ಕೊರಟಗೆರೆ: ತಾಲೂಕು ರಾಜ್ಯದ ಸುಪ್ರಸಿದ್ಧ ದೇವಸ್ಥಾನ ಗಳಲ್ಲಿ ಒಂದಾದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಶಕ್ತಿ ದೇವತೆ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ರಥ ನಿರ್ಮಾಣ ಹಾಗೂ ಶ್ರೀ ಮಾತೆ ಕಮ್ಮಲಮ್ಮ ರವರ ಸಮಾದಿ ಬೆಳ್ಳಿ ಕವಚ ವದಿಕೆ ನಿರ್ಮಾಣಕ್ಕಾಗಿ ದೊಡ್ಬಳ್ಳಾಪುರ ತಾಲ್ಲೂಕಿನ ಪೃಥ್ವಿ ಡೆವೆಲಪರ್ಸ್ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ತಾಯಿ ಆಶೀರ್ವಾದ ಪಡೆದು ರಿಯಲ್ ಎಸ್ಟೇಟ್ ಉದ್ಯಮಿ ನರಸಿಂಹಮೂರ್ತಿ ರವರು ದೇಣಿಗೆ ನೀಡಿದರು.
ಉದ್ಯಮಿ ನರಸಿಂಹಮೂರ್ತಿ ರವರು ಮಾತನಾಡಿ: ನಾನು ಹಲವಾರು ವರ್ಷಗಳ ಹಿಂದೆ ಮತ್ತು ಚಿಕ್ಕವಯಸ್ಸಿನಿಂದಲೂ ನಮ್ಮ ತಂದೆ ತಾಯಿ ಶ್ರೀ ಮಾತೆ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವರನ್ನು ಕುಟುಂಬ ಸಮೇತ ದರ್ಶನ ಪಡೆಯುತ್ತಿದ್ದೆವು. ನಾನು ಕೂಡ ವರ್ಷಕ್ಕೆ ನಾಲ್ಕೈದು ಬಾರಿ ಇಲ್ಲಿಗೆ ಬಂದು. ಶ್ರೀ ಲಕ್ಷ್ಮಿ ದೇವಿಯ ದರ್ಶನ ಪಡೆದು ನನ್ನ ಕೈಲಾದ ಸಹಾಯವನ್ನು ಅನ್ನಸಂತರ್ಪಣೆಗೆ ನೀಡುತ್ತಾ ಬಂದಿದ್ದು. ಇದೀಗ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿಯ ರಥ ಹಾಗೂ ಶ್ರೀ ಮಹಾಲಕ್ಷ್ಮಿ ರವರ ಪುತ್ರಿ ಹೆಸರು ಪಡೆದಿರುವ ಕಮಲಮ್ಮನವರ ಸಮಾಧಿಯ ಬೆಳ್ಳಿ ಲೇಪನಕ್ಕಾಗಿ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ.

ನಾನು ಚಿಕ್ಕವಯಸ್ಸಿನಿಂದಲೂ ಬಡತನದಲ್ಲಿ ಹುಟ್ಟಿ ಬಂದಿದ್ದು. ಇದೀಗ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿಯ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ನಾನು ದೊಡ್ಡ ಮಟ್ಟಕ್ಕೆ ಅಂದರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆಯಲು ದೇವಿಯ ಒಂದು ರೂಪ ಮತ್ತು ನನ್ನ ಮೇಲೆ ಆಶೀರ್ವಾದ ಇದೆ. ಅದಕ್ಕಾಗಿ ವರ್ಷದಲ್ಲಿ 4-5 ಬಾರಿ ಶ್ರೀ ಮಾತೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯನ್ನು ದರ್ಶನ ಪಡೆದು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸುತ್ತಮುತ್ತಲಿನ ವಾತಾವರಣದಲ್ಲಿ ಬರಿಗಾಲಿನಲ್ಲಿ ಓಡಾಡಿದರೆ ಹಾಗು ಅಲ್ಲಿ ವಿಶ್ರಾಂತಿ ಪಡೆದರೆ. ಯಾವುದೇ ರೀತಿಯಾದ ಒಂದು ಮನಸ್ಸಿಗೆ ಉಲ್ಲಾಸ ಹಾಗೂ ಸಂತೋಷ ಮತ್ತು ನೆಮ್ಮದಿ ಆಗುತ್ತದೆ ವಿಶೇಷವಾಗಿ ಬಂದ ಕಷ್ಟಗಳು ಸಂಪೂರ್ಣವಾಗಿ ಕಳೆದು ಹೋಗುತ್ತವೆ .ಆದ್ದರಿಂದ ನಾನು ದೇವಿಯ ನಂಬಿಕೆಯಿಂದ ಹಲವಾರು ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ.
ವರದಿ ನರಸಿಂಹಯ್ಯ ಹೊಸಕೋಟೆ
