ಕೊರಟಗೆರೆ :ತಾಲ್ಲೂಕು ತೋವಿನಕೆರೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಹಾಗೂ ಕಾರ್ಯದರ್ಶಿ ಲೋಕಾಯುಕ್ತರ ದಾಳಿ ನಡೆದಿದೆ.
ಇ ಸ್ವತ್ತು ಮಾಡಿಕೊಡಲು 8 ಸಾವಿರ ಹಣ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್ ಮಾರುತಿ ಹಾಗೂ ಕಾರ್ಯದರ್ಶಿ ಸುಮ ಹಣ ಪಡೆಯುವಾಗ ಲೋಕಾಯುಕ್ತರ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಇನ್ನು ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತು ಮಾಡಿಸಲು ಪಲಾನುಭವಿ ಸ್ಥಳಿಯ ವ್ಯಕ್ತಿ ಮಹಮದ್ ಅಲಿ ಎಂಬುದರಿಂದ ಹಣ ಪಡೆಯುವ ಸಮಯದಲ್ಲಿ ತುಮಕೂರು ಲೋಕಾಯುಕ್ತ ವರಿಷ್ಠಾಧಿಕಾರಿ ಎ ವಿ ಲಕ್ಷ್ಮೀನಾರಾಯಣ ಹಾಗೂ ಡಿವೈಎಸ್ಪಿ ಡಾ ಸಂತೋಷ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಲಾಕ್ ಮಾಡಲಾಗಿದೆ
ಇನ್ನು ದಾಳಿಯಲ್ಲಿ ಸುರೇಶ್,ರಾಜು,ಮೇಟಿ, ಸಲೀಂ ಸೇರಿದಂತೆ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ವರದಿ ನರಸಿಂಹಯ್ಯ ಹೊಸಕೋಟೆ
