ಕೊರಟಗೆರೆ : ತಾಲ್ಲೂಕಿನ ಕಸಬಾ ಹೋಬಳಿ ಜಿ. ನಾಗೇನಹಳ್ಳಿ ಸರ್ಕಲ್ ನಲ್ಲಿ ಕೊರಟಗೆರೆ ಕಡೆಗೆ ಕಡೆಯಿಂದ ಕೆ.ಎ.40 F 1322 ಬೆಂಗಳೂರು ಕಡೆಗೆ ವೇಗವಾಗಿ ಬಂದ ಬಸ್ಸು ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ ಕಡೆಯಿಂದ ಬಂದ ಕಾರು ಹಾಗೂ ಕೆಇಬಿ ಲೈಟು ಕಂಬ ಬೈಕಿಗೆ ರಭಸವಾಗಿ ಮತ್ತು ಬಸ್ ಕಾಗಿ ಕಾದು ಕುಳಿತ ನಾಗೇನಹಳ್ಳಿ ಬಸ್ಟಾಂಡ್ ನಲ್ಲಿ ದ್ದ ಮಹಿಳೆಗೆ ಗುದ್ದಿದೆ.

ಅಪಘಾತದಲ್ಲಿ ಕೆ ಎಸ್ .ಆರ್ ಟಿ.ಸಿ. ಬಸ್ ವಸಂತ ಎಂಬ ಮಹಿಳೆ ಮೇಲೆ. ಹರಿದ ಪರಿಣಾಮ. ಕಾಲು ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ.
ವಸಂತ ಎಂಬವರು ಗಂಡನ ಜೊತೆ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆಯಲು ಬಂದಿದ್ದು.ದರ್ಶನ ಪಡೆದು ಬೆಂಗಳೂರು ಕಡೆಗೆ ಬಸ್ಸಿಗಾಗಿ. ರಸ್ತೆ ಬದಿಯಲ್ಲಿ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದು ಗುದ್ದಿದೆ.

ಸ್ಥಳೀಯ ಜನರು ಹಾಗೂ ಸಾರ್ವಜನಿಕರ ಸಹಾಯದಿಂದ ಕಾಲುಮುರಿದ ವಸಂತ ರವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಲಾಗಿದೆ.
ವರದಿ : ನರಸಿಂಹಯ್ಯ ಹೊಸಕೋಟೆ
