ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ ಕಾಡುಗೊಲ್ಲ ಮೂಲ ದೇವರುಗಳಾದ ಕ್ಯಾತ ಲಿಂಗೇಶ್ವರ ಮತ್ತು ಚಿತ್ರಲಿಂಗೇಶ್ವರ ದೇವರುಗಳ ತಮಿಳುನಾಡುನಿಂದ ಬಂದ ಶಿಲೆಗಳಿಗೆ ತಣ್ಣೇನಹಳ್ಳಿ ಗ್ರಾಮದಿಂದ ಮೂರು ಕಿಲೋಮೀಟರ್ವರಗೆ ಕುಂಭಗಳೊಂದಿಗೆ ಹಾಗೂ ಹೆಣ್ಣು ಮತ್ತು ಗಂಡುಮಕ್ಕಳು ಜನಪದ ಗೀತೆ ಕೋಲಾಟ ಯಾಳಪದ ಪಟಾಕಿ ಸಿಡಿಸಿ ಅರೆವಾದ್ಯದೊಂದಿಗೆ ಅದ್ದೂರಿ ಸ್ವಾಗತ ಮಾಡಲಾಗಿತ್ತು.

ಮುಖಂಡರಾದ ಮಹಾಲಿಂಗಪ್ಪ ಮಾತನಾಡಿ, ನಮ್ಮ ಕಾಡುಗೊಲ್ಲ ಸಂಪ್ರದಾಯ ಕುಲದೇವರು.. ಚಿತ್ರಲಿಂಗೇಶ್ವರ ಸ್ವಾಮಿ. ಕ್ಯಾತಲಿಂಗೇಶ್ವರ ಸ್ವಾಮಿ. ದೇವಸ್ಥಾನದ ಜೀವನೋದ್ಧಾರ ಕಾರ್ಯಕ್ರಮವನ್ನು. ನಮ್ಮ ಕುಲಬಾಂಧವರೆಲ್ಲ ಹಮ್ಮಿಕೊಂಡಿದ್ದು. ಬಹಳ ದಿನಗಳ ಕನಸು ಹಾಗೂ ನಮ್ಮ ಪೂರ್ವಿಕರ ನಮ್ಮ ತಾತ ಮುತ್ತಾತರು ಬುದ್ಧಿವಂತರು, ಸುಮಾರು ಹಿಂದಿನ ಕಾಲದಲ್ಲಿ ಊರುಗಳಲ್ಲಿ ಗುಡಿಸಲು ನಲ್ಲಿ ವಾಸ ಮಾಡುವ ಕಾಲದಲ್ಲಿ. ಅಂದೇ ನಮ್ಮ ಹೊಸಕೋಟೆ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿತ್ತು. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು.

ನಮ್ಮ ತಾಲ್ಲೂಕಿನ ಅಕ್ಕ ಪಕ್ಕದ ಹಳ್ಳಿ ಊರುಗಳಲ್ಲಿ ಗುಡಿಸಲುಗಳು ಇದ್ದ ಕಾಲದಲ್ಲಿ. ನೆನಪಿಸಿಕೊಳ್ಳುತ್ತಾ ಅವರ ದಾರಿಯಲ್ಲಿ. ಈ ದಿನ ಈ ಕಾಲದ ದೇವಸ್ಥಾನದ ದೇವರುಗಳು ಪೂಜೆ ಮಾಡುತ್ತಾ ಈಗಲೂ ಕೂಡ ಹಳೆಯ ಸಂಪ್ರದಾಯದಂತೆ. ಪೂಜೆ ಸಲ್ಲಿಸುತ್ತಾ ಬಂದಿದ್ದು. ಅದೇ ರೀತಿ ಊರಿನ ಹಾಗೂ ಅಕ್ಕಪಕ್ಕದಲ್ಲಿ ಅಣ್ಣತಮ್ಮಂದಿರು ಹಲವಾರು ಮುಖಂಡರುಗಳ ಸಮ್ಮುಖದಲ್ಲಿ. ನಮ್ಮ ಊರಿನಲ್ಲಿ ಅದ್ದೂರಿಯಾಗಿ ತಮಿಳುನಾಡಿನಿಂದ ಶಿಲೆಗಳನ್ನು ತಂದು ಇಂದು ಒಂದು ಇತಿಹಾಸ ಆಗಿದೆ.

ಹೊಸಕೋಟೆ ಗ್ರಾಮದಲ್ಲಿ ಇಂದು ದೇವರುಗಳನ್ನು ಪ್ರತಿಷ್ಠಾಪಿಸಿ, ಎಲ್ಲರೂ ಕೂಡ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು. ಪೂಜೆ ಸಲ್ಲಿಸಿ ನಮ್ಮ ಊರಿನ ಎಲ್ಲಾ ಹಾಗೂ ಅಕ್ಕಪಕ್ಕದ ಊರಿನ ಎಲ್ಲಾ ಧರ್ಮದ ಜನಾಂಗದ ಹೇಳಿಕೆಗಾಗಿ ಶಾಂತಿ ನೆಮ್ಮದಿ ಆರೋಗ್ಯ ಆಯಸ್ಸು ಕೊಡಲಿ. ಮುಂದಿನ ದಿನಗಳಲ್ಲಿ ನಮ್ಮ ಹೊಸಕೋಟೆ ಗ್ರಾಮದಲ್ಲಿ ಉತ್ತಮವಾದ ಕಾರ್ಯಕ್ರಮವನ್ನು ಇದೇ ರೀತಿಯಾಗಿ ಎಲ್ಲರೂ ಸೇರಿ ಜೊತೆ ಮಾಡೋಣ ಎಂದು ಹೇಳಿದರು.
– ನರಸಿಂಹಯ್ಯ ಹೊಸಕೋಟೆ
