ಕೊರಟಗೆರೆ :- ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಡ ಸಂಸ್ಕೃತಿ , ಕಲೆ ಉಳಿಯುವಂತ ಹಾಗೂ ಮುಂದಿನ ಪೀಳಿಗೆಗೆ ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವಂತ ರಂಗೋಲಿ ಸ್ಪರ್ಧೆ ಸಮಾಜಮುಖಿಯಾಗಿವೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇತ್ತೀಚಿಗೆ ಕೊರಟಗೆರೆ ಪಟ್ಟಣದಲ್ಲಿ ಪ್ರಗತಿ ಸಂಕ್ರಾಂತಿ ಸುಗ್ಗಿ -3 ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುತ್ತಾ ನಾಡ ಸಂಸ್ಕೃತಿ ಪ್ರತಿಬಿಂಬಿಸುವಂಥ ಇಂತಹ ಉತ್ತಮ ಕಾರ್ಯಕ್ರಮಗಳು ಹತ್ತು ಹಲವು ರೂಪಗೊಳ್ಳಬೇಕು ಎಂದರು.
ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ, ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ ಇಂತಹ ಉತ್ತಮ ಕಾರ್ಯಕ್ರಮ ಆಯೋಜನೆಗೊಳಿಸಿದ ಪ್ರಗತಿ ಸಂಕ್ರಾಂತಿ ಸುಗ್ಗಿ -3 ಗೆ ಧನ್ಯವಾದ ಸಲ್ಲಿಸಿದರು.

ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ ರಂಗೋಲಿ ಕಲೆಯ ಪ್ರಚಾರ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವುದರ ಜೋತೆಗೆ ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ , ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ ಉತ್ತಮ ಸಮಾಜವನ್ನು ರೂಪಿಸುವ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿರುವಂತಹ ಪ್ರಗತಿ ಸಂಕ್ರಾಂತಿ ಸುಗ್ಗಿ -3ಗೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ಇಂತಹ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನ ಆಯೋಜಿಸುವಂಥಾಗ್ಬೇಕು ಎಂದರು.
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಮಾತನಾಡಿ ಸಂಕ್ರಾಂತಿ ಹಬ್ಬ ದೇಶಾದ್ಯಂತ ಸುಗ್ಗಿ ಹಬ್ಬವಾಗಿ ಆಚರಿಸುತ್ತಿದ್ದು, ಉತ್ತರಾಯಣ ಕಾಲವಾಗಿ ಶೀತಗಾಲದ ಅಂತ್ಯ ಹೊಸ ಬೆಳೆ ಆರಂಭವಾಗುವಂಥ ಈ ಶುಭ ಸಂದರ್ಭದಲ್ಲಿ ಸಂಕ್ರಾಂತಿಯ ಸಡಗರದ ರಂಗೋಲಿ ಸ್ಪರ್ಧೆ ಮಹಿಳೆಯರನ್ನ ಆಕರ್ಷಿಸುತ್ತಿರುವುದಲ್ಲದೆ ನಾಡ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಪರಿಚಯಿಸುವಂತಹ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊರಟಗೆರೆ ಸಬ್ ಇನ್ಸ್ಪೆಕ್ಟರ್ ತೀರ್ಥೇಶ್ ಮಾತನಾಡಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವಂತಹ ರಂಗೋಲಿ ಸ್ಪರ್ಧೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನ ನಾಡ ಸಂಸ್ಕೃತಿ ಹಾಗೂ ಸಂಸ್ಕಾರ ದತ್ತ ಮನಸುಗಳನ್ನು ಕೊಂಡೊಯ್ಯುವಂತಹ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಕ್ರಮಗಳಾಗಿವೆ ಪ್ರಗತಿ ಸಂಕ್ರಾಂತಿ ಸುಗ್ಗಿ -3 ಈ ಕಾರ್ಯಕ್ರಮ ಉತ್ತಮ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಆಯೋಜನೆ
ಪ್ರಗತಿ ಸಂಕ್ರಾಂತಿ ಸುಗ್ಗಿ -3 ಕಾರ್ಯಕ್ರಮದ ಆಯೋಜನೆಯನ್ನು ಕೊರಗೆರೆ ಪಟ್ಟಣದ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ಆಯೋಜನೆಗೊಳಿಸಲಾಗಿ ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾದ ರಂಗೋಲಿ ಸ್ಪರ್ಧೆ ಬಣ್ಣ ಬಣ್ಣದ ರಂಗೋಲಿ ಬಿಡಿಸುವಲ್ಲಿ ಕೊರಟಗೆರೆ ನಗರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಂದ ನೂರಾರು ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿ ಬಹುತೇಕ ಸಂಕ್ರಾಂತಿ ಸುಗ್ಗಿಯ ಪರಿಕಲ್ಪನೆಯ ರಂಗೋಲಿಗಳನ್ನು ಬಿಡಿಸಿದ್ದಲ್ಲದೆ ಪ್ರಕೃತಿ, ದವಸ- ಧಾನ್ಯ ಸುಗ್ಗಿಯ ರಾಶಿ ಸೇರಿದಂತೆ ಹಲವು ನಾನಾ ರೀತಿಯ ರಂಗೋಲಿಗಳನ್ನು ಮಹಿಳೆಯರು ಬಿಡಿಸಿ ಸಂಭ್ರಮ ಪಟ್ಟರು.
ರಂಗೋಲಿ ಸ್ಪರ್ಧೆಯ ತೀರ್ಪುಗಾರರಾದ ಮಂಜುಳಾ ರಾಕೇಶ್ ಹಾಗೂ ಮಮತಾ ದಿವಾಕರ್ ರಂಗೋಲಿ ಸ್ಪರ್ಧೆಯ ಪ್ರತಿ ಸ್ಪರ್ಧಾಳುಗಳ ರಂಗೋಲಿಯನ್ನ ವೀಕ್ಷಿಸಿ ಅಂತಿಮವಾಗಿ ಸ್ಪರ್ಧಾಳುಗಳನ್ನ ಪ್ರಕಟಣೆಗೊಳಿಸಿದ್ದ ಪ್ರಥಮ ದ್ವಿತೀಯ ಹಾಗೂ ತೃತೀಯ ವಿಜೇತ ಮಹಿಳೆಯರನ್ನ ಗುರುತಿಸಿ ತುಮಕೂರಿನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಪ್ರಕಟಗೊಳಿಸಲಾಯಿತು.
ಪ್ರಥಮ ಬಹುಮಾನ ಕೊರಟಗೆರೆಯ ರಾಧಮ್ಮ ಗೋಪಾಲ್ ,ದ್ವಿತೀಯ ಬಹುಮಾನ ಅನಿತಾ ಬದ್ರಿನಾಥ್ ಕೊರಟಗೆರೆ, ತೃತೀಯ ಬಹುಮಾನ ಕೊರಟಗೆರೆ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನೀಲಮ್ಮ ಎಂಬುವರು ಬಾಜಿ ನರಾಗಿದ್ದು ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರವೀಂದ್ರ ಭಾರತಿ ವಿದ್ಯಾ ಸಂಸ್ಥೆ ಹಾಗೂ ಜೆ ಕೆ ಮೆಮೊರಿಯಲ್ ಸೆಂಟ್ರಲ್ ಸ್ಕೂಲ್ ಸಂಸ್ಥಾಪಕ ಡಾ. ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರೇಮಾ ಮಹಾಲಿಂಗಪ್ಪ, ಶ್ರೀ ಗುರು ರಾಘವೇಂದ್ರ ಪದವಿಪೂರ್ವ ಕಾಲೇಜಿನ ನಂದೀಶ್ , ಸಮಾಜ ಸೇವಕರಾದ ಜೆಪಿ ಜನಾರ್ಧನ್, ಯುವ ಮುಖಂಡ ನಟರಾಜು, ಪತ್ರಕರ್ತರಾದ ಪುರುಷೋತ್ತಮ್, ಮೂರ್ತಿ, ನಾಗಣ್ಣ, ಹರೀಶ್ ಬಾಬು , ಮಂಜುನಾಥ್ , ಶ್ರೀನಿವಾಸ್, ಯುವ ಮುಖಂಡರುಗಳಾದ ನಂಜುಂಡಯ್ಯ, ಶಿವಣ್ಣ , ಮಧು ,ಅಭಿಲಾಶ್ , ಪ್ರತಾಪ್ ಪತ್ರಿಕ ವಿತರಕರಾದ ನರಸಿಂಹಮೂರ್ತಿ , ವಿದ್ಯಾಸಾಗರ ಸೇರಿದಂತೆ ಹಲವರು ಹಾಜರಿದ್ದರು.
ವರದಿ : ಶ್ರೀನಿವಾಸ್ ಕೊರಟಗೆರೆ
