ಕೊರಟಗೆರೆ ಪಟ್ಟಣದಲ್ಲಿ ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಮಂಗಳವಾರ ಬೃಹತ್ ಜನಾಂದೋಲನ ಜಾಥಾ ಹಮ್ಮಿಕೊಳ್ಳಲಾಯಿತು.
ಕರ್ನಾಟಕದ ರಾಜಕೀಯದಲ್ಲಿ ಶುದ್ಧತೆ, ಶಾಂತಿ, ಸಮತೆ ಮತ್ತು ಶಿಕ್ಷಣದ ಪ್ರತೀಕವೆಂದು ಪರಿಗಣಿಸಲ್ಪಡುವ ಡಾ. ಪರಮೇಶ್ವರರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಆಗ್ರಹದೊಂದಿಗೆ ನಗರದಲ್ಲಿ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಬೆಂಬಲಿಗರು ಭಾಗವಹಿಸಿದರು.
ಈ ಜಾಥಾದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಗಳ ಹಾಲಿ–ಮಾಜಿ ಸದಸ್ಯರು, ಸಹಕಾರಿ ಸಂಘಗಳ ಪ್ರತಿನಿಧಿಗಳು, ಮಹಿಳಾ ಘಟಕದ ನಾಯಕಿಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಮುದಾಯ ಮುಖಂಡರು, ಯುವಕರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿ ಬೆಂಬಲ ಸೂಚಿಸಿದರು.
ದಿನಾಂಕ 09–12–2025, ಮಂಗಳವಾರ ಬೆಳಿಗ್ಗೆ 10.30ಕ್ಕೆ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ನಿಂದ ಪ್ರಾರಂಭವಾದ ಮೆರವಣಿಗೆ ಎಸ್ಎಸ್ಆರ್ ಸರ್ಕಲ್ವರೆಗೆ ಸಾಗಿತು. ಶಾಂತಿಯುತ ವಾತಾವರಣದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಜನ ಸಮೂಹ ಡಾ. ಜಿ. ಪರಮೇಶ್ವರಿಗೆ ನಾಯಕತ್ವ ನೀಡುವಂತೆ ಪಕ್ಷದ ಹೈಕಮಾಂಡ್ಗೆ ಮನವಿ ಮಡಿದರು.
ವರದಿ: ನರಸಿಂಹಯ್ಯ ಹೊಸಕೋಟೆ

[…] ಇದನ್ನು ಓದಿ: ಕೊರಟಗೆರೆ: ಡಾ. ಜಿ. ಪರಮೇಶ್ವರರನ್ನು ಮುಂದಿನ… […]