ಕೊರಟಗೆರೆ :- ಇತಿಹಾಸ ಪ್ರಸಿದ್ಧ ವಡ್ಡಗೆರೆ ಶ್ರೀವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ಬಹಳ ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿವಿಜೃಂಭಣೆಯಿಂದ ಜರುಗಿತು.
ತಾಲೂಕಿನ ಕಸಬಾ ಹೋಬಳಿಯ ವಡ್ಡಗೆರೆಯಲ್ಲಿ ನೆಲೆಸಿರುವ 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀವೀರನಾಗಮ್ಮ ತಾಯಿ ಜಾತ್ರೆ ಯುಗಾದಿ ಹಬ್ಬದ ಮಾರನೇ ದಿನ ನಡೆಯುವಂತ ರಥೋತ್ಸವ ಸಹಸ್ರಾರು ಭಕ್ತಾದಿಗಳು ರಥ ಏಳೆಯುವ ಮೂಲಕ ಭಕ್ತರ ಸಂಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು .
ರಥೋತ್ಸವವನ್ನ ಕಳೆದ ವರ್ಷದಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥ ಎಳೆಯುವ ಮೂಲಕ ಭಕ್ತಾದಿಗಳು ದೇವಿಯನ್ನ ಕಣ್ತುಂಬಿಸಿಕೊಂಡರು.

ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸೇರಿದಂತೆ ಆಂಧ್ರ ,ತಮಿಳ್ನಾಡು , ಕೇರಳ , ಗೋವಾ ರಾಜ್ಯಗಳಿಂದ ಸಾವಿರಾರು ಭಕ್ತಾರು ಜಾತ್ರೆಗೆ ಆಗಮಿಸಲಿದ್ದು, ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ವೀರನಾಗಮ್ಮ ತಾಯಿಯ ದರ್ಶನ ಪಡೆದು ಪುನೀತ ಭಾವನೆಯಲ್ಲಿ ಹಿಂತಿರುಗುವುದು ಸಾಮಾನ್ಯ.
ಈ ಬಾರಿ ತಾಲೂಕ್ ಆಡಳಿತ ಹಾಗೂ ಮುಜರಾಯಿ ಇಲಾಖೆ ಮೇಲು ಉಸ್ತುವಾರಿ ವಹಿಸಿಕೊಂಡು ಅದರಲ್ಲೂ ತಾಲೂಕ್ ಆಡಳಿತಾಧಿಕಾರಿ ಮಂಜುನಾಥ್ ಸ್ವತಹ ಕಾಳಜಿ ವಹಿಸಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಅವಿರತಶ್ರಮವಹಿಸಿದ್ದರು ಸುಸೂತ್ರವಾಗಿ ರಥೋತ್ಸವ ಜರಿಸುವುದರಿಂದ ಹಿಡಿದು ಬಂದ ಭಕ್ತಾದಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಹಾಗೂ ಪ್ರಸಾದ ವ್ಯವಸ್ಥೆ ವ್ಯವಸ್ಥಿತವಾಗಿ ಆಯೋಜನೆಗೊಳಿಸಲಾಯಿತು.

ಇತಿಹಾಸ ಪ್ರಸಿದ್ಧ ವಡ್ಡಗೆರೆ ವೀರನಾಗಮ್ಮ ತಾಯಿ ದೇವಾಲಯಕ್ಕೆ ಪುರಾತನ ಇತಿಹಾಸವಿದೆ, ಪ್ರತಿವರ್ಷ ಯುಗಾದಿ ಮಾರನೇ ದಿನ ಅದ್ಧೂರಿ ಜಾತ್ರೆ ಮಹತ್ವ ನಡೆಯುತ್ತದೆ, ಆಡಳಿತ ಮಂಡಳಿಯು ನಿರ್ಮಿಸಿದ ರಥೋತ್ಸವವು ಸತತ ಎರಡನೇ ಬಾರಿಗೆ ಸುಸೂತ್ರವಾಗಿ ರಥೋತ್ಸವ ವಿಜೃಂಭಣೆಯಿಂದ ಆಯೋಜನೆಗೊಂಡಿದೆ , ಈ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹೀಗೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿ ತಾಯಿಯ ದರ್ಶನ ಪಡೆದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
– ಶಿವಕುಮಾರ್..
ಪ್ರಧಾನ ಅರ್ಚಕ ವಡ್ಡಗೆರೆ ಶ್ರೀ ವೀರ ನಾಗಮ್ಮ ದೇವಸ್ಥಾನ.
ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ವೀರನಾಗಮ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಬಹಳ ವ್ಯವಸ್ಥಿತವಾಗಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸತತ ಎರಡನೇ ಬಾರಿಗೆ ರಥೋತ್ಸವ ಜರುಗಿದೆ ಯಾವುದೇ ಗೊಂದಲ ಗದ್ದಲ ಸೇರಿದಂತೆ ಭಕ್ತಾದಿಗಳಿಗೆ ಅಡಚಣೆಯಾಗದ ರೀತಿಯಲ್ಲಿ ವ್ಯವಸ್ಥಿತವಾಗಿ ಜಾತ್ರಾ ಮಹೋತ್ಸವ ಮುಕ್ತಾಯಗೊಂಡಿರುವುದು ಸಂತಸ ತಂದಿದೆ ಜಾತ್ರಾ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
– ರಾಮಯ್ಯ .
ಸ್ಥಳೀಯ ಮುಖಂಡ ಹಾಗೂ ದೇವಸ್ಥಾನದ ಧರ್ಮ ಕರ್ತ ವಡ್ಡಗೆರೆ
ವಿವಾಹ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಈಗೇ ಅನೇಕ ಭಕ್ತರ ಹರಿಕೆಗಳನ್ನು ಈಡೇರಿಸುತ್ತ ಬಂದಿರುವ ವರಪುರ ವಡ್ಡಗೆರೆ ವೀರನಾಗಮ್ಮ ತಾಯಿಯ ಮಹಿಮೆ ಅಪಾರ ನಾನು ಉದ್ಯೋಗಸ್ಥರಾಗಿ ನ್ಯಾಯಾಲಯದಲ್ಲಿ ಕೆಲಸ ಮಾಡುವಂತಹ ಅವಕಾಶ ಕಲ್ಪಿಸಿದ್ದು ಶ್ರೀ ವೀರ ನಾಗಮ್ಮ ದೇವತೆ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ತಾಯಿ ಮರೆ ಹೋದರೆ ಸಕಲ ಭಕ್ತರಿಗೂ ತಮ್ಮ ಇಷ್ಟಾರ್ಥ ಸಿದ್ದಿ ಆಗುವುದು ಶತಸಿದ್ಧ
– ಮಂಜುಳಾ
ಕೊರಟಗೆರೆ ನಿವಾಸಿ .
ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ವಡ್ಡಗೆರೆ ಶ್ರೀ ವೀರ ನಾಗಮ್ಮ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಆಯೋಜನೆಗೊಂಡಿದೆ , ರಥೋತ್ಸವದ ವೇಳೆ ಲಕ್ಷಾಂತರ ಭಕ್ತರು ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ, ತಾಲೂಕು ಆಡಳಿತ ರಥೋತ್ಸವದಲ್ಲಿ ಆಗಮಿಸಿದ ಸಹಸ್ರಾರು ಭಕ್ತಾದಿಗಳಿಗೆ ಸುಸೂತ್ರವಾಗಿ ಯಾವುದೇ ಗೊಂದಲವಿಲ್ಲದೆ ದರ್ಶನ ವ್ಯವಸ್ಥೆ ಹಾಗೂ ದಾಸೋಹ ವ್ಯವಸ್ಥೆಯನ್ನ ಬಹಳ ಅಚ್ಚುಕಟ್ಟಾಗಿ ಕರ್ತವ್ಯವನ್ನು ನಿಭಾಯಿಸಿ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಿದೆ.
– ಮಂಜುನಾಥ್.
ತಹಶೀಲ್ದಾರ್ ಕೊರಟಗೆರೆ
