ಕೊರಟಗೆರೆ :- ಅಖಿಲ ಭಾರತ ನಿವೃತ್ತ ಪಿಂಚಣಿದಾರರಿಗೆ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ 2025 ರ ಆರ್ಥಿಕ ಕಾಯ್ದೆಯನ್ನು ಹಿಂಪಡೆಯ ಬೇಕೆಂದು ಹಾಗೂ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸಗಳನ್ನು ಕೊಡಲೆ ಜಾರಿಗೊಳಿಸುಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿ ಭಟನೆ ನಡೆಸಿ ಪ್ರಭಾರ ತಾಶೀಲ್ದಾರ್ ಎ.ಜೆ.ರಾಜು ರವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹನುಮಂತರಾಯಪ್ಪ ಅಖಿಲ ಭಾರತ ನಿವೃತ್ತ ಪಿಂಚಣಿದರರಿಗೆ, ರಾಜ್ಯ ಸರ್ಕಾರಿ ನಿವೃತ್ತ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ 2025ರ ಆರ್ಥಿಕ ಕಾಯ್ದೆ ಯನ್ನು ಜಾರಿ ಗೊಳಿಸಲು ಕೇಂದ್ರ ಸರ್ಕಾರದ ಆರ್ಥಿಕ ಸಚಿವರಾದ ನಿರ್ಮಲ ಸೀತಾರಾಮನ್ ಮುಂದಿನ ದಿನಗಳಲ್ಲಿ ನಿವೃತ್ತ ವೇತನ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಣೆ ಮಾಡಲು ಹಾಗೂ ವಾರ್ಷಿಕವಾಗಿ ನೀಡುತ್ತಿದ್ದ 2 ತುಟ್ಟಿ ಭತ್ಯೆಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿರುವುದು ಖಂಡನೀಯವಾಗಿದ್ದು ಚರ್ಚೆ ಸ್ಥಗಿತಗೊಳಿಸಿ ನಿವೃತ್ತಿ ನೌಕರರಿಗೆ ನೀಡುತ್ತಿರುವ ಸವಲತ್ತುಗಳನ್ನು ಮುಂದುವರೆ ಸುವಂತೆ ಹಾಗೂ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ತುಗಳನ್ನು ಸರ್ಕಾರಿ ನಿವೃತ್ತ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಅನ್ವಯಿಸುವಂತೆ ಕೂಡಲೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಕೊರಟಗೆರೆ ತಾಲೂಕು ಸಂಘದ ಪಧಾದಿಕಾರಿಗಳು ಮತ್ತು ಸದಸ್ಯರು ಕಪ್ಪು ಪಟ್ಟಿ ಧರಿಸಿ ತಾಲೂಕು ಕಛೇರಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ತಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹನುಮಂತರಾಯಪ್ಪ, ಉಪಾಧ್ಯಕ್ಷ ಪಿ.ವಿ.ರುದ್ರಯ್ಯ, ಪ್ರಧನಾ ಕಾರ್ಯದರ್ಶಿ ವಿ.ಮಲ್ಲೇಶಯ್ಯ, ಖಜಾಂಚಿ ಎಂ.ಆರ್.ಬೊಮ್ಮಣ್ಣ, ಸದಸ್ಯರಾದ ನಾರಾಯಣಪ್ಪ, ಚನ್ನಬಸವರಾಧ್ಯ, ನಂದೀಶ್, ಕ್ಯಾತಯ್ಯ, ಪಿ.ಎಸ್.ಗಂಗಮ್ಮ, ಟಿ,ಕೆ.ರಂಗಮ್ಮ ಸೇರಿದಂತೆ ತಾಲುಕಿನ ಹೋಬಳಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
