ಕೆ.ಆರ್.ಪೇಟೆ: ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ, ವಿದ್ಯಾಥಿಗಳು ಕೇವಲ ವೇಷ ಭೂಷಣಗಳ ಕಡೆಗೆ ಮಾತ್ರ ಗಮನಹರಿಸದೇ ಉತ್ತಮ ಸಂಸ್ಕಾರ ರೂಢಿಸಿಕೊಂಡು ದೇಶದ ಅಭಿವಭಿವದ್ಧಿಗೆ ಮತ್ತು ಬದಲಾವಣೆಗೆ ಮುಂದಾಗ ಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಶ್ರೀ ಕನಕ ನೌಕರ ಬಳಗದಿಂದ 2025-26ನೇ ಸಾಲಿನ ಪ್ರತಿಭವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ ಎಂದ ಅವರು ವಿದ್ಯಾರ್ಥಿಗಳು ಈಗೀಗ ಸಣ್ಣ ಸಣ್ಣ ಸೋಲುಗಳಿಗೆ ಕುಗ್ಗಿ ಹೋಗುತ್ತಿದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ನಾವು ಬೇರೆಯವರನ್ನು ನಂಬಿದಷ್ಟು ನಮ್ಮನ್ನು ನಾವು ನಂಬುತ್ತಿಲ್ಲ. ಎಲ್ಲಿಯವರೆಗೂ ತಮ್ಮ ಸಾಮರ್ಥ್ಯ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.ಸತತ ಪರಿಶ್ರಮ ಪಟ್ಟಾಗ ಮಾತ್ರ ಗೆಲುವು ಸಿಗಲಿದೆ ಎಂಬುದನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು. ಯಶಸ್ಸು ಎಂದರೆ ಅದು ರಾತ್ರೋ ರಾತ್ರಿ ಜರುಗುವ ಪವಾಡವಲ್ಲ. ಎಷ್ಟೋ ವರ್ಷಗಳ ತಪ್ಪಸ್ಸಿನ ಒಟ್ಟು ಮೊತ್ತವೇ ಯಶಸ್ಸು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರತಿಭವಂತ ಅಂತರಾಷ್ಟ್ರೀಯ ಕ್ರೀಡಾಪಟು ವಿಜಯ ಕುಮಾರಿ ಶಕ್ತಿಯೇ ಜೀವನ ನಿಶ್ಯಕ್ತಿಯೇ ಮರಣ ನಾನು ಕೂಡ ಬಡ ಕುಟುಂಬ ವ್ಯಕ್ತಿ ಎಂದುಕೊಂಡಿದ್ದರೇ ಸದ್ಯ ನಾನು ಕೂಡ ರಾಷ್ಟ್ರ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತಿರಲಿಲ್ಲ ಇದಕ್ಕೆಲ್ಲ ನನ್ನ ತಂದೆ ತಾಯಿ ಗುರು ಕಾರಣವಾಗಿದ್ದೇ ಹಾಗೂ ಧನಾತ್ಮಕ ಚಿಂತನೆ. ನೀವೂ ಧನಾತ್ಮಕವಾಗಿ ಚಿಂತನೆ ಮಾಡಿದಲ್ಲಿ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಬಳಿಕ 5 ಪ್ರತಿಭವಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕ ತುಳಸಿರಾಮ್ ಅವರನ್ನ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಮೋಹನ್ ಕುಮಾರ್,ಕನಕ ನೌಕರರ ಬಳಗದ ಸದಸ್ಯರು ಹಾಗೂ ಶಿಕ್ಷಕರಾದ ಸಂಣ್ಣೆಗೌಡ ಪಿ.ಜೆ ಕುಮಾರ್,ಉಮೇಶ್,ಪ್ರಕಾಶ್,ಮಂಜು, ಅಲಂಬಾಡಿ ಕಾವಲು ದೇವರಾಜು, ದೇವರಾಜೇಗೌಡ, ಜಿ.ಎಂ ದೇವರಾಜು,ಮಾಕವಳ್ಳಿ ಕುಮಾರ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
