ಕೊರಟಗೆರೆ :-ತಾಲ್ಲೂಕಿನ ಕೋಳಾಲ ಹೋಬಳಿಯ ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾದ ಹರೀಶ್ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು 70ನೇ ವರ್ಷದ ಕನ್ನಡ ರಾಜ್ಯೋತ್ಸವದ ದಿನದಂದು ಹಮ್ಮಿಕೊಳ್ಳಲಾಗಿತ್ತು.
ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಪುರ ಡಾ: ಹನುಮಂತನಾಥ ಸ್ವಾಮೀಜಿ ಮಾತನಾಡಿ: ಇಂದು ರಾಜ್ಯದಾದ್ಯಂತ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು. ಪರಭಾಷಾ ವ್ಯಾಮೋಹಕೆ ಒಳಗಾಗಿದೆ. ಕನ್ನಡವನ್ನು ಮರೆತರೆ. ನಮಗೆ ಜನ್ಮ ನೀಡಿದ ತಂದೆ ತಾಯಿಯನ್ನೇ ಮರೆತಂತೆ. ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಕಡೆಗಣಿಸಿ ಬೇರೆ ಭಾಷೆಯನ್ನು ಪ್ರೀತಿಸುವ ಕೆಟ್ಟ ವ್ಯಾಮೋಹ ಬೇಡ.

ಕವಿ ಪುಂಗವರ ಶ್ರಮದಿಂದಾಗಿ ಇಂದು ಕನ್ನಡಕ್ಕೆ ಉತ್ತಮ ಸ್ಥಾನಮಾನ ದೊರೆದಿದೆ. ಕನ್ನಡ ನೆಲದ ಕವಿಗಳು ವಿಶ್ವಮಾನವನ ಸ್ವದೇಶದ ಸಾರವನ್ನು ಸಾರಿದ್ದಾರೆ. ನಮ್ಮೆಲ್ಲರಲ್ಲಿ ಕನ್ನಡ ಉಸಿರಾಗಬೇಕು. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಸಂದೇಶವನ್ನು ಸಾರುತ್ತದೆ. ಕನ್ನಡದ ನೆಲ. ಜಲ. ಭಾಷೆ. ಸಂಸ್ಕೃತಿ .ಉಳಿವಿಗಾಗಿ ಸಾಹಿತಿಗಳು. ಕವಿಗಳು. ಚಿತ್ರರಂಗದ. ಕಲಾವಿದರು. ಕನ್ನಡಪರ ಹೋರಾಟಗಾರರು ಕ್ಷಮಿಸಿ ಕನ್ನಡ ನಾಡನ್ನು ಶ್ರೀಮಂತಗುಳಿಸಿದ್ದಾರೆ ಎಂದು ಹೇಳಿದರು.

ಈಗಿನ ಕಾಲದಲ್ಲಿ ಇಷ್ಟು ಹೆಚ್ಚು ಮಕ್ಕಳು ನಾನು ಹೊಸಕೋಟೆಯಲ್ಲಿ ಬಿಟ್ಟರೆ ಇನ್ನೆಲ್ಲೂ ನೋಡಿಲ್ಲ. ಅನೇಕ ಶಾಲೆಗಳಲ್ಲಿ ನೋಡುವಂತಹ ಸಂದರ್ಭದಲ್ಲಿ. ಹರೀಶ್ ಕುಮಾರ್ ಶಿಕ್ಷಕನಾಗಿ ಬಂದ ಸಮಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಈ ಶಾಲೆ ಕಂಡಿದೆ. ನಾನಾದರೂ ಬಯಸುತ್ತೇನೆ. ಹೊಸಕೋಟೆ ಶಾಲೆ ಅತಿ ವೇಗವಾಗಿ ಯಶಸ್ವಿಯಾಗಿ ಬದಲಾವಣೆಗಳನ್ನು ಕಂಡಿದೆ. ಈ ರಾಜ್ಯದಲ್ಲಿ ಇಡೀ ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕೂಡ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಬೇರೆ ಬೇರೆಯ ತರಗತಿಗಳನ್ನು ಮಾಡಿ. ಗ್ರಾಮೀಣ ಭಾಗದ ಕೂಡ ಮಕ್ಕಳು ವಿದ್ಯಾವಂತರಾಗಬೇಕು ಸಂಸ್ಕಾರ ಒಂತರಾ ಆಗಬೇಕು. ಇದನ್ನು ದುರದ್ರುಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ.

ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ. ಇಡೀ ಊರು ಹಾಗೂ ನಾಡನ್ನು ತಿದ್ದಬಹುದು ಎನ್ನುವುದನ್ನು ಹರೀಶ್ ಅವರು ತಿಳಿಸಿಕೊಟ್ಟಿದ್ದಾರೆ. ಹೊಸಕೋಟೆ ಶಾಲೆಯ ಮಕ್ಕಳು ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ವಿಮಾನದಲ್ಲಿ ಪ್ರಯಾಣ. ರೈಲು ಪ್ರಯಾಣ. ನಾಟಕಗಳನ್ನು ಆಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ .ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ನಮ್ಮ ಜಿಲ್ಲೆಯಲ್ಲಿ ನನ್ನ ಕಣ್ಣಿಗೆ ಕಾಣುವಂತಹ ಸರ್ಕಾರಿ ಶಾಲೆ ಎಂದರೆ. ಅದು ಉತ್ತಮವಾದ ಹೊಸಕೋಟೆ ಶಾಲೆ ಏಕತೆಗೆ ವಿಭಿನ್ನವಾದ ಅಂತಹ ಶಾಲೆ. ಶಾಲೆಯ ಸಂಸ್ಕೃತಿ ಪರಿಸರ ಮನಸ್ಸನ್ನು ಗೆಲ್ಲುವಂತಹ. ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಹೊಸಕೋಟೆ ಶಾಲೆಗೆ ಪ್ರವೇಶ ಮಾಡಿದರೆ. ಯಾವುದೋ ಒಂದು ಖಾಸಗಿ ಶಾಲೆಗೆ ಪ್ರವೇಶ ಬಂದಂತೆ ಆಗುತ್ತದೆ. ಖಾಸಗಿ ಶಾಲೆಯ ಗುಣಮಟ್ಟದಂತೆ ಸರ್ಕಾರಿ ಶಾಲೆಯು ಕೂಡ ಇರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹರೀಶ್ ರವರಿಗೆ ಹಾರ ಶಾಲು ಹಾಕುವುದು ಮುಖ್ಯವಲ್ಲ ಆದರೆ ಇಷ್ಟುವರ್ಷ ಪ್ರೀತಿ ಕೊಟ್ಟಿರುವುದು ಮತ್ತು ಅಭಿಮಾನ ಕೊನೆಯವರೆಗೂ ಇರುತ್ತದೆ. ಆದರೆ ಶಾಲೆಯ ಶಿಕ್ಷಕ ಯಾವಾಗ ಅಭಿನಂದನೆ ಆಗುತ್ತದೆ ಎಂದರೆ. ಶಾಲೆಯ ವಿದ್ಯಾರ್ಥಿನಿ ವಿದ್ಯಾರ್ಥಿಗಳು ಉನ್ನತ ಮಠದ ವೃತ್ತಿಗೆ ಅಲಂಕರಿಸಿದರೆ. ಆಗ ಶಿಕ್ಷಕನಿಗೆ ಸಂತೋಷ ಉಂಟುಮಾಡುತ್ತದೆ ಮತ್ತು ಸಾಧನೆ ಮಾಡಿದಾಗ ಸಂತೋಷವಾಗುತ್ತದೆ. ಹರೀಶ್ ಅವರು ಯಾವುದೇ ಜಾತಿ. ಗುಂಪುಗಾರಿಕೆ. ಇಲ್ಲದೆ ಹರೀಶ್ ರವರು ಅತ್ಯುತ್ತಮ ಶಿಕ್ಷಕನಾಗಿ ನಿಮ್ಮ ಊರಿಗೆ ಬಂದಿದ್ದು. 7 ವರ್ಷಗಳ ಕಾಲ ಸೇವೆ ಸಲ್ಲಿಸಿ ಬೇರೊಂದು ಕಡೆಗೆ ಉತ್ತಮ ಮಟ್ಟದ ಹುದ್ದೆಗೆ ವರ್ಗಾವಣೆ ಯಾಗಿದ್ದು. ಅಲ್ಲಿಯೂ ಕೂಡ ಇದೇ ರೀತಿಯಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಲು ಅವರಿಗೆ ಶಕ್ತಿ ಕೊಡಲಿ ಎಂದು ಹೇಳಿದರು
ಸಂದರ್ಭದಲ್ಲಿ ಶ್ರೀಮತಿ ಮಮತ ಶ್ರೀ ಹರೀಶ್ ಕುಮಾರ ಧರ್ಮ ಪತ್ನಿ. ಬಿ , ಆರ್.ಸಿ. ರುದ್ರೇಶ್. ಬಿ ಆರ್ ಎ ಗಳಾದ. ಮಂಜುನಾಥ್. ರಾಮೇಗೌಡ.E.C.O. ರವಿಕುಮಾರ್ ಕೊರಟಗೆರೆ ತಾಲ್ಲೂಕಿನ ಎಲ್ಲಾ.C.R.P.ಗಳು ಹೊಸಕೋಟೆ ಗ್ರಾಮಸ್ಥರಾದ ಶ್ರೀ ಕೃಷ್ಣಪ್ಪ ಮಾಜಿ ಗ್ರಾ.ಪ. ಸದಸ್ಯರು ಶ್ರೀಮತಿ ಲಕ್ಷ್ಮೀದೇವಮ್ಮ. ಗ್ರಾ.ಪ. ಸದಸ್ಯರು ಶ್ರೀ ಹನುಮಂತರಾಯಪ್ಪ.S.D.M.C . ಅಧ್ಯಕ್ಷರು ಸದಸ್ಯರುಗಳಾದ. ಕೆಂಪನರಸಿಂಹಯ್ಯ ಮಾಜಿ ಸದಸ್ಯ ಪತ್ರಕರ್ತರಾದ. ಮುತ್ತುರಾಜು. ನರಸಿಂಹಯ್ಯ. ಮೆಡಿಕಲ್ ಕುಮಾರ. ಮಂಜಣ್ಣK.E.B. ಶಿವಲಿಂಗಯ್ಯ. ಮಂಜಣ್ಣ. ನರಸಹನುಮಯೃ ಹಾಗೂ ಶಿಕ್ಷಕರಾದ. ಕಾಂತಪ್ಪ.ಸಿ.ಜಿ. ದೇವರಾಜು H.L. ಸಹ ಶಿಕ್ಷಕಿ ಮಂಜುಳಾ. ಹಾಗೂ ಅಂಗನವಾಡಿ ಸಿಬ್ಬಂದಿ ವರ್ಗ ಹಾಗೂ ಊರಿನ ಮುಖಂಡರು.ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಶಿಕ್ಷಕರು ಭಾಗವಹಿಸಿದ್ದರು
ವರದಿ ನರಸಿಂಹಯ್ಯ ಹೊಸಕೋಟೆ
