ಕೊರಟಗೆರೆ :– ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕೆರೆಗೂ ಯೋಜನೆಗಳಲ್ಲಿ ನೀರು ಹರಿಸಲು ಕೈಲಾಗದ ಶಾಸಕ ಸುರೇಶ್ಗೌಡರು ಡಾ.ಜಿ.ಪರಮೇಶ್ವರ ರವರ ಅಭಿವೃದ್ದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್ ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಕಳೆದ ಸೋಮವಾರದಂದು ಕೊರಟಗೆರೆ ಕ್ಷೇತ್ರದ ಮಾವತ್ತೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕರಾದ ಸುರೇಶ್ಗೌಡರವರು ನಮ್ಮ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಬಗ್ಗೆ ಎತ್ತಿನಹೊಳೆ ಯೋಜನೆ ಬಗ್ಗೆ ಸರ್ಕಾರದ ಬಗ್ಗೆ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ, ಎತ್ತಿನಹೊಳೆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು 2013 ರಲ್ಲಿ ಸಿದ್ದರಾಮಯ್ಯ ನವರ ಸರ್ಕಾರವೇ ಅದನ್ನು ಪೂರ್ಣಗೋಳಿಸುವುದು ನಮ್ಮ ಸರ್ಕಾರವೇ, ಶಾಸಕ ಸುರೇಶ್ಗೌಡರಿಂದ ಒಂದು ಕೆರೆಗೆ ನೀರು ಹರಿಸಲು ಆಗಲಿಲ್ಲ ಅಭಿವೃದ್ದಿ ಕಾರ್ಯಗಳು ಶೂನ್ಯ ಗ್ರಾಮಂತರ ಕ್ಷೇತ್ರದಲ್ಲಿ ಸುರೇಶ್ ಗೌಡರಿಂದ ರಸ್ತೆಗೆ ಒಂದು ಬಾಂಡಲಿ ಮಣ್ಣು ಹಾಕಿಸಲು ಆಗದೆ ಇರಬಹುದು. ಆದರೆ ಕೊರಟಗೆರೆ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳು ಉತ್ತಮವಾಗಿವೆ ಅಭಿವೃದ್ದಿಯಾಗುತ್ತಿವೆ.
ಇದನ್ನು ಓದಿ: ಕೊರಟಗೆರೆ;-ಎರಡುವರೆ ವರ್ಷದಲ್ಲಿ ಏತ್ತಿನಹೊಳೆ ನೀರು ಬರುವುದಿಲ್ಲ. ಬಂದರೆ ರಾಜಕೀಯ ಬಿಟ್ಟುಬಿಡುತ್ತೇನೆ ಸುರೇಶ್ಗೌಡ.
ಡಾ.ಜಿ.ಪರಮೇಶ್ವರ ರವರು ಹಿಂದಿನ ಬಿಜೆಪಿ ಸರ್ಕಾರದಲ್ಲೂ ಕೊರಟಗೆರೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ದಿ ಮಡಿದ್ದಾರೆ ಅವರು ಸುರೇಶ್ಗೌಡರ ತರಹ ಚಿಲ್ಲರೆ ರಾಜಕೀಯ ಮಾಡಲೀಲ್ಲ ಡಾ.ಜಿಪರಮೇಶ್ವರ ರವರ ವ್ಯಕ್ತಿತ್ವಕ್ಕೂ ಸುರೇಶ್ ಗೌಡರವರ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಕೊರಟಗೆರೆ ಕ್ಷೇತ್ರಕ್ಕೆ ಡಾ.ಜಿ.ಪರಮೇಶ್ವರ ರವರೇ ಎತ್ತಿನಹೊಳೆ ನೀರು ಹರಿಸುವುದು ಆಗ ಸುರೇಶ್ಗೌಡರು ಹೇಳಿಕೆ ನೀಡಿರುವ ಎರಡನ್ನು ಬಿಡಬೇಕಾಗುತ್ತೆ ಡಾ.ಜಿ.ಪರಮೇಶ್ವರ ರವರ ಅಭಿವೃದ್ದಿ ಬಗ್ಗೆ ಸುರೇಶ್ ಗೌಡರವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಮಾಜಿ ಯುವ ಕಾಂಗ್ರೆಸ್ ಮತ್ತು ವಿ.ಎಸ್.ಎಸ್.ಎನ್ ಅದ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಎಸ್.ವಿನಯ್ಕುಮಾರ್ ಮಾತನಾಡಿ ಶಾಸಕ ಸುರೇಶ್ಗೌಡರು ಅಭಿವೃದ್ದಿ ಕೆಲಸಕ್ಕಿಂತ ವರ್ಗಾವಣೆ ದಂಧೆ ಮಾಡಿದ್ದೆ ಹೆಚ್ಚು ಈಗಲೂ ಸುರೇಶ್ಗೌಡ ರವರು ಕ್ಷೇತ್ರದ ಉದ್ದಕ್ಕೂ ನನಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿಲ್ಲ ಎಂದು ಹೇಳಿಕೊಂಡು ಹಿಂಬದಿಯಿಂದ ವರ್ಗಾವಣೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಿದ್ದಾರೆ, ಹಿಂದಿನ ಶಾಸಕರಾದ ಗೌರಿಶಂಕರ್ ರವರ ಅಭಿವೃದ್ದಿ ಕಾಮಗಾರಿಗಳಿಗೆ ಉದ್ದೇಶ ಪೂರ್ವಕವಾಗಿ ತಡೆಹಿಡಿದು ದ್ವೇಷ ರಾಜಕಾರಣದಿಂದ ಕ್ಷೇತ್ರ ಅಭಿವೃದ್ದಿ ಹಾಳು ಮಡುತ್ತಿದ್ದಾರೆ ಇಂತಹ ಶಾಸಕ ಡಾ.ಜಿ.ಪರಮೇಶ್ವರ ರವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಡಾ.ಜಿ.ಪರಮೇಶ್ವರ ರವರು ಯಾವಾಗಲೂ ಅಭಿವೃದ್ದಿ ಬಗ್ಗೆ ಯೋಚಿಸಿ ಕೆಲಸ ಮಾಡುವವರು ಸುರೇಶ್ಗೌಡರ ತರಹ ಕೊಳಕು ರಾಜಕೀಯ ಮಾಡುವುದಿಲ್ಲ ಡಾ.ಜಿ.ಪರಮೇಶ್ವರ ರವರು ಸಜ್ಜನ ರಾಜಕಾರಣಿಗಳು ಸುರೇಶ್ಗೌಡ ಯಾವ ತರಹದ ರಾಜಕಾರಣಿ ಎಂದು ರಾಜ್ಯಕ್ಕೆ ಗೊತ್ತಿದೆ ಎಂದ್ದಿದ್ದಾರೆ.
– ಶ್ರೀನಿವಾಸ್, ಕೊರಟಗೆರೆ.
