ಕೆ.ಆರ್.ಪೇಟೆ : ಪಟ್ಟಣದ ಶ್ರೀ ರಂಗ ಚಿತ್ರಮಂದಿರ ಆವರಣದಲ್ಲಿ ಡಾ:ರಾಜ್ ರಂಗ ಕಲಾ ವೇದಿಕೆ ವತಿಯಿಂದ 23 ದಿನಗಳ ಕಾಲ ನಡೆಯುವ ನಾಟಕೋತ್ಸವವನ್ನು ಶಾಸಕ ಹೆಚ್.ಟಿ ಮಂಜು, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಸೇರಿದಂತೆ ಗಣ್ಯರು ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು
ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಆಧುನಿಕ ಜಗತ್ತಿನ ಮೊಬೈಲ್ ಟಿ.ವಿ ಅಂತಹ ಹಾವಳಿಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾದ ಪೌರಾಣಿಕ ನಾಟಕಗಳು ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು ಪೌರಾಣಿಕ ನಾಟಕ ಏರ್ಪಡಿಸುವ ಕಲಾವಿದರು ಹೊಂದಿರುವ ತಾಲೂಕು ಎಂದು ನಮ್ಮ ಕ್ಷೆತ್ರ ಹೆಗ್ಗಳಿಕೆಗೆ ಸಾಕ್ಷಿಯಾದರು ಕೂಡ ಪೌರಾಣಿಕ ಕಲಾವಿದರಿಗೆ, ಕಲಾಮಂದಿರ ಬೇಕು ಎಂದು ಪ್ರತಿ ಪೌರಾಣಿಕ ನಾಟಕ ವೇದಿಕೆಗಳಲ್ಲಿ ಮನವಿ ಸಲ್ಲಿಸಿದ್ದಾರೆ. ಆ ಮನವಿಗೆ ಸ್ಪಂದನೆಯಾಗಿ ಈಗಾಗಲೇ ಕಸಾಪ ಭವನಕ್ಕೆ ಪಟ್ಟಣದ ಹೃದಯ ಭಾಗದಲ್ಲಿ ನಾಲ್ಕು ಗುಂಟೆ ವಿಸ್ತೀರ್ಣದಲ್ಲಿ ನಿವೇಶನ ಗುರುತಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಅದನ್ನೇ ನಿರ್ಮಾಣದ ನಂತರ ಪೌರಾಣಿಕ ಕಲಾವಿದರು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

*ಬಳಿಕ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್* ಇತೀಚೆಗೆ ಕೆಲಜನರಲ್ಲಿ ನೈತಿಕತೆ, ಸಾಮಾಜಿಕ ಮೌಲ್ಯಗಳು ಪತನವಾಗುತ್ತಿವೆ ಯುವ ಪೀಳಿಗೆ ಪೌರಾಣಿಕ ನಾಟಕಗಳನ್ನು ನೋಡುವ ಮೂಲಕ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಮುಖೇನ, ನಾಟಕ ಮುಖಾಂತರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಾಟಕೋತ್ಸವಗಳು ಹೊಸ ಪ್ರತಿಭೆಯನ್ನ ಹೊರತರುವ ವೇದಿಕೆಯಾಗಿವೆ, ಪಟ್ಟಣಕಿಂತ ಪೌರಾಣಿಕ ಹಾಗೂ ಜಾನಪದದ ಕಣಜಗಳಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಏರ್ಪಡಿಸಿ,ಗ್ರಾಮೀಣ ಕಲಾವಿದರನ್ನು ಗುರಿತಿಸುವ ಕೆಲಸವನ್ನು ಮಾಡಬೇಕಿದೆ. ಇಂತಹ ಕಲೆಗಳನ್ನು ಉಳಿಸಿ, ಪೋಷಣೆ ಮಾಡಿ ಮುಂದಿನ ಪೀಳಿಗೆಗೆ ಇವುಗಳ ಮಹತ್ವವನ್ನು ತಿಳಿಸಿಕೊಡುವ ಹೊಣೆಗಾರಿಕೆ ಪ್ರತಿಯೊಂಬ್ಬರು ಮಾಡಬೇಕು ಎಂದರು.

ನಾಟಕೋತ್ಸವದಲ್ಲಿ ಕಿಕ್ಕೇರಿ ಜೈಭುವನೇಶ್ವರಿ ಯುವ ಕಲಾವಿದರ ಸಂಘದಿಂದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ನೋಡಲು ಕಲಾ ಪೋಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಮೊದಲ ದಿನವೇ ನಾಟಕೋತ್ಸವಕ್ಕೆ ಮೆರಗು ತುಂಬಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಲದೇವ್,ನಿರ್ದೇಶಕ ದಿಲೀಪ್ ಕುಮಾರ್,ತಾ.ಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ,ಗ್ರಾ.ಪಂ ಸದಸ್ಯ ಶೀಳನೆರೆ ಸಿದ್ದೇಶ್, ಹಿರಿಯ ಪತ್ರಕರ್ತ ಬಳ್ಳೆಕೆರೆ ಮಂಜುನಾಥ್, ಯುವ ಮುಖಂಡ ಶ್ಯಾಮ್ ಪ್ರಸಾದ್,ಹಿರಿಯ ರಂಗ ಭೂಮಿ ಕಲಾವಿದ ಚಟ್ಟೆನಹಳ್ಳಿ ನಾಗರಾಜ್,ಡಾ ರಾಜ್ ರಂಗ ಕಲಾ ಸಂಘದ ಅಧ್ಯಕ್ಷ ರಾಗಿ ಮುದ್ದನಹಳ್ಳಿ ದೇವರಾಜು,ಗೌರವಾಧ್ಯಕ್ಷ ತಂದ್ರೆಕೊಪ್ಪಲು ಮಂಜುನಾಥ್, ಉಪಾಧ್ಯಕ್ಷ ವಿಠಲಪುರ ಸಣ್ಣತಮ್ಮೆಗೌಡ, ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ದೇವರಾಜು,ಖಜಾಂಚಿ ಮರಟಿಕೊಪ್ಪಲು ಮಂಜುನಾಥ್, ಸಹಾ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಪತ್ರಕರ್ತ ಹೊಸಹೊಳಲು ರಘು, ಸಂಘದ ಸದಸ್ಯರಾದ ಬಂಡಿಹೊಳೆ ಕಾಯಿ ಮಂಜೇಗೌಡ, ಹೊಸಹೊಳಲು ಯೋಗೇಶ್ ಎನ್. ಗೌಡ, ರವಿ ಕುಮಾರ್, ರುದ್ರೇಶ್, ನಾಟನಹಳ್ಳಿ ಜಗದೀಶ್, ಡ್ರಾಮಾ ಮಾಸ್ಟರ್ ಅನಿಲ್ ಕುಮಾರ್, ಕತ್ತರಘಟ್ಟ ಮಹೇಶ್,ಸಂಪತ್,ಸೇರಿದಂತೆ ಕಲಾಪೋಷಕರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
