ಕೊರಟಗೆರೆ:- ತಾಲ್ಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮಧುವೆಯಾಗಲು ಬಯಸುವ ನೂತನ ವಧುವರರು ಶ್ರೀಮಠಕ್ಕೆ ಬಂದು ನೋಂದಾಯಿಸಿಕೊಳ್ಳುವಂತೆ ಶ್ರೀ ವೀರಭದ್ರಶೀವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಸಿದ್ದರಬೆಟ್ಟದ ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಮುಂಬರುವ ಜೂನ್ 21 ರ ಭಾನುವಾರದಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದಲ್ಲಿ ಮಠದ 20 ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಆಚರಿಸಲಾಗುವುದು ಅಂದು ವೀರಶೈವ ವಟುಗಳಿಗೆ ಉಚಿತ ದೀಕ್ಷಾಸಂಸ್ಕಾರ ನೀಡವುದರೋಂದಿಗೆ ಉಚಿತ ಆದರ್ಶ ಸಾಮೂಹಿಕ ವಿವಾಹವನ್ನು ನಡೆಸಲಾಗುವುದು, ಆ ಸಾಮೂಹಿಕ ವಿವಾಹಗಳನ್ನು ಜೂನ್ 21 ರ ಮದ್ಯಾಹ್ನ 12.20 ಕ್ಕೆ ಅಭಿಜಿನ್ ಲಗ್ನದಲ್ಲಿ ನಡೆಸಲಾಗುವುದು, ಮದುವೆಯನ್ನು ಶತ್ರೋಕ್ತವಾಗಿ ಮಾಡಿಕೊಡಲಾಗುವುದು ನೂತನ ವಧುವರರಿಗೆ ಮಾಂಗಲ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನೀಡುವರು, ಈ ಸಾಮೂಹಿಕ ವಿವಾಹಕ್ಕೆ ನೋಂದಾಹಿಸಿಕೊಳ್ಳುವ ವಧುವಿಗೆ 18 ವರ್ಷ ವರನಿಗೆ 21 ವರ್ಷ ತುಂಬಿರಬೇಕು ಅಂತಹ ವಧುವರರ ತಂದೆತಾಯಿಗಳು ಅಥವಾ ಸಂಬಂದಿಕರು ಅಗತ್ಯ ದಾಖಲಾತಿಗಳನ್ನು ಶ್ರೀ ಮಠಕ್ಕೆ ಮೇ 31 ರ ಒಳಗೆ ಶ್ರೀ ಮಠಕ್ಕೆ ಸಲ್ಲಿಸಬೇಕು ಎಂದರು.
ಈ ಸಮಾರಂಭದಲ್ಲಿ ಈ ಬಾರಿ ಸಿದ್ದಶ್ರೀ ಪ್ರಶಸ್ತಿಯನ್ನು ಧರ್ಮಸ್ಥಳದ ಶ್ರೀ ವೀರೇಂದ್ರ ಹಗ್ಗಡೆಯವರಿಗೆ ಪ್ರದಾನಿಸಲಾಗುವುದು ಎಂದ ಅವರು ಈ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮಗಳು ನಡೆಯಲ್ಲಿದ್ದು ಮಠದ ಎಲ್ಲಾ ಸಭಕ್ತರು ಈ ಧಾರ್ಮಿಕ ಮತ್ತು ಸಾಮಾಜಿಕ ಸಮಾರಂಭದಲ್ಲಿ ಸೇವೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಉದ್ಯಮಿ ನೀಲೇಶ್, ಮುಖಂಡರುಗಳಾದ ಸೋಮಣ್ಣ, ಆರ್,ಎಸ್,ರಾಜಣ್ಣ, ಬಿಪಿಎಸ್ ಕುಮಾರ್, ಶಿವಕುಮಾರ್, ಪಂಚಾಕ್ಷರಯ್ಯ, ಅಖಂಡರಾದ್ಯ, ಮಾಸ್ಟರ್ ಹರೀಶ್ , ಜೆಡಿಎಸ್ ಅದ್ಯಕ್ಷ ಕಾಮರಾಜು, ಗೋಂದಿಹಳ್ಳಿ ರಂಗರಾಜು, ಬಿಜೆಪಿ ಅದ್ಯಕ್ಷ ರುದ್ರೇಶ್, ಮಾಜಿ ಅದ್ಯಕ್ಷ ದರ್ಶನ್, ಹನುಮಂತರಾಯಪ್ಪ, ಸಿದ್ದಮಲ್ಲಯ್ಯ, ವೀರಭದ್ರಯ್ಯ(ಭದ್ರಣ್ಣ), ಮಂಜುಳಾಆರಾದ್ಯ, ಮಮತಾದಿವಾಕರ್, ಕೆ.ಬಿ.ಲೋಕೇಶ್, ಜಿಎಸ್ ಎಮ್ ರಘು ಸೇರಿದಂತೆ ಹಲವರು ಹಾಜರಿದ್ದರು.
ವರದಿ : ಶ್ರೀನಿವಾಸ್ ಕೊರಟಗೆರೆ
