ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಸಂಕೇನಹಳ್ಳಿ ಭೇಟಿ ನೀಡಿದ ಪಿ. ಎನ್. ಕೃಷ್ಣಮೂತಿ೯ ರವರು ಗ್ರಾಮದಲ್ಲಿ ನಿರ್ಮಾಣವಾಗಿರುವ ಕುಬೇರ ಗಣಪತಿಯ ದೇವಸ್ಥಾನವನ್ನು ವೀಕ್ಷಿಸಿ ಗ್ರಾಮಸ್ಥರು ಎಲ್ಲರೂ ಸೇರಿ ಒಂದು ಸಮುದಾಯ ಭವನ ನಿರ್ಮಾಣಕ್ಕೆ ಸಹಾಯವನ್ನು ಕೇಳಿದರು. ಗ್ರಾಮದ ಮುಖ್ಯಸ್ಥರು ಗ್ರಾಮಸ್ಥರು ಎಲ್ಲರ ಸಮ್ಮುಖದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೇಳಿದ ಶೀಟ್, ಕಬ್ಬಿಣ ಮತ್ತು ಅದರ ಪೂರ್ಣ ವೆಚ್ಚವನ್ನು ನೀಡುವುದಾಗಿ ತಿಳಿಸಿದರು.

ಗ್ರಾಮಸ್ಥರೊಂದಿಗೆ ಕುಳಿತು ತಮ್ಮ 20 ವರ್ಷದ ಜನತೆಯೊಂದಿಗಿರುವ ಸ್ನೇಹ ಸಮಾಜಮುಖಿ ಕೆಲಸಗಳು ಮತ್ತು ಮುಂದೆ ಕೊರಟಗೆರೆ ತಾಲ್ಲೋಕಿನ ಎಲ್ಲಾ ಜನರಿಗೆ ಜನಸೇವೆ ಮಾಡಲು ಅವಕಾಶ ಸಿಕ್ಕಿದೆ , ಅದಕ್ಕೆ ನಿಮ್ಮ ಸಹಕಾರ ಮುಖ್ಯ. ಯಾವುದೇ ಕಾರ್ಯಕ್ರಮಗಳು ಇದ್ದರು. ಸದಾ ನಾನು ನಿಮ್ಮ ಜೊತೆ ನಿಮ್ಮ ಅಣ್ಣನಾಗಿ ಬಂಧುವಾಗಿ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು. ಗ್ರಾಮಸ್ಥರೆಲ್ಲರೂ ಕೃಷ್ಣಮೂರ್ತಿ ಅಣ್ಣನವರು ಮುಂದೆ ನಮ್ಮ ತಾಲ್ಲೂಕಿನ ಶಾಸಕರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಖಂಡಿತವಾಗಿ ಗೆದ್ದೇ ಗೆಲ್ಲುತ್ತೀರಾ ಎಂದು ಜೈಕಾರ ಹಾಕಿದರು.

ಮುಂದೆ ದೊಡ್ಡ ಪಾಲನಹಳ್ಳಿಗೆ ಆಗಮಿಸಿ ಬಸವಣ್ಣ ಗುಡಿಯನ್ನು ವೀಕ್ಷಿಸಿ ಗುಡಿಯು ನಿರ್ಮಾಣ ಹಂತದ ಬಗ್ಗೆ ಗ್ರಾಮಸ್ಥರಲ್ಲಿ ಕೇಳಿದರು. ಗ್ರಾಮಸ್ಥರೆಲ್ಲರೂ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲ್ಚಾವಣಿ ಬಗ್ಗೆ ಕೇಳಿದರು. ಅದಕ್ಕೆ ತಗಲುವ ಕಬ್ಬಿಣ ಸಿಮೆಂಟ್ ಮೇಲ್ಚಾವಣಿ ಪೂರ್ಣ ಮೊತ್ತವನ್ನು ನೀಡುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು. ಇದೇ ಗ್ರಾಮದ ಗ್ರಾಮದ ಗಂಡುಗಲಿ ಕುಮಾರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರಲ್ಲಿ ಮನಸಾಪೂರ್ತಿ ಜನಸೇವೆ ಮಾಡಲು ಅವಕಾಶ ಕೇಳಿ ದೇವರ ಆಶೀರ್ವಾದ ಪಡೆದರು.
ಅಲ್ಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಅವರ ಮನದಾಳದ ಮಾತುಗಳು ನಾಡಿ. ನಾನು ಸಮಾಜ ಸೇವಕನಾಗಿ ಹಲವು ಸೇವೆಗಳನ್ನು ಮಾಡಿದ್ದು. ಮುಂದೆ ಶಾಸಕನಾಗಿ ನಿಮ್ಮಗಳ ಸೇವೆಗೆ ಮಾಡುತ್ತೇನೆ . ದೇವರ ಆಶೀರ್ವಾದ ಮತ್ತು ಜನಾ ಆಶೀರ್ವಾದ ಇದ್ದರೆ. ಸಮಾಜದಲ್ಲಿ ಇನ್ನು ಹಲವು ಸಮಾಜ ಸೇವೆ ಜನಸೇವೆ ಮಾಡಲು ನನಗೆ ಅವಕಾಶ ಸಿಕ್ಕಾಗ ನಿಮ್ಮೆಲ್ಲರ ಪ್ರೀತಿ ಸ್ನೇಹದಿಂದ ನಾನು ಶಾಸಕನಾಗಿ ನಿಮ್ಮ ಸೇವೆಗೆ ಸದಾ ಸಿದ್ದ ಹೇಳಿದರು.
ನಂತರ ಕೊರಟಗೆರೆಯ ಜೂನಿಯರ್ ಕಾಲೇಜ್ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಪಂದ್ಯವನ್ನು ವೀಕ್ಷಿಸಿ , ಪಂದ್ಯವನ್ನು ಗೆದ್ದ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿದರು. ಫೈನಲ್ ಪಂದ್ಯದ ರನ್ನರ್ ತಂಡಕ್ಕೆ 50,000ಗಳ ನಗದು ಬಹುಮಾನವನ್ನು ನೀಡಿ ಕ್ರೀಡೆಯು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನ ಶೈಲಿಯನ್ನು ಬದಲಾಯಿಸುತ್ತದೆ.
ಕ್ರೀಡಾಪಟು ಯಾವುದೇ ಕ್ರೀಡೆಯಲ್ಲಾದರೂ ಕ್ರಿಯಾಶೀಲತೆಯಿಂದ ಬೆಳೆದು ಉತ್ತಮ ಜೀವನಶೈಲಿಯನ್ನು ಬೆಳೆಸಿಕೊಳ್ಳಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಬಂದ ಬಹುಮಾನ ನಗದು ಮತ್ತು ವಿಚಾರವನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಬೇಕು. ನಾನು ಕೂಡ ಒಬ್ಬ ಕ್ರೀಡಾಪಟು ಕ್ರಿಕೆಟರ್ ಆಗಿ ನನಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಕ್ರೀಡೆಗೆ ಯಾವುದೇ ಸಹಾಯ ಬೇಕಿದ್ದರೂ. ನನ್ನ ಬಳಿ ಕೇಳಿ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ಕ್ರೀಡೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯ ಅದರಲ್ಲಿ ಗುರಿಯಂಬುದು. ಅವರ ಆಟದಲ್ಲಿ ತೋರಿಸಿ ಗೆಲ್ಲಬೇಕು. ಎಂದು ಎಲ್ಲಾ ಕ್ರಿಕೆಟರ್ಸ್ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಹಿತವಚನ ಹೇಳಿದರು . ನೂರಾರು ಜನ ಕಾರ್ಯಕರ್ತರು ಸೇರಿ ಜೈಕಾರ ಕೂಗಿದರು ಮುಂದಿನ ಶಾಸಕರು ನೀವೇ ಎಂದು ತಿಳಿಸಿದರು
ವರದಿ ನರಸಿಂಹಯ್ಯ ಹೊಸಕೋಟೆ
