್ ಗೌಡ, ಸಕಲೇಶಪುರ ಶಾಸಕ ಸಿಮೇಟ್ ಮಂಜು ಸೇರಿದಂತೆ ಹಲವರು ಆಗಮಿಸಿ ದೇವತಾಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.

ಉದ್ಯಮಿ ನೀಲೇಶ್ ಮಾತನಾಡಿ: ಪೂಜ್ಯ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ದೇವತಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿದಾನಗಳಿಂದ ಅದ್ದೂರಿಯಾಗಿ ನಡೆದಿದೆ, ಈ ದಿನದೊಂದು ಸುತ್ತ ಮುತ್ತಲ ಗ್ರಾಮಗಳ 21 ಗ್ರಾಮದೇವರುಗಳ ಮೆರವಣಿಗೆಯು ಉತ್ಸವದ ಮೂಲಕ ನಮ್ಮ ಗ್ರಾಮವಾದ ಹನುಮಂತಯ್ಯನಪಾಳ್ಯಕ್ಕೆ ಬಂದು ಆಶೀರ್ವಾದಿಸಿವೆ. ಇದಕ್ಕಾಗಿ ನಮ್ಮ ಸುತ್ತಮುತ್ತಲ ಗ್ರಾಮಸ್ಥರಿಗೆ, ದೇವಾಲಯಕ್ಕೆ ಬಂದು ಶುಭಕೋರಿದ ಸ್ವಾಮೀಜಿಗಳಿಗೆ, ಜನಪ್ರತಿನಿಧಿಗಳಿಗೆ ಮುಖ್ಯವಾಗಿ ಎಲ್ಲಾ ಕಾರ್ಯಕ್ರಮದ ಮಾರ್ಗದರ್ಶಕರಾದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ, ಶ್ರೀ ಗೌರಿಶಂಕರ ಸ್ವಾಮೀಜಿ, ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಕಾರದವೀರ ಬಸವಲಿಂಗಸ್ವಾಮೀಜಿ, ಮುಖಂಡರುಗಳಾದ ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ. ಮುರಳೀಧರ ಹಾಲಪ್ಪ. ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎಸ್. ರಾಜಣ್ಣ. ಎಸ್.ಆರ್.ರಾಜಣ್ಣ, ವೇಣುಗೋಪಾಲ್ ಹರೀಶ್.ಎಸ್ ಪಿ ಸಿದ್ದಪ್ಪ ಲೋಕೇಶ್ ಸೇರಿದಂತೆ 21 ಗ್ರಾಮಗಳ ಪ್ರಮುಖರು ಸೇರಿದಂತೆ ಹಲವರು ಭಾಗವಹಿಸಿದ್ದರು.
–ವರದಿ ನರಸಿಂಹಯ್ಯ ಹೊಸಕೋಟೆ
