ಕೆ ಆರ್ ಪೇಟೆ: ಭಾರತದ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಆಶಯದಂತೆ ಸರ್ವರಿಗೂ ಸಮಪಾಲು ಸಿಗಬೇಕಾದರೆ ಎಲ್ಲರೂ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಶಾಸಕ ಹೆಚ್ ಟಿ ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಸ್ವಾಭಿಮಾನಿ ನೌಕರರ ಬಳಗ ಹಾಗೂ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪ್ರಾಥಮಿಕ ಮಾದ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಾವಿತ್ರಿ ಬಾಯಿಪುಲೆ ಜನ್ಮ ದಿನಾಚರಣೆ, ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಂಬೇಡ್ಕರ್, ಸಾವಿತ್ರಿ ಬಾಯಿಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಬಳಿಕ ಮಾತಾನಾಡಿದ ಅವರು ವಿಶ್ವದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಂತರ ಭಾರತ ಸಂವಿಧಾನವನ್ನು ಅಂಬೇಡ್ಕರ್ ಅವರು ಬರೆದಿದ್ದಾರೆ. ಅಂಬೇಡ್ಕರ್ ಅವರು ಶೋಷಿತರು, ಮಹಿಳೆಯರು, ಕಾರ್ಮಿಕರ ಹಕ್ಕುಗಳಿಗಾಗಿ ಪರವಾಗಿ ಹೋರಾಟ ಮಾಡಿದ ಮಹಾನ್ ಶ್ರೇಷ್ಠ ಸಂವಿಧಾನ ಶಿಲ್ಪಿಯಾಗಿದ್ದಾರೆ. ಅಂಬೇಡ್ಕರ್ ಅವರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸಬಾರದು. ಎಲ್ಲರೂ ಅಂಬೇಡ್ಕರ್ ಅವರು ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಕೊಡಿಸಿದ ಧೀಮಂತ ನಾಯಕ ಎಂದು ಶಾಸಕ ಹೆಚ್.ಟಿ.ಮಂಜು ಬಣ್ಣಿಸಿದರು.

ಅಸ್ಪೃಶ್ಯತೆ ತೊಲಗಿ ಜಾತೀಯ ವ್ಯವಸ್ಥೆ ತೊಲಗಿ ಎಲ್ಲರೂ ಒಂದೇ ಎಂಬ ಮನೋಭಾವನೆ ಮೂಡಿದಾಗ ಅಂಬೇಡ್ಕರ್ ಕಂಡ ಕನಸು ನನಸು ಸಾದ್ಯವೆಂದು ತಿಳಿಸಿದರು.
ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ವಾಕಾಂಕ್ಷೆಯನ್ನ ಹೊಂದಿರಬೇಕು.ಉನ್ನತ ಸ್ಥಾನಕ್ಕೆ ಹೋಗುವ ಉದ್ದೇಶ ಇಟ್ಟುಕೊಂಡೇ ವಿದ್ಯಾಭ್ಯಾಸ ಮಾಡಬೇಕು,ಆಗ ಮಾತ್ರ ಗುರಿ ಮುಟ್ಟಲು ಸಾಧ್ಯವಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಕಷ್ಟಪಟ್ಟು ಉನ್ನತ ವ್ಯಾಸಂಗ ಮಾಡಿದ್ದರು.ಜ್ಞಾನಕ್ಕೆ ಹೆಚ್ಚು ಒತ್ತನ್ನು ನೀಡಿದ್ದರು.ಅವರ ಜ್ಞಾನ ತಳ ಸಮುದಾಯದವರ ಏಳಿಗೆಗೆ ಬಳಸಿಕೊಂಡದನ್ನು ಎಲ್ಲರೂ ಇಂದಿಗೂ ನೆನೆಯಬೇಕು ಅಂಬೇಡ್ಕರ್ ಅವರು ಮನಸ್ಸು ಮಾಡಿದ್ದರೆ ದೇಶ ಹಾಗೂ ವಿದೇಶದಲ್ಲಿ ದೊಡ್ಡ ಹುದ್ದೆ ಪಡೆಯಬಹುದಿತ್ತು. ಆದರೆ ಎಲ್ಲವನ್ನ ತ್ಯಜಿಸಿದ್ದ ಅವರು ಭಾರತದ ದಲಿತ, ಶೋಷಿತ, ಸಮುದಾಯಗಳ ಏಳಿಗೆಗೆ ದುಡಿದರು.ಅಂಬೇಡ್ಕರ್ ಅವರು ಮಾಡಿದ ಎಲ್ಲಾ ಕೆಲಸ ಪ್ರೇರಣೆಯಾಗಿದೆ.ಅವರ ಪ್ರೇರಣೆಯಂತೆ ನಾವೆಲ್ಲ ನಡೆಯುತ್ತಿದ್ದೇವೆ ಎಂದರು.

ಪುರಸಭಾ ಸದಸ್ಯರಾದ ಡಿ ಪ್ರೇಮ್ ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೆಯೇ ಹೇಳಿದ್ದರು. ದಲಿತರು ಮಹತ್ವಾಕಾಂಕ್ಷೆಯನ್ನ ಹೊಂದಿರುವುದಿಲ್ಲ ಎಂದು. ಸಣ್ಣ ಹುದ್ದೆಗೆ ಹೋದರೆ ಸಾಕು ಎನ್ನುತ್ತಾರೆ,ಆದರೆ ಸಮಾಜದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ದಲಿತರು ದೊಡ್ಡ ಹುದ್ದೆಗೆ ಹೋಗುವ ಮಹತ್ವಾಕಾಂಕ್ಷೆಯ ಇಟ್ಟುಕೊಂಡು ಓದಿದರೆ ಒಳ್ಳೆಯ ಸ್ಥಾನಕ್ಕೆ ಹೋಗುತ್ತೀರಿ. ಆಗ ಅಂಬೇಡ್ಕರ್ ಅವರಿಗೆ ಕೊಡುವ ಗೌರವವಾಗಿದೆ ಸ್ವಾತಂತ್ರ್ಯ80ವರ್ಷವಾದರೂ, ದಲಿತರು ಎಷ್ಟು ದೊಡ್ಡ ಹುದ್ದೆಗೆ ಹೋಗಿದ್ದಾರೆ. ಕೈಗಾರಿಕೆ,ಕೃಷಿ, ಯಾವುದೇ ಕ್ಷೇತ್ರದಲ್ಲಿ ದೊಡ್ಡ ಹಂತಕ್ಕೆ ಈ ವರೆಗೂ ಯಾರು ಹೋಗಿಲ್ಲ.ಆದರೆ ಜ್ಞಾನ ಎನ್ನುವ ಕ್ಷೇತ್ರದಲ್ಲಿ ದೊಡ್ಡ ಹಂತಕ್ಕೆ ಹೊಗಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಓದು ನಿರಂತರವಾಗಿ ಇರಲಿ. ಜ್ಞಾನ ಎನ್ನುವ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಎಸ್.ಸಿ.ಎಸ್.ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಆರ್.ಯೋಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ತಿಮ್ಮೇಗೌಡ,ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಅಕ್ಕಿಹೆಬ್ಬಾಳು ರಘು, ಜಿಲ್ಲಾ ದಿಶಾ ಕಮಿಟಿ ಸದಸ್ಯ ನರಸನಾಯಕ್, ಬೂಕನಕೆರೆ ನಾಡಕಚೇರಿಯ ಉಪತಹಸೀಲ್ದಾರ್ ಜಗದೀಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹೆಚ್ ಜೆ ಶ್ರೀನಿವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಮಂಜುನಾಥ್ , ದೊಡ್ಡ ಸೋಮನಹಳ್ಳಿ ಮಂಜಣ್ಣ, ಕೆ.ಎಸ್.ರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ ಎಸ್ ಮಂಜು, ಕರ್ನಾಟಕ ಎಸ್.ಸಿ.ಎಸ್.ಟಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್, ತಾಲ್ಲೂಕು ಅಧ್ಯಕ್ಷ ಎಚ್.ಆರ್.ಯೋಗೇಶ್, ಗೌರವಾಧ್ಯಕ್ಷ ಕೆ.ಹೆಚ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಉಪಾಧ್ಯಕ್ಷ ಹೆಚ್ ಗೋಪಾಲ್, ಖಜಾಂಚಿ ಕುಮಾರ್, ಸಂಘಟನಾ ಕಾರ್ಯದರ್ಶಿ ನಂಜುಂಡ, ಹೆಚ್.ಎನ್.ಬಸವರಾಜು, ಕೃಷ್ಣ ಕುಮಾರ್, ನಾಗಾನಾಯಕ್, ಸಹ ಕಾರ್ಯದರ್ಶಿ ಡಿ.ಕೆ.ಮೋಹನ್, ಭೈರಯ್ಯ, ಮಹೇಶ್, ರತ್ನಮ್ಮ, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ .ಮಕ್ಕಳಿಗೆ ಉಚಿತ ಪ್ರವಾಸ ಭಾಗ್ಯ ಕಲ್ಪಿಸಿದ ತೆಂಡೇಕೆರೆ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು, ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ಕೆ.ಎಸ್.ರಾಜು, ಗವಿಮಠದ ಮೊರಾರ್ಜಿ ಶಾಲೆಯ ಪ್ರಸನ್ನಕುಮಾರ್, ಕ್ರೈಸ್ತ ದ ಕಿಂಗ್ ಕಾಲೇಜಿನ ಪ್ರಾಂಶುಪಾಲ ಶಿವರಾಜ್, ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸುಲೋಚನಾ.ಎನ್.ಕೆ. ಸೇರಿದಂತೆ ಹಲವು ಸಾಧಕ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಮಾಡಿ ಗೌರವಿಸಲಾಯಿತು.
– ಶ್ರೀನಿವಾಸ್ ಆರ್.
