ಕೊರಟಗೆರೆ:- ಕೋಡಚಾದ್ರಿ ಚೀಟ್ಸ್ ಪ್ರವೇಟ್ ಲಿಮಿಟೆಡ್ನ ತುಮಕೂರು ಸಿಬ್ಬಂದಿ ಗೌತಮ್ ಸಾಲದ ಹಣ ವಸೂಲಿಗೆ ನನ್ನ ಭಾವಚಿತ್ರದ ಕರಪತ್ರಗಳನ್ನು ಕುರಂಕೋಟೆ ಸೇರಿ ತಾಲೂಕಿನಾದ್ಯಂತ ಗೋಡೆಗಳಿಗೆ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಮರ್ಯಾದೇ ಹರಾಜು ಹಾಕಿ ವೈಯಕ್ತಿಕವಾಗಿ ನಾನು ಮತ್ತು ನನ್ನ ಕುಟುಂಬವನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಕುರಂಕೋಟೆ ಸಿದ್ದರಾಜು ತಿಳಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2023-24ರಲ್ಲಿ ಕೊಡಚಾದ್ರಿ ಪ್ರವೇಟ್ ಲಿಮಿಟೆಡ್ನಲ್ಲಿ ಐದು ಲಕ್ಷ ಸಾಲ ಪಡೆದಿದ್ದೇನೆ, ಸಾಲ ಪಡೆಯುವ ವೇಳೆ ನಮ್ಮ ಗ್ರಾಮದ ಗೌತಮ್ ಎಂಬಾತನು ಮ್ಯಾನೇಜರ್ ಆಗಿದ್ದು, 3.5ಲಕ್ಷ ವರೆಗೆ ವಾಪಸ್ ಲಿಮಿಟೆಡ್ಗೆ ಪಾವತಿಸಿದ್ದೇನೆ ಎಂದು ಹೇಳಿದರು.
ಬೈಕ್ ಅಪಘಾತವಾದ ಸಂದರ್ಭದಲ್ಲಿ ಗೌತಮ್ ರವರಿಗೆ 65ಸಾವಿರ ನಗದು ಹಣ, ಪೋನ್ ಪೇ ಮೂಲಕ 1ಲಕ್ಷ ಹಣ ಪಾವತಿಸಿದ್ದೇನೆ, ನೀಡಿದ 65ಸಾವಿರ ನಗದು ಹಣವನ್ನು ಲಿಮಿಟೆಡ್ಗೆ ಸಂದಾಯ ಮಾಡಿಲ್ಲ, ಕೊಡಚಾದ್ರಿ ಸಂಸ್ಥೆಯಿಂದ ಸೂರ್ಯಪುತ್ರ ಸಂಸ್ಥೆಯಲ್ಲಿ ಮ್ಯಾನೇಜರ್ ಎಂದು ಹೇಳಿ ಸಾಲ ಕೊಡಿಸುವ ಭರವಸೆ ನೀಡಿದ್ದರಿಂದ 50 ಸಾವಿರ ನೀಡಿದ್ದೇನೆ, ಮೂರು ತಿಂಗಳ ನಂತರ ನಿನ್ನ ಹಣ ಕಂಪನಿಗೆ ಕಟ್ಟಿದ್ದೇನೆ ಎಂದು ಧಮಕಿ ಕೂಡ ಹಾಕಿ ನೀನು ಈ ಹಣದ ಸುದ್ದಿಗೆ ಬಂದರೆ ಗತಿ ಕಾಣಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದರು.
ಕೊಟ್ಟಿರುವ ಹಣವನ್ನು ನಮ್ಮ ಕುಟುಂಬದವರು ಕೇಳಿದಾಗ ಹಲ್ಲೆಗೆ ಮುಂದಾಗಿದ್ದಾನೆ, ಮಾ.1ರಂದು ನನ್ನ ಭಾವಚಿತ್ರವನ್ನು ಅಂಟಿಸಿದ್ದು, ಸಂಸ್ಥೆಯವರನ್ನು ಅಂಟಿಸಿದಾಗ ನಾವು ಯಾವುದೇ ಚೀಟಿ ಅಂಟಿಸಿಲ್ಲ ಎಂದು ಹೇಳಿದ್ದು, ರಾಜ್ಯ ಸುದ್ದಿ ವಾಹಿನಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಗೌತಮ್ ಅಕ್ಕ ಶಿಲ್ಪ ಕುರಂಕೋಟೆ ಸಿದ್ದರಾಜು ದೊಡ್ಡ ಮೋಸಗಾರ, ಅಧಿಕಾರಿಗಳನ್ನು ಮತ್ತು ಜನರನ್ನು ಬೆದರಿಸಿ ಜೀವನ ಮಾಡುತ್ತಿದ್ದಾನೆ, ದೇವಸ್ಥಾನ ಪಂಪು ಮೋಟಾರ್, ಲೆಂತ್ ಕದ್ದಿದ್ದಾನೆ, ಜನಗಳನ್ನು ಹೆದರಿಸಿಕೊಂಡು ಜೀವನ ಮಾಡುವುದೇ ಇವನ ಕೆಲಸ ಎಂದು ಅವಮಾನಿಸಿದ್ದಾರೆ ಎಂದು ಮಾಧ್ಯಮದ ಮೂಲಕ ಅಳಲನ್ನು ತೋಡಿಕೊಂಡಿದ್ದು, ಸಂಬಂಧ ಪಟ್ಟ ಇಲಾಖೆ ರಕ್ಷಣೆ ನೀಡಿ ನ್ಯಾಯ ಒದಗಿಸುವಂತೆ ಕೋರಿದರು.
– ಶ್ರೀನಿವಾಸ್ ಕೊರಟಗೆರೆ.
