ಕೊರಟಗೆರೆ :- ನಮ್ಮ ದೇಶದ ಜನರ ಉಸಿರು, ಸುಭದ್ರ ಆಡಳಿತದ ಶಕ್ತಿ ನಮ್ಮ ಸಂವಿಧಾನವಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಅಧಿಕಾರಿಗಳು, ಶಿಕ್ಷಕರು, ಶಾಲಾಮಕ್ಕಳಿಂದ ಬೃಹತ್ ಜಾಥಾನಡೆಸಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಾತಾವನ್ನು ಉದ್ದೇಶಿಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಲವು ದೇಶಗಳನ್ನು ಸುತ್ತಿ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸುಭದ್ರವಾದ ಸಂವಿಧಾನ ನೀಡಿ ದೇಶದ ಅಖಂಡತೆಗೆ ಅಡಿಪಾಯವನ್ನು ಹಾಕಿದ್ದಾರೆ, ನಮ್ಮ ದೇಶದ ಮೂಲಭೂತ ಕಾನೂನು ನಮ್ಮ ಸಂವಿಧಾನವಾಗಿದೆ.
ಇದನ್ನು ಓದಿ: ಕೊರಟಗೆರೆ : ಅದ್ದೂರಿಯಾಗಿ ನಡೆದ ಶ್ರೀ ಮುತ್ತರಾಯ ಸ್ವಾಮಿಯ ಲಕ್ಷ ದೀಪೋತ್ಸವ
ಈ ಸಂವಿಧಾನ ಮೂಲ ಬದಲಾಗಲು ನ್ಯಾಯಾಲಯಗಳು ಬಿಡುವುದಿಲ್ಲ ಭಾರತ ಸಂವಿಧಾನ ವಿಶ್ವದ್ಲಲೇ ಅತಿ ದೊಡ್ಡ ಸಂವಿಧಾನವಾಗಿದ್ದು 146385 ಬರಹಗಳನ್ನು ಹೊಂದಿರುವುದರೋಂದಿಗೆ 140 ಕೋಟಿ ಜನರ ಹಕ್ಕು ಆಶ್ರಯ ಜೀವನವನ್ನು ಕಾಪಾಡುತ್ತಿದೆ, ಭಾರತದಲ್ಲಿ ವಿವಿಧ ಧರ್ಮಗಳಿಗೆ ವಿವಿಧ ಗ್ರಂಥಗಳಿವೆ ಆದರೆ ಭಾರತ ಎಲ್ಲಾ ಧರ್ಮದವರಿಗೂ ಏಕೈಕ ಗ್ರಂಥ ನಮ್ಮ ಸಂವಿಧಾನವಾಗಿದೆ ನಮ್ಮ ದೇಶದ ಸುತ್ತಮುತ್ತಲ ದೇಶಗಳಲ್ಲಿ ಅಭದ್ರತೆ ದಂಗೆಗಳು ಕಾಣುತ್ತಿವೆ ಅದರೆ ನಮ್ಮ ದೇಶದ ಭದ್ರತಾವ್ಯವಸ್ಥೆ ಸ್ಥಿರವಾಗಿರುವುದು ನಮ್ಮ ಸಂವಿಧಾನದಿಂದ ಇಂತಹ ಸಂವಿಧಾನವನ್ನು ನಾವೆಲ್ಲರೂ ಓದಿ ಅರಿಯಬೇಕು ದೇಶದ ಮುಂದಿನ ಮಕ್ಕಳು ಅಧ್ಯಯನ ಮಡಬೇಕು ಇದು ನಮ್ಮ 76 ನೇ ಸಂವಿಧಾನ ದಿನಾಚರಣೆಯಾಗಿದ್ದು ಈ ಸಂವಿಧಾನ ರಚನೆಗೆ ಕಾರಣವಾದ ಎಲ್ಲಾ ಮಹನೀಯರಿಗೆ ಗೌರವಸಲ್ಲಿಸಬೇಕು ಎಂದರು.
ಜಾತಾದಲ್ಲಿ ತಾ.ಪಂ.ಇ.ಓ.ಅಪೂರ್ವ, ಸಮಾಜಕಲ್ಯಾಧಿಕಾರಿ ಸಾಮಾಜಿಕ ಅರಣ್ಯ ಅಧಿಕಾರಿ ಶಿಲ್ಪ, ಹಿಂದುಳಿದವರ್ಗಗಳ ಅಧಿಕಾರಿ ಅನಂತರಾಜು, ಪ.ಪಂಅರೋಗ್ಯಾಧಿಕಾರಿ ಮಹಮದ್ ಹುಸೇನ್, ಅಧಿಕಾರಿಗಳಾದ ಗುರುಮೂರ್ತಿ, ಮಧುಸೂದನ್, ನಾಗರಾಜು, ಬಸವರಾಜು, ಚಿಕ್ಕಣ್ಣ, ಮೋಹನ್, ಮುಖಂಡರಾದ ದಾಡಿವೆಂಕಟೇಶ್, ಶಿವರಾಮಯ್ಯ, ಅಟಿಕನಾಗರಾಜು, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ.

[…] […]