ಜೆ ಡಿ ಎಸ್ ಮೈತ್ರಿ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದ ಜೆ ಡಿ ಎಸ್ ತಾಲ್ಲೂಕು ಅಧ್ಯಕ್ಷರು ಕಾಮರಾಜರವರು
ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹಾಯಿಸದೆ ಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉನ್ನತ ಮಟ್ಟದ ವ್ಯಾಸಂಗ ಮಾಡಲು ಸಾಧ್ಯವಾಗುತ್ತದೆ….
ಪ್ರಧಾನಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ನೆನಪಿಗಾಗಿ ಇಂದು ತೋವಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಉಚಿತ ನೋಟ ಪುಸ್ತಕ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೊರಟಗೆರೆ ತಾಲ್ಲೂಕಿನ ಜೆ ಡಿ ಎಸ್ ಅಧ್ಯಕ್ಷ ಹಾಗೂ ಹಾಗೂ ಹುಬ್ಬಳ್ಳಿಯ ರೈಲ್ವೆ ನಿರ್ದೇಶಕರಾದ ಕಾಮರಾಜಣ್ಣ ಮಾತನಾಡಿ, ಜ್ಞಾನದ ಅಮೃತವನ್ನು ಪಡೆಯಲು ಶಿಕ್ಷಣ ಒಂದು ಸಾಧನವಷ್ಟೇ. ಒಂದು ಮಗುವಿಗೆ ಪರಿಪೂರ್ಣ ಅರಿವು ಪಡೆಯಲು ಉತ್ತಮ ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿ ಯನ್ನು ಪೋಷಕರು ಮನೆಯಲ್ಲಿ ಕಲಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತ ರನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ದಪ್ಪನವರು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾ ನಾಗರಾಜ ರವರು ಜೆ.ಡಿ.ಎಸ್ ಮುಖಂಡರಾದ ದೊಡ್ಡಯ್ಯ, ಪ್ರಸನ್ನ ಕುಮಾರ್, ಈರಣ್ಣ, ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಪಾಲ್ಗೊಂಡಿದ್ದರು.
ವರದಿ:-ನರಸಿಂಹಯ್ಯ ಹೊಸಕೋಟೆ
