ಕೊರಟಗೆರೆ :- ತಾಲೂಕು ಮಟ್ಟದ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಮಾರ್ಚಿ 27ರ ಶುಕ್ರವಾರ ಬೆಳಿಗ್ಗೆ 9:00ಗೆ ಎಲೆರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಸಿದ್ದಗಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿ ಎಲೇರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮವನ್ನು ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಹಕಾರ ಸಂಘ ಒಕ್ಕೂಟ ನಿಯಮಿತ ಮಲ್ಲಸಂದ್ರ , ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊರಟಗೆರೆ ತಾಲೂಕು, ಎಲೆರಾಂಪುರ ಹಾಲು ಉತ್ಪಾದಕ ಸಹಕಾರ ಸಂಘ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲೂಕು ಮಟ್ಟದ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಗೆ ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಗೋಪಾಲಕರು ಮಾತ್ರ ಹಾಲು ಕರೆಯಲು ಅವಕಾಶವಿರುತ್ತದೆ, ಕಿವಿ ಓಲೆ ಅಳವಡಿಸಿದ ಹಸುಗಳಿಗೆ ಮಾತ್ರ ಅವಕಾಶವಿರುತ್ತದೆ, ಭಾಗವಹಿಸುವವರು ಆಧಾರ್ ಕಾರ್ಡ್ ಮತ್ತು ಭಾವಚಿತ್ರ ನೀಡುವುದು, ಗೋಪಾಲಕರಿಗೆ ಮಾತ್ರ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
