ಕೊರಟಗೆರೆ :– ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋನಿಗರಹಳ್ಳಿ ಗ್ರಾಮದ ರಮೇಶ್ ಬಿನ್ ನರಸಿಂಹಯ್ಯ (49 ವರ್ಷ) ವ್ಯವಸಾಯದ ಜೊತೆಗೆ ಹೈನುಗಾರಿಕೆ ಮಾಡಲು ಮೈಕ್ರೋ ಫೈನಾನ್ಸ್ ಗಳಲ್ಲಿ ಸುಮಾರು ಎಂಟು ಲಕ್ಷ ಸಾಲ ಮಾಡಿದ್ದರು ಎಂದು ರಮೇಶ್ ಪತ್ನಿ ರಾಜಮ್ಮ ತಿಳಿಸಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ತನ್ನ ಹಾಗೂ ತನ್ನ ಪತ್ನಿಯ ಹೆಸರಿನಲ್ಲಿ ಗ್ರಾಮ ಶಕ್ತಿ ಸಂಘದಲ್ಲಿ ಒಂದು ಲಕ್ಷ , ಜನ ಸ್ಮಾಲ್ ಫೈನಾನ್ಸ್ ನಲ್ಲಿ 4.5 ಲಕ್ಷ, ಚೈತನ್ಯ ಫೈನಾನ್ಸ್ ನಲ್ಲಿ 50 ಸಾವಿರ, ಎನ್ & ಟಿ ಫೈನಾನ್ಸ್ ನಲ್ಲಿ 90 ಸಾವಿರ ಹಾಗೂ ಇತರೆ ಫೈನಾನ್ಸ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದು ಸುಮಾರು 20 ಹಸುಗಳನ್ನು ಸಾಕುತ್ತಿದ್ದರು. ಹೇನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿರುತ್ತಿದ್ದ ರೈತ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಮಾರು 15 ಹಸುಗಳು ಮಾರಣಾಂತಿಕ ಕಾಯಿಲೆ ಮತ್ತು ರೋಗಗಳಿಂದ ಸಾವನ್ನಪ್ಪಿದ್ದವು ಎನ್ನಲಾಗಿದೆ. ಈ ಕಾರಣದಿಂದ ಸಾಲದ ಕಂತುಗಳನ್ನು ಕಟ್ಟಲಾಗದೆ ಎಲ್ಲದರೂ ಹೋಗಿ ಸಾಯಬೇಕೆಂಬ ಪರಿಸ್ಥಿತಿಗೆ ಬಂದಿದ್ದರು ಎಂದು ಮೃತ ರಮೇಶ್ ಪತ್ನಿ ರಾಜಮ್ಮ ತಿಳಿಸಿದ್ದಾರೆ.

ಹೆಚ್ಚು ಸಾಲ ಮಾಡಿಕೊಂಡು ಬಡ್ಡಿ ಮತ್ತು ಅಸಲು ತೀರಿಸಲಾಗದೇ ಮನನೊಂದಿದ್ದ ರೈತ ರಮೇಶ್ ಹುಣಸೆ ಹಣ್ಣು ವ್ಯಾಪಾರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ರಮೇಶ್ ಮರಳಿ ಮನೆಗೆ ಬಂದಿರಲಿಲ್ಲ. ದೂರವಾಣಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ವಿಪರೀತ ಸಾಲ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ಧ ರೈತ ರಮೇಶ್ ಜೋನಿಗರಹಳ್ಳಿ ಗ್ರಾಮದ ಸರ್ವೇ ನಂಬರ್ 81/4 ರ ಜಮೀನಿನಲ್ಲಿ ಇರುವ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗುರುವಾರ ಬೆಳಗ್ಗೆ ಕುಟುಂಬಸ್ಥರಿಗೆ ತಿಳಿದಿದೆ.
ವಿಷಯ ತಿಳಿದ ತಕ್ಷಣವೇ ಕೊರಟಗೆರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಮೃತ ದೇಹವನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಾಲ ಭಾದೆಯಿಂದ ರೈತರ ಆತ್ಮಹತ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು. ಅಲ್ಪ ಸ್ವಲ್ಪ ಇರುವ ಜಮೀನಿನಲ್ಲಿ ವ್ಯವಸಾಯ ಮಾಡುವುದರ ಜೊತೆಗೆ ಹೈನುಗಾರಿಕೆ ಮಾಡಲು ಸಾಲ ಮಾಡಿಕೊಂಡು ತೀರಿಸಲು ಆಗದೆ ನನ್ನ ತಮ್ಮ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜ್ಯ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ತಕ್ಷಣವೇ ಎಚ್ಚೆತ್ತುಕೊಂಡು ನನ್ನ ತಮ್ಮನ ಸಾವಿಗೆ ನ್ಯಾಯ ಒದಗಿಸುವುದರ ಜೊತೆಗೆ ಸೂಕ್ತ ಪರಿಹಾರ ನೀಡಬೇಕು.
– ನಾಗರಾಜು. ಮೃತ ರಮೇಶ್ ಸಹೋದರ. ಜೋನಿಗರಹಳ್ಳಿ.
ವರದಿ- ಶ್ರೀನಿವಾಸ್ ಕೊರಡಗೆರೆ.
