ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಲಿಂಗಪುರ ಗ್ರಾಮದಲ್ಲಿ. ಶ್ರೀ ಮಾರಮ್ಮ ದೇವಾಲಯ ಸಮಿತಿಯಿಂದ ಆಯೋಜಿಸಿದ ಮಾರಮ್ಮ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪನ ಮಹೋತ್ಸವವನ್ನು ಮಾಡಲಾಗಿತ್ತು.
ರಾಜಕೀಯ ಸುದೀರ್ಘ ಇತಿಹಾಸದಲ್ಲಿ. ಈ ಹಿಂದೆ ಕೋಳಾಲ ಹೋಬಳಿ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದ ವೇಳೆ ಇಂದಲೂ. ಕೊರಟಗೆರೆ ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡುತ್ತೇನೆ.. ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿಎಂ ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ. ಶ್ರೀ ಮಾರಮ್ಮ ದೇವಿಯ ಸಮಿತಿಯಿಂದ ಆಯೋಜಿಸಿದ್ದ ಮಾರಮ್ಮ ದೇವಿ ಉತ್ಸವ ಮೂರ್ತಿ ಪ್ರತಿಷ್ಠಾಪನ ಮಹೋತ್ಸವದಲ್ಲಿ ಸಂಜೆ ಪಾಲ್ಗೊಂಡು ತಾಲ್ಲೂಕಿನ ಹಲವಾರು ಮುಖಂಡರ ಜೊತೆ ಸೇರಿ. ದೇವಿಗೆ ಪೂಜೆ ಸಲ್ಲಿಸಿ. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿರಿಯರ ಕಾಲದಿಂದಲೂ ಕ್ಷೇತ್ರದ ಜನತೆ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. 2028ಕ್ಕೆ ಕೊರಟಗೆರೆ ಕ್ಷೇತ್ರ ಸಾಮಾನ್ಯ ಮೀಸಲು ಕ್ಷೇತ್ರವಾದರೆ. ಇಲ್ಲಿಂದಲೇ ಸ್ಪರ್ಧಿಸುತ್ತೇನೆ. ಸೋತರೂ ಗೆದ್ದರೂ ಎಂದಿಗೂ ನಿಮ್ಮವನೇ. ಇದೇ ಪ್ರೀತಿ ವಿಶ್ವಾಸ ಕೊನೆಯವರೆಗೂ. ಕಾಪಾಡಿಕೊಂಡು ನಿಮ್ಮೆಲ್ಲರ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಕರವೇ (ಪ್ರವೀಣ್ ಶೆಟ್ಟಿ) ಬಣ ಅಧ್ಯಕ್ಷ ನರಸಿಂಹರಾಜು ಮಾತನಾಡಿ. ಮಾ.ಜಿ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಿವಂಗತ ರಂಗ ಮುತ್ತಯ್ಯ ಅವರ ಕಾಲದಲ್ಲಿ ಲಿಂಗಪುರ ಮೂಲಭೂತ ವ್ಯವಸ್ಥೆ ಕಲ್ಪಿಸಿ ಗ್ರಾಮ ಅಭಿವೃದ್ಧಿ ಕಂಡಿತ್ತು ನಂತರ ಜಿ. ಪಂ. ಸದಸ್ಯರಾಗಿದ್ದ ಸಂದರ್ಭದಲ್ಲಿ ಪಿಎಂ ಕೃಷ್ಣಮೂರ್ತಿ ರವರು ಹೊಳವನಳ್ಳಿ ಮತ್ತು ಕೋಳಾಲ ಹೋಬಳಿ ತಾಲ್ಲೋಕಿನ ಅಲವು ಗ್ರಾಮಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 2028ಕ್ಕೆ ಕೊರಟಗೆರೆ ಕ್ಷೇತ್ರದ ಶಾಸಕರಾಗಲಿ ಎಂಬುದು. ನಮ್ಮೆಲ್ಲರ ಬಯಕೆ ಎಂದು ಹೇಳಿದರು.
ಸಂದರ್ಭದಲ್ಲಿ ಊರಿನ ಮುಖಂಡರು ಪಿ.ಎನ್.ಕೆ. ಅಭಿಮಾನಿಗಳು ಹಾಗೂ ಊರಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ ನರಸಿಂಹಯ್ಯ ಹೊಸಕೋಟೆ
