ಕೊರಟಗೆರೆ :- ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದಲ್ಲಿ ಪ್ರತಿವರ್ಷದಂತೆ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರವನ್ನು ವಿದ್ಯುತ್ ದೀಪಾಲಂಕೃತ ಬೆಳ್ಳಿ ರಥದ ಮುತ್ತಿನ ಪಲ್ಲಕ್ಕಿಯ ಪಡಿಯಲ್ಲಿ ಕೋರಿಸಿಕೊಂಡು ಪೂರ್ಣ ಕುಂಭ ಕಳಸ ದೊಂದಿಗೆ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ನಾಸಿಕ್ ಡೊಳ್ಳು ವಾದ್ಯ ಹಾಗೂ ವೀರಗಾಸೆ ಕುಣಿತ ದೊಂದಿಗೆ ಮೆರವಣಿಗೆ ಮಾಡಲಾಯಿತು.

ಇದನ್ನು ಓದಿ: ಕೊರಟಗೆರೆ ಫ್ರೇಂಡ್ಸ್ ಗ್ರೂಪ್ ಸೇವಾ ಸಂಸ್ಥೆಯಿಂದ ಸಾಧಕರಿಗೆ ಅಭಿನಂದನೆ
ಕನಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಸಮಾಜದ ಗಣ್ಯರು ಹಾಗೂ ಪ್ರಮುಖ ಗಣ್ಯ ಮುಖಂಡರು, ಅರಸಾಪುರ ಗ್ರಾಮದ ಕುಲಬಾಂಧವರು, ಶ್ರೀ ಭಕ್ತ ಕನಕದಾಸ ಕುರುಬ ಸಂಘದ ಎಲ್ಲಾ ಪದಾಧಿಕಾರಿಗಳು, ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು, ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

– ಶ್ರೀನಿವಾಸ್, ಕೊರಟಗೆರೆ.

[…] […]
[…] […]