KAS ಆಕಾಂಕ್ಷೆಗಳ ಕನಸು ಭಗ್ನ- ಕೆಪಿಎಸ್‌ಸಿ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕಾತಿ ರದ್ದು: ಮೀಸಲಾತಿ ಹೆಚ್ಚಳ ಆದೇಶಕ್ಕೆ ಕೆಎಸ್‌ಎಟಿ ತಡೆ

“ಕೆಎಎಸ್‌ ಹುದ್ದೆಗಳ ಭರ್ತಿ ಜೊತೆಗೆ 2022ರ ಡಿಸೆಂಬರ್‌ 12ರಂದು ರಾಜ್ಯ ಸರ್ಕಾರ ಮೀಸಲು ಹೆಚ್ಚಳಕ್ಕೆ ಹೊರಡಿಸಿದ್ದ ಆದೇಶವನ್ನೂ ಸಹ ಕೆಎಸ್‌ಎಟಿ ರದ್ದುಗೊಳಿಸಿದ್ದು, ಪ್ರತಿವಾದಿ ಕೆಪಿಎಸ್‌ಸಿ ಕಾನೂನು ಪ್ರಕಾರ ನೇಮಕಕ್ಕೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಸ್ವತಂತ್ರವಾಗಿದೆ” ಎಂದು ಸ್ಪಷ್ಟಪಡಿಸಿದೆ.