ಕೊರಟಗೆರೆ : ಕರ್ನಾಟಕ ಮಾದರ ಮಹಾಸಭಾ ಬೆಂಗಳೂರು ರಾಜ್ಯ ಸಮಿತಿ ಆದೇಶದ ಮೇರೆಗೆ ಕೊರಟಗೆರೆ ತಾಲ್ಲೂಕು ಮಾದರ ಮಹಾಸಭಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಾದರ ಮಹಾಸಭಾದ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ಎಲ್ಲರ ಅಭಿಪ್ರಾಯ ಪಡೆದು ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಸಿದ್ದೇಶ್ ಟಿ.ಸಿ(ವಿಭೂತಿ ಸಿದ್ದಪ್ಪ,) ಉಪಾಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಲಕ್ಷ್ಮಿ ನರಸಯ್ಯ, ಖಜಾಂಚಿಯಾಗಿ ವೀರ ಕ್ಯಾತರಾಯ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೇಶ್ ಸದಸ್ಯರಾಗಿ ಶಿವರಾಮ್ ಡಿಎಲ್, ದೊಡ್ಡಯ್ಯ, ಮಾರುತಿ ಎನ್, ಸುರೇಶ್ ಕುಮಾರ್, ಶಿವ ದರ್ಶನ್, ನರಸಿಂಹಮೂರ್ತಿ, ಕೃಷ್ಣಪ್ಪ, ಸಿದ್ದಲಿಂಗಯ್ಯ, ಸುಬ್ಬರಾಯಪ್ಪ, ಗೋವಿಂದರಾಜು, ತಿಪ್ಪೇಶ್, ಭೀಮ್ ರಾಜ್, ಸಿ ಎಚ್ ರವಿಕುಮಾರ್, ಮಂಜುನಾಥ್ ಕೆ ಆರ್ ಸದಸ್ಯರಾಗಿ ಆಯ್ಕೆಯಾದರು
ಮಹಾಸಭಾ ನೂತನ ಅಧ್ಯಕ್ಷರಾದ ಸಿದ್ದೇಶ್ ಟಿ.ಸಿ(ವಿಭೂತಿ ಸಿದ್ದಪ್ಪ) ಮಾತನಾಡಿ ಸಭಾದ ನೀತಿ ನಿಯಮಗಳಿಗೆ ಒಳಪಟ್ಟು ತಾಲ್ಲೂಕಿನಲ್ಲಿ ಸಮುದಾಯದ ಸಂಘಟನೆ ಮತ್ತು ಮಹಾಸಭಾದ ಸದಸ್ಯತ್ವ ನೋಂದಣಿ ಕಾರ್ಯವನ್ನು ಮಾಡುವಲ್ಲಿ ಕ್ರಿಯಾಶೀಲರಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲು ಎಲ್ಲಾ ಸರ್ವರಿಗೂ ತಿಳಿಸಿದರು
ಸಭೆಯಲ್ಲಿ ಜಿಲ್ಲಾ ಸಮಿತಿ ಉಸ್ತುವಾರಿಗಳಾದ ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ ಕಳೆದ ಎರಡು ತಿಂಗಳ ಹಿಂದೆ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರ ನಿರ್ಣಯದಂತೆ ಮಾದಿಗ ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗಾಗಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಮಹಾಸಭಾದ ನಿರ್ದೇಶನದಂತೆ ಜಿಲ್ಲೆ ಮತ್ತು ತಾಲೂಕು ಘಟಕದ ಸಮಿತಿಯನ್ನು ರಚನೆ ಮಾಡಲಾಗಿದ್ದು ಇದರ ಜೊತೆಗೆ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ ಮಹಾಸಭಾ ಮೂಲ ಉದ್ದೇಶ ಸಮುದಾಯದ ವಿದ್ಯಾವಂತ ಯುವಕರು ಪದವೀಧರರು ಉದ್ಯೋಗದಿಂದ ವಂಚಿತರಾಗದಂತೆ ಮಹಾಸಭಾ ಕೆಲಸ ಮಾಡಲಿದೆ ಎಂದು ತಿಳಿಸಿದರು
ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ (ವಿಭೂತಿಸಿದ್ದಪ್ಪ )ದಾಡಿ ವೆಂಕಟೇಶ್, ತೋವಿನಿಕೆರೆ ಹಿರಿಯ ಪತ್ರಕರ್ತರಾದ ಹನುಮಂತ ರಾಯಪ್ಪ, ಸಿದ್ದೇಶ್, ನರಸಿಂಹಮೂರ್ತಿ, ಶಿವ ದರ್ಶನ್, ಕೃಷ್ಣಪ್ಪ, ಸಿದ್ದಲಿಂಗಯ್ಯ, ತಿಪ್ಪೇಶ್, ಸಿದ್ದಗಂಗಯ್ಯ, ವೀರ ಖ್ಯಾತರಾಯ, ಗೋವಿಂದ್ ರಾಜ್, ಸಂಜೀವರಾಯಪ್ಪ, ಭೀಮರಾಜ್, ರವಿಕುಮಾರ್, ದೊಡ್ಡಯ್ಯ, ಹನುಮಂತರಾಜು ತಾಲ್ಲೂಕು ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು
ವರದಿ ನರಸಿಂಹಯ್ಯ ಹೊಸಕೋಟೆ
