ಕೊರಟಗೆರೆ ;- ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು-ಗೆಲುವು ಮುಖ್ಯವಲ್ಲ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತಿನೊಂದಿಗೆ ನಾಯಕತ್ವದ ಗುಣ, ಧೈರ್ಯ, ಸಂಯಮ, ಪ್ರಾಮಾಣಿಕತೆ, ಹೊಂದಾಣಿಕೆ, ದೈಹಿಕ ಸ್ಥಿರತೆ ಸೇರಿದಂತೆ ವಿನಯವಂತಿಕೆ ಗುಣಗಳು ಬೆಳೆಸಿಕೊಳ್ಳಲು ಸಹಕರಿಯಾಗಿದೆ ಎಂದು ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ ತಳಿಸಿದರು.
ಅವರು ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು ವೈದಾನದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಮತ್ತು ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 15 ಮತ್ತು 17 ವರ್ಷ ವಯೋಮಿತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಧ್ವಾಜಾರೋಹಣ ನೇರವೇರಿಸಿ ವಿದ್ಯಾರ್ಥಿಗಳಿಂದ ಕ್ರೀಡಾಜ್ಯೋತಿ ಪಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಸದೃಡ ದೇಹದಲ್ಲಿ ಸದೃಡ ಮನಸ್ಸು ಇರುತ್ತದೆ ಎಂಬುವುದು ಮನಸ್ಸಿಗೆ ಮತ್ತು ದೇಹಕ್ಕೆ ಸಂಬಂಧಿಸಿದ ನುಡಿಯಾಗಿದೆ.
ಇದನ್ನು ಓದಿ: ಕೊರಟಗೆರೆ: ಜಮೀನಿನಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡ ವಶ – ಅಬಕಾರಿ ಇಲಾಖೆಯ ಸಖತ್ ಕಾರ್ಯಾಚರಣೆ
ಪ್ರತಿಯೊಬ್ಬ ರಿಂದ ಆಶ್ರಯ ಪಡೆಯದೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ಹೋಗಲು ಮುಖ್ಯವಾಗಿ ಬೇಕಾಗಿರುವುದು ಆರೊಗ್ಯ ಇದನ್ನು ಯಾವುದೇ ಅಂಗಡಿ ಆಸ್ಪತ್ರೆಗಳಿಂದ ಪಡೆಯಲಾಗುವುದಿಲ್ಲ, ಆರೋಗ್ಯ ನಮ್ಮದಾಗಿಸಿ ಕೊಳ್ಳಲು ಇರುವ ಏಕೈಕ ಮಾರ್ಗ ದೈಹಿಕ ಚಟುವಟಿಕೆಯಿಂದ ಮಾತ್ರ ಇದಕ್ಕಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ರೀಡೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಮಾಧವರೆಡ್ಡಿ ಕ್ರೀಡಾ ಕೂಟದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೆಯಲ್ಲಿ ಸೋಲು-ಗೆಲುವು ಎಂಬುದು ಎಲ್ಲರಿಗೂ ಇರುತ್ತೆದೆ ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ ಆದರೆ ಸತತ ಪ್ರಯತ್ನ ಮತ್ತು ಅಬ್ಯಾಸದಿಂದ ಗೆಲುವು ಕಾಣಬಹುದು ಅದೇರೀತಿ ಜೀವನದಲ್ಲಿಯೂ ಸಹ ಸತತ ಪ್ರುಯತ್ನದಿಂದ ಯಶಸ್ಸು ಸಾಧ್ಯ ಎಂದ ಅವರು ಪ್ರತಿ ಯೊಬ್ಬವಿಧ್ಯಾರ್ಥಿ ಶಿಸ್ತು, ಪ್ರಾಮಾಣಿಕತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ದೊಡ್ಡ ಯರಗಾಮಯ್ಯ, ವೇದಮೂರ್ತಿ, ಅಜಯ್ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕೆಂಚಪ್ಪ, ಜಗದೀಶ್, ಬಿಆರ್ಸಿ ರುದ್ರೇಶ್, ನರಿಸಿಂಹರಾಜು, ಕೋಟೆಕಲ್ಲಯ್ಯ. ಬಿ.ಜಿ.ಹನುಮಂತರಾಯಪ್ಪ, ಗುರುರಾಜ್, ಈರಣ್ಣ, ಲಕ್ಷ್ಮಿಪುತ್ರ, ಧರ್ಮೇಂದ್ರ, ಪ್ರಭಾಸ್, ಶ್ರೀನಿವಾಸ್, ಸಂಜಯ್, ಪರಮೇಶ್, ಚಿಕ್ಕಪ್ಪಯ್ಯ, ಗುಂಡುರಾವ್, ವಿರೇಶ್, ಸತೀಶ್, ರಂಗನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
